• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚುನಾವಣೆಯ ಹೊತ್ತಿನಲ್ಲಿ ಬಿಜೆಪಿಗೆ ಹೇಳಿಕೊಳ್ಳಲು ವಿಷಯ ಕೊಟ್ಟ ಅಮಿತ್ ಶಾ!!

Hanumantha Kamath Posted On October 10, 2022


  • Share On Facebook
  • Tweet It

ನರೇಂದ್ರ ಮೋದಿ ಅಧಿಕಾರಾವಧಿಯ ಬಹಳ ಪ್ರಮುಖ ನಿರ್ಧಾರಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಫ್ರಂಟ್ ಒಂದನ್ನು ಬಿಟ್ಟು ಬೇರೆ ಎಂಟು ವಿವಿಧ ಸಂಘಟನೆಗಳನ್ನು ಬ್ಯಾನ್ ಮಾಡಿರುವುದು ಒಂದು ಮಹತ್ತರ ನಿರ್ಧಾರ ಎನ್ನುವುದು ನಿಜ. ಇದರಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದರೂ ಪಿಎಫ್ ಐ ಬ್ಯಾನ್ ಮಾಡಲಿಲ್ಲ ಎನ್ನುವ ತಮ್ಮದೇ ಕಾರ್ಯಕರ್ತರ ಅಸಮಾಧಾನವನ್ನು ಪರಿಹರಿಸಿದಂತಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಪಿಎಫ್ ಐ ಬ್ಯಾನ್ ಮಾಡಬೇಕೆಂಬ ಕೂಗು ದೊಡ್ಡಮಟ್ಟದಲ್ಲಿ ಕೇಳಿಬರುತ್ತಿತ್ತು. ಕಾಂಗ್ರೆಸ್ ಇದ್ದಾಗ ಈ ದೇಶದ್ರೋಹಿ ಸಂಘಟನೆಗಳಿಂದ ನಮ್ಮ 30 ಅಮಾಯಕ ಕಾರ್ಯಕರ್ತರ ಜೀವ ಹೋಗಿದೆ. ಆದರೆ ಕೇಂದ್ರ ಏನೂ ಕ್ರಮ ತೆಗೆದುಕೊಂಡಿಲ್ಲ, ಈಗಾದರೆ ನಾವು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎನ್ನುವ ಅಂಡರ್ ಕರೆಂಟ್ ಮೇಸೆಜ್ ತಳಮಟ್ಟದಿಂದ ಕೇಂದ್ರಕ್ಕೆ ಹೋಗಿತ್ತು. ಹಾಗೆ ಹೋದ ಸಂದೇಶವನ್ನು ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಬೆಲೆ ತೆರಬೇಕಾದಿತು ಎಂದು ಗೊತ್ತಿಲ್ಲದಷ್ಟು ದಪ್ಪ ಚರ್ಮದವರು ಬಿಜೆಪಿಯಲ್ಲಿ ಇಲ್ಲ ಎನ್ನುವುದು ನಿಜ. ಹಾಗೆ ಮೇಸೆಜ್ ಬರುತ್ತಿದ್ದಂತೆ ಏಕಾಏಕಿ ನಾಳೆಯಿಂದ ಪಿಎಫ್ ಐ ಬ್ಯಾನ್ ಎಂದು ಘೋಷಣೆ ಮಾಡಲು ಆಗುವುದಿಲ್ಲವಲ್ಲ. ಅದಕ್ಕಾಗಿ ಅಮಿತ್ ಶಾ ಮೊದಲು ದೋವಲ್ ಅವರನ್ನು ಕರೆಸಿಕೊಂಡು ಏನು ಮಾಡಬೇಕು ಎನ್ನುವುದರ ಬಗ್ಗೆ ಚರ್ಚಿಸಿದ್ದಾರೆ. ಮೊದಲಿಗೆ ಬೇಕಾಗಿರುವುದು ಪ್ರಬಲ ಸಾಕ್ಷ್ಯಗಳ ಸಂಗ್ರಹ. ಕೇಂದ್ರ ಗೃಹ ಇಲಾಖೆಗಳ ಬಳಿ ಈಗಾಗಲೇ ಸಾಕ್ಷ್ಯಗಳು ಸಾಕಷ್ಟಿವೆ. ಆದರೆ ಯಾವಾಗ ಈ ವರ್ಷದಲ್ಲಿ ಮೋದಿ ಬಿಹಾರದಲ್ಲಿ ಸಮಾವೇಶ ಮಾಡಲು ಹೊರಟರಲ್ಲ, ಆಗ ಅವರನ್ನು ಅಲ್ಲಿಯೇ ಹತ್ಯೆ ಮಾಡುವ ಸಂಚಿನ ಹಿಂದಿನ ಪ್ಲಾನ್ ಬಗ್ಗೆ ಕೇಂದ್ರಕ್ಕೆ ಸಿಕ್ಕಿರುವ ಮಾಹಿತಿಗಳು ಸಾಕಾಗಿರಲಿಲ್ಲ. ಅದರ ಜಾಡು ಹಿಡಿದು ಹೊರಟಿದ್ದು ರಾಷ್ಟ್ರೀಯ ತನಿಖಾ ದಳ.

ಎನ್ ಐಎ ಬಿಹಾರದಿಂದ ಹೊರಟು ಫರಂಗಿಪೇಟೆಯ ತನಕ ಬಂದರೋ ಅವರಿಗೆ ಸಿಕ್ಕಂತಹ ಮಾಹಿತಿಗಳು ಯಾವುದೇ ಸಂಘಟನೆಯನ್ನು ಕೂಡ ಬ್ಯಾನ್ ಮಾಡಲು ಸಾಕಾಗುವಷ್ಟಿದ್ದವು. ಪಿಎಫ್ ಐ ಒಂದು ಮಾತೃ ಸಂಘಟನೆಯಾಗಿದ್ದರೂ ಅದರ ಛತ್ರಿಯಡಿ ಹತ್ತಾರು ಅಣಬೆಗಳು ಬೆಳೆದಿರುವುದು ಮತ್ತು ಯಾವುದೇ ಒಂದು ವಿಧ್ವಂಸಕ ಕೃತ್ಯಗಳನ್ನು ಮಾಡುವಾಗ ಉಳಿದ ಸಂಘಟನೆಗಳ ಮುಖಂಡರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಕಾನೂನಾತ್ಮಕವಾಗಿ ಕೈ ಜೋಡಿಸುತ್ತಿರುವುದು ಕೂಡ ಪತ್ತೆಯಾಗಿದೆ. ಆದ್ದರಿಂದ ಕೇವಲ ಒಂದು ಸಂಘಟನೆಯನ್ನು ಮಾತ್ರ ಬ್ಯಾನ್ ಮಾಡಿದರೆ ಅದರ ನಾಯಕರು ಈ ಉಳಿದ ಪ್ರಮುಖ ಅಂಗಸಂಸ್ಥೆಗಳೊಂದಿಗೆ ಸೇರಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡಲು ಹೇಸುವುದಿಲ್ಲ ಎಂದು ಅರಿತು ಅದರೊಂದಿಗೆ ಮೋದಿಯ ಹತ್ಯಾ ಸಂಚಿನ ಹಿಂದಿರುವ ಉಳಿದ ಅಂಗಸಂಸ್ಥೆಗಳು ಶಾಮೀಲಾಗಿರುವ ಬಗ್ಗೆ ಖಡಕ್ ಮಾಹಿತಿ ಸಿಕ್ಕ ಕಾರಣ ಪಿಎಫ್ ಐ ಜೊತೆಗೆ ಅವು ಕೂಡ ಬ್ಯಾನ್ ಆಗಿದೆ. ಈಗ ಈ ಸಂಘಟನೆಗಳು ನಿಸ್ಸಂಶಯವಾಗಿ ನ್ಯಾಯಾಲಯದ ಬಾಗಿಲು ಬಡಿಯುತ್ತವೆ. ಆಗ ನ್ಯಾಯಾಲಯ ಈ ವಿಷಯದಲ್ಲಿ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಿ ನೀವು ಬ್ಯಾನ್ ಮಾಡಿರುವ ವಿಷಯಗಳನ್ನು ಸಾಬೀತುಪಡಿಸಿ ಎಂದು ಹೇಳಿ ಸಮಯ ಕೊಡುತ್ತದೆ. ಕೆಜಿ ಹಳ್ಳಿ, ಡಿಜೆ ಹಳ್ಳಿಯಿಂದ ಹಿಡಿದು ಸಿಎಎ ಸೇರಿಕೊಂಡು ಹಿಜಾಬ್ ಒಳಗೊಂಡು ಅನೇಕ ಹಿಂದೂ ಕಾರ್ಯಕರ್ತರ ಹತ್ಯೆ, ಹತ್ಯಾ ಯತ್ನ, ದೊಂಬಿ, ಗಲಭೆಯ ಹಿಂದೆ ಈ ಪಿಎಫ್ ಐ ಪಾತ್ರದ ಬಗ್ಗೆ ಪೂರಕವಾದ ಸಾಕ್ಷ್ಯಗಳನ್ನು ಸರಕಾರ ಒದಗಿಸಬೇಕಾಗುತ್ತದೆ. ಅದನ್ನೆಲ್ಲ ತಯಾರು ಮಾಡಿಕೊಂಡೆ ಈ ನಿಷೇಧದ ಪ್ರಕ್ರಿಯೆಗೆ ಸರಕಾರ ಮುಂದಾಗಲಿರುವುದು. ಯಾಕೆಂದರೆ ಒಂದು ವೇಳೆ ಕೇಂದ್ರ ಈ ವಿಷಯದಲ್ಲಿ ವಿಫಲವಾದರೆ ನಿಷೇಧ ರದ್ದು ಮಾಡಬೇಕಾದ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಹಾಗೆ ಆಗದ ರೀತಿಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಕೆಲಸವನ್ನು ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ನೋಡಿಕೊಂಡಿರುತ್ತಾರೆ. ಯಾವುದೇ ಒಂದು ಗಲಭೆ, ಹತ್ಯೆ, ವಿಧ್ವಂಸಕ ಕೃತ್ಯಗಳು ಒಂದು ರಾಜ್ಯದಲ್ಲಿ ಆದಾಗ ಅಲ್ಲಿಂದ ಕೇಂದ್ರ ಗೃಹ ಇಲಾಖೆ ಆಯಾ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯವರಿಂದ ವರದಿ ತರಿಸಿಕೊಳ್ಳುತ್ತದೆ. ಅಂತಹ ವರದಿಗಳ ಮೇಲೆ ತನಿಖೆ ನಡೆಯುತ್ತದೆ. ಅಂತಹ ದಾಖಲೆಗಳ ಭಂಡಾರವನ್ನು ಈಗ ತೆರೆದು ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ನಡುವೆ ಕೆಲವರು ಎಸ್ ಡಿಪಿಐಯನ್ನು ಕೂಡ ನಿಷೇಧ ಮಾಡಬೇಕು ಎನ್ನುವ ಮಾತುಗಳನ್ನು ಕೂಡ ಆಡುತ್ತಿದ್ದಾರೆ. ಎಸ್ ಡಿಪಿಐ ಒಂದು ರಾಜಕೀಯ ಪಕ್ಷವಾಗಿ ನೋಂದಾಯಿಸಿಕೊಂಡಿದೆ. ಅದನ್ನು ನಿಷೇಧ ಮಾಡುವುದು ಅಷ್ಟು ಸುಲಭವಲ್ಲ. ಅದರೊಂದಿಗೆ ಆ ಪ್ರಕ್ರಿಯೆಗಳು ಕೂಡ ಭಿನ್ನ. ಆದರೆ ಈಗಾಗಲೇ ರಾಜ್ಯ ಕಂದಾಯ ಸಚಿವರಾದ ಅಶೋಕ್ ಅವರು ಹೇಳಿರುವಂತೆ ಎಸ್ ಡಿಪಿಐ ಸದಸ್ಯರು ಎಲ್ಲೆಲ್ಲಿ ಗ್ರಾಮ, ಪಾಲಿಕೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಇಲ್ಲಿ ಅಧಿಕಾರದಲ್ಲಿದ್ದಾರೋ ಅವರ ಸ್ಥಾನಮಾನವನ್ನು ರದ್ದುಗೊಳಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ. ಇಂತಹ ಹೇಳಿಕೆಗಳು ರಾಜ್ಯ ಸರಕಾರದಿಂದ ಬರುವುದು ಸಾಮಾನ್ಯ. ಯಾವ ಸಚಿವರು ವಿಭಿನ್ನವಾಗಿ ಹೇಳಿಕೆ ನೀಡಿ ಮಾಧ್ಯಮಗಳಲ್ಲಿ ಮಿಂಚುವುದು ಹೇಗೆ ಎಂದು ಪ್ರಯತ್ನ ನಡೆಯುತ್ತದೆ ಬಿಟ್ಟರೆ ಯಾವ ದೇಶದ್ರೋಹಿ ಸಂಘಟನೆಯ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಬ್ಯಾಟರಿ ಇವರಿಗೆ ಇಲ್ಲ. ಇನ್ನು ಯು.ಟಿ.ಖಾದರ್ ಸೇರಿ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ಬೆಣ್ಣೆಯಿಂದ ಕೂದಲು ತೆಗೆಯುವ ಹಾಗೆ ಮಾತನಾಡಿದ್ದಾರೆ. ಎಲ್ಲಿ ಕೂಡ ಪಿಎಫ್ ಐಯನ್ನು ದೇಶದ್ರೋಹಿ ಸಂಘಟನೆ ಎಂದು ಹೇಳದೇ ಎಲ್ಲಾ ಇಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಹೇಳುತ್ತಾ ಪರೋಕ್ಷವಾಗಿ ಕೇಸರಿ ಸಂಘಟನೆಗಳಿಗೂ ಇದು ಅನ್ವಯವಾಗಬೇಕು ಎಂದು ಹೇಳಿದ್ದಾರೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search