ವೇದಿಕೆಯಲ್ಲಿ ನಿದ್ರೆಗೆ ಜಾರಿದ ದಕ್ಷಿಣ ಆಫ್ರಿಕಾ ಕಪ್ತಾನ!
ವಿಶ್ವಕಪ್ ಪಂದ್ಯಾವಳಿಯ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಒಂದಕ್ಕಿಂತ ಒಂದು ಆಶ್ಚರ್ಯಕರ ವಿದ್ಯಮಾನಗಳು ನಡೆಯುತ್ತಿವೆ. ಒಂದು ಕಡೆ ತಮ್ಮ ಸೋಲಿಗೆ ಕಳಪೆ ಫಿಲ್ಡಿಂಗ್ ಕಾರಣ ಮತ್ತು ಕಳಪೆ ಫಿಲ್ಡಿಂಗ್ ನಡೆಸಲು ಹೈದ್ರಾಬಾದ್ ಬಿರಿಯಾನಿ ನಿತ್ಯ ಸೇವಿಸುತ್ತಿರುವುದೇ ಎಂದು ಹೇಳಿಕೆ ನೀಡಿದ್ದರೆ ಇತ್ತ ಇನ್ನೊಂದು ಆಶ್ಚರ್ಯಕರ ವಿದ್ಯಮಾನ ನಡೆದಿದೆ. ಅಕ್ಟೋಬರ್ 4 ರಂದು ಗುಜರಾತಿನ ಅಹಮದಾಬಾದಿನಲ್ಲಿ ವಿಶ್ವಕಪ್ ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಕ್ಯಾಪ್ಟನ್ಸ್ ಮೀಟ್ ಆಯೋಜಿಸಲಾಗಿತ್ತು. ಎಲ್ಲಾ ತಂಡಗಳ ಕಪ್ತಾನರು ಸೇರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ವೇದಿಕೆಯ ಮೇಲೆ ನ್ಯೂಜಿಲ್ಯಾಂಡ್, ಶ್ರೀಲಂಕಾ, ಪಾಕಿಸ್ತಾನದ ಕಪ್ತಾನರೊಂದಿಗೆ ವೇದಿಕೆ ಹಂಚಿಕೊಂಡಿದ್ದ ದಕ್ಷಿಣ ಆಫ್ರಿಕಾ ಕಪ್ತಾನ ಟೆಂಬಾ ಬಾವುಮಾ ಕಾರ್ಯಕ್ರಮ ನಡೆಯುತ್ತಿದ್ದ ಹಾಗೆ ನಿದ್ರೆಗೆ ಜಾರಿದ್ದಾರೆ.
ಅವರು ವೇದಿಕೆಯಲ್ಲಿ ಕಿರುನಿದ್ದೆ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಕೆಲವರು ಅವರ ಬದ್ಧತೆಯನ್ನು ಪ್ರಶ್ನಿಸುತ್ತಿದ್ದರೆ ಇನ್ನು ಕೆಲವರು ಅತಿಯಾದ ಪ್ರಯಾಣದಿಂದ ಸುಸ್ತಾಗಿರಬಹುದು ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಕಪ್ತಾನ ಭಾರತಕ್ಕೆ ಬಂದು ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಮತ್ತೆ ಸ್ವದೇಶಕ್ಕೆ ತೆರಳಿದ್ದರು. ನಂತರ ಮತ್ತೆ ಭಾರತಕ್ಕೆ ಹಿಂದಿರುಗಿದ್ದರು. ಇದರಿಂದ ಅವರು ತಮ್ಮ ತಂಡವನ್ನು ಸರಿಯಾಗಿ ಭೇಟಿ ಮಾಡಲು ಆಗಿರಲಿಲ್ಲ. ಅದರೊಂದಿಗೆ ಮೊದಲೆರಡು ಪ್ರಾಕ್ಟೀಸ್ ಪಂದ್ಯಾಟಕ್ಕೂ ಅವರು ಲಭ್ಯವಿರಲಿಲ್ಲ. ದಕ್ಷಿಣ ಆಫ್ರಿಕಾದ ಮೊದಲ ಪಂದ್ಯ ದೆಹಲಿಯಲ್ಲಿ ನಡೆಯಲಿದೆ.
Leave A Reply