ತಮಿಳುನಾಡನ್ನು ಫಾಲೋ ಮಾಡಿತಾ ಸರಕಾರ!
ರಾಸಾಯನಿಕ ಇಲ್ಲದ ಕುಂಕುಮ, ಹಳದಿಯ ಸ್ಟಾಲ್ ವಿಧಾನಸೌಧದ ಹೊರಗೆ ಸಿದ್ದು ಹಾಕಲಿ!
ನೇರವಾಗಿ ರಾಜ್ಯ ಸರಕಾರದಿಂದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಪೂಜೆ, ಪುನಸ್ಕಾರ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದರೆ ಎಲ್ಲಿಯಾದರೂ ಹಿಂದೂಗಳು ಬೇಜಾರು ಮಾಡಬಹುದು ಎಂದು ಸಣ್ಣ ಹೆದರಿಕೆ ಇದ್ದಂತೆ ಕಾಣುತ್ತದೆ. ಹಾಗಂತ ಮುಸ್ಲಿಮರನ್ನು ಖುಷಿಪಡಿಸದೇ ಇರಲು ಆಗುತ್ತಾ? ವಿಧಾನಸೌಧ, ವಿಕಾಸ ಸೌಧ, ಸರಕಾರದ ಬಹುಮಹಡಿ ಕಟ್ಟಡಗಳಲ್ಲಿ ನಾಡಿದ್ದು ಆಯುಧಪೂಜೆಗೆ ಢೂಂ ಢಾಂ ಎಂದು ಸಂಭ್ರಮ ನಡೆದರೆ ಅದನ್ನು ನೋಡಿದ ಮುಸ್ಲಿಮರು ಎಲ್ಲಿಯಾದರೂ ಬೇಸರಗೊಳ್ಳುತ್ತಾರೋ ಎಂದು ರಾಜ್ಯ ಸರಕಾರಕ್ಕೆ ಅನಿಸಿದೆ. ಆದ್ದರಿಂದ ರಾಸಾಯನಿಕಯುಕ್ತ ಅರಿಶಿನ – ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಬಳಸುವಂತಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಯುಧಪೂಜೆಯ ಗೌಜಿ ಲಿಮಿಟಿನಲ್ಲಿ ಇರಲಿ ಎಂದು ಹೇಳಲಾಗಿದೆ. ಯಾಕೆಂದರೆ ನಾವು ಕುಂಕುಮ, ಅರಿಶಿನ ಖರೀದಿ ಮಾಡಲು ಅಂಗಡಿಗೆ ಹೋದಾಗ ಅದರಲ್ಲಿ ರಾಸಾಯನಿಕ ಹಾಕಿ ತಯಾರಿಸಲಾಗಿದೆಯೋ ಇಲ್ಲವೋ ಎಂದು ಗೊತ್ತಾಗಲು ಸಾಧ್ಯವಿಲ್ಲ. ಹಾಗಂತ ನಾವು ಅಂಗಡಿಯಿಂದ ಕಾಲು ಕೆಜಿ ಕುಂಕುಮ ಮತ್ತು ಹಳದಿ ತೆಗೆದುಕೊಂಡು ಅಲ್ಲಿ ಸಿದ್ರಾಮಯ್ಯನವರ ಮನೆಗೆ ಹೋಗಿ ಅವರಿಗೆ ತೋರಿಸಿ ಅವರು ಲ್ಯಾಬಿನವರಿಗೆ ಫೋನ್ ಮಾಡಿ ಒಬ್ಬರು ಕುಂಕುಮ ಮತ್ತು ಹಳದಿ ತೆಗೆದುಕೊಂಡು ಬರುತ್ತಾರೆ. ಅದನ್ನು ಚೆಕ್ ಮಾಡಿ ರಾಸಾಯನಿಕ ಇದೆಯೋ ಎಂದು ಹೇಳಿ ಎಂದು ಹೇಳಿದರೆ ನಾವು ಲ್ಯಾಬಿಗೆ ಹೋಗಿ ಅಲ್ಲಿ ಕೊಟ್ಟು ಕಾದು ಕುಳಿತುಕೊಂಡು ಬರಲು ಆಗುತ್ತಾ? ಇಲ್ಲವಲ್ಲ,
ಶುದ್ಧ ಕುಂಕುಮ, ಹಳದಿ ಪ್ರಚಾರ ಮಾಡಿದ ಸಿದ್ದುಗೆ ಧನ್ಯವಾದ!
ಆದ್ದರಿಂದ ಒಂದೋ ನಾವು ಈ ರವಿಶಂಕರ್ ಗುರೂಜಿಯವರ ಸಿರಿ ಅಥವಾ ಪತಂಜಲಿ ಅಥವಾ ಸನಾತನ ಸಂಸ್ಥೆಯವರ ಹಳದಿ, ಕುಂಕುಮವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಸ್ವಲ್ಪ ರೇಟ್ ಜಾಸ್ತಿ. ಆದರೆ ರಾಸಾಯನಿಕ ಇರುವುದಿಲ್ಲ. ಆದರೆ ಎಲ್ಲಾ ಅಂಗಡಿಯಲ್ಲಿ ಸಿಗುತ್ತಾ, ಇಲ್ವಾ ಎಂದು ನೋಡಬೇಕು. ಅಂತಹ ಅಂಗಡಿಯನ್ನು ಹುಡುಕಿ ಹೋಗಬೇಕು. ಹುಡುಕಿ ಹೋದ ನಂತರ ಅಲ್ಲಿ ಹಣ ಸ್ವಲ್ಪ ಹೆಚ್ಚಾದರೂ ತೆಗೆದುಕೊಂಡು ಬರಬೇಕಾಗುತ್ತದೆ. ಯಾರಿಗೆ ಅದು ಆಗಲಿಲ್ಲವೋ ಅವರು ಕುಂಕುಮ, ಹಳದಿ ಇಲ್ಲದೇ ಆಯುಧ ಪೂಜೆ ಮಾಡಬೇಕಾಗುತ್ತದೆ. ಇನ್ನು ಕೆಲವರು ರಾಸಾಯನಿಕ ಇದೆಯೋ, ಇಲ್ವೋ ಎಂದು ಹೆದರಿಯೇ ಹಳದಿ, ಕುಂಕುಮ ಖರೀದಿಸುವುದಿಲ್ಲ. ಇನ್ನು ಕೆಲವರು ನಮ್ಮಿಂದ ನೆಲದ ಮೇಲೆ ಕಲೆ ಉಳಿದರೆ ಏನು ಮಾಡುವುದು ಎಂದು ಯೋಚಿಸಿಯೇ ಆಯುಧ ಪೂಜೆ ಡ್ರಾಪ್ ಮಾಡುತ್ತಾರೆ. ಒಟ್ಟಿನಲ್ಲಿ ಹಿಂದೂಗಳನ್ನು ಹೆದರಿಕೆಯಲ್ಲಿಯೇ ಇಟ್ಟು ಸಿಂಪಲ್ಲಾಗಿ ಆಯುಧ ಪೂಜೆ ನಡೆದುಹೋಗಲಿದೆ.
ತಮಿಳುನಾಡನ್ನು ಫಾಲೋ ಮಾಡಿತಾ ಸರಕಾರ!
ಇಷ್ಟೆಲ್ಲಾ ಕಂಡೀಷನ್ ಹಾಕುವ ಬದಲು ಸಿದ್ಧರಾಮಯ್ಯನವರು ರಾಸಾಯನಿಕ ಇರುವ ಕುಂಕುಮ, ಹಳದಿ ಮಾರುವ ಅಂಗಡಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡಬಹುದಲ್ಲ. ಎಲ್ಲಕ್ಕಿಂತ ಬೆಸ್ಟ್ ಎಂದರೆ ವಿಧಾನಸೌಧದದಲ್ಲಿಯೇ ಒಂದು ಕೌಂಟರ್ ಇಟ್ಟು ವಿಧಾನಸೌಧ, ವಿಕಾಸ ಸೌಧ ಹಾಗೂ ಇಲಾಖೆಗಳ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆಗೆ ಬೇಕಾದ ಹಳದಿ, ಕುಂಕುಮ ಇಲ್ಲಿಯೇ ಖರೀದಿಸಿ ಎಂದು ಹೇಳಬಹುದಲ್ಲ. ಅದು ಬಿಟ್ಟು ಸನಾತನ ಧರ್ಮವನ್ನೇ ನಾಶ ಮಾಡ್ತೀನಿ ಎಂದು ಹೇಳುವ ಉದಯನಿಧಿ ಸ್ಟಾಲಿನ್ ಅವರ ರಾಜ್ಯದಲ್ಲಿ ಅಲ್ಲಿನ ಸರಕಾರ ಜಾರಿಗೆ ತಂದ ನಿಯಮವನ್ನು ಇಲ್ಲಿಗೆ ತರುವಂತಹ ಅಗತ್ಯ ಏನಿತ್ತು? ಹಾಗಂತ ರಾಜ್ಯ ಸರಕಾರ ಇದಕ್ಕೆ ಕೊಡುವ ಸಬೂಬು ಏನೆಂದರೆ ರಾಸಾಯನಿಕ ಇರುವ ಕುಂಕುಮ, ಹಳದಿ ಬಳಸಿ ರಂಗೋಲಿ ಹಾಕಿದರೆ, ಕುಂಬಳಕಯಿ ಒಡೆದರೆ ಅದರ ಕಲೆ ನೆಲದ ಮೇಲೆ ಉಳಿಯುತ್ತೆ. ವಿಧಾನಸೌಧದಲ್ಲಿ ಅದರ ಹಿಂದಿನ ಪರಂಪರೆಯನ್ನು ಉಳಿಸಬೇಕು ಎನ್ನುತ್ತಾರೆ. ಆದರೆ ಇದೇ ಸಚಿವರು ತಮ್ಮ ಕಚೇರಿಯ ಒಳಗೆ ವಾಸ್ತು ಸರಿ ಮಾಡಿಸಲು ಗೋಡೆ ಒಡೆಯುವುದು, ನೆಲದ ಟೈಲ್ಸ್ ಬದಲಾಯಿಸುವುದು ಎಲ್ಲಾ ಮಾಡುತ್ತಾರೆ? ಆಗ ಏನೂ ಆಗಲ್ವಾ?
Leave A Reply