42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
Posted On November 28, 2023
ಕಳೆದ ತಿಂಗಳು ನಡೆದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿಯಲ್ಲಿ 42 ಕೋಟಿ ರೂ ಮನೆಯಲ್ಲಿಟ್ಟು ಸಿಕ್ಕಿಬಿದ್ದಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಸಾವಿನ ಬಗ್ಗೆ ಅದೇ ಸಂಘಟನೆಯ ಅಧ್ಯಕ್ಷ ಕೆಂಪಣ್ಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಈ ಹತ್ಯೆಯ ಬಗ್ಗೆ ಅವರು ಪ್ರಮುಖವಾದ ಮಾಹಿತಿಯೊಂದನ್ನು ಮಾಧ್ಯಮಗಳಿಗೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಕೆಂಪಣ್ಣ ಅವರು, ಹಿಂದಿನ ಸರಕಾರದ ಸಚಿವರೂ ಮತ್ತು ಈಗ ಶಾಸಕರಾಗಿರುವ ಒಬ್ಬರಿಂದ ಅಂಬಿಕಾಪತಿಯವರಿಗೆ ಟಾರ್ಚರ್ ಆಗಿತ್ತು. ಅದರಿಂದಲೇ ಹೃದಯಾಘಾತಕ್ಕೆ ಒಳಗಾಗಿ ಅಂಬಿಕಾಪತಿ ನಿಧನ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಆ ಟಾರ್ಚರ್ ಹಾಗೂ ಈಗಿನ ಸರಕಾರ ಅವರನ್ನು ನಡೆಸಿಕೊಂಡ ರೀತಿಯಿಂದ ಅಂಬಿಕಾಪತಿ ತುಂಬಾ ನೊಂದಿದ್ದರು. ಜೊತೆಗೆ ಸಿಬಿಐ ತನಿಖೆ ಆದಾಗ ಉಂಟಾದ ಆಘಾತದಿಂದಾಗಿ ಅಂಬಿಕಾಪತಿಯವರಿಗೆ ಹೃದಯಾಘಾತ ಆಗಿದೆ ಎಂದು ಕೆಂಪಣ್ಣ ಹೇಳಿದ್ದಾರೆ.
- Advertisement -
Leave A Reply