• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಟಿಪ್ಪು ಮತ್ತೆ ರಾಜಕೀಯ ದಾಳವಾಗಲು ವಿಮಾನ ನಿಲ್ದಾಣ ನೆಪ!

Tulunadu News Posted On December 16, 2023
0


0
Shares
  • Share On Facebook
  • Tweet It

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡಬೇಕೋ ಅಥವಾ ಮೈಸೂರಿನ ಮಹಾರಾಜರ ಹೆಸರು ಇಡಬೇಕೋ ಎನ್ನುವುದರ ಬಗ್ಗೆ ರಾಜ್ಯದಲ್ಲಿ ಚರ್ಚೆ ಶುರುವಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಯಾವುದೇ ಒಂದು ಸರಕಾರಿ ಕಟ್ಟಡ ಅಥವಾ ನಿರ್ಮಾಣಕ್ಕೆ ಹೆಸರು ಇಡಲು ಕೇಂದ್ರ ಸರಕಾರದ ಅನುಮತಿ ಬೇಕು. ಅದು ವಿಮಾನ ನಿಲ್ದಾಣವಾಗಲಿ ಅಥವಾ ರೈಲ್ವೆ ನಿಲ್ದಾಣವಾಗಲಿ ಕೇಂದ್ರ ಸರಕಾರದ ಅನುಮತಿ ದೊರೆತ ಮೇಲೆಯೇ ಹೆಸರಿಡುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಯಾವ ಹೆಸರುಗಳನ್ನು ಇಡಬೇಕು ಎನ್ನುವುದರ ಬಗ್ಗೆ ರಾಜ್ಯ ಸರಕಾರ ಶಿಫಾರಸ್ಸು ಕಳುಹಿಸಿಕೊಡಬಹುದು. ಆ ಪ್ರಕಾರವಾಗಿ ಅಂತಿಮವಾಗಿ ರಾಜ್ಯ ಸರಕಾರ ಕಳುಹಿಸಿಕೊಟ್ಟಿರುವಂತಹ ಹೆಸರನ್ನು ಅಂತಿಮಗೊಳಿಸಬೇಕೆ ಅಥವಾ ಬೇರೆ ಹೆಸರು ಶಿಫಾರಸ್ಸು ಮಾಡುವಂತೆ ಸೂಚಿಸಬೇಕೆ ಎನ್ನುವುದು ಕೇಂದ್ರ ಸರಕಾರ ತೀರ್ಮಾನಿಸುತ್ತಾರೆ.

ರಾಜ್ಯದ ಕಾಂಗ್ರೆಸ್ ಸರಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಅಖೈರುಗೊಳಿಸಿ ಕಳುಹಿಸಿಕೊಟ್ಟಿದೆ. ಆದರೆ ಈ ಕುರಿತು ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿಯ ಶಾಸಕರ ನಡುವೆ ಆರೋಪ – ಪ್ರತ್ಯಾರೋಪಗಳು ಶುರುವಾಗಿದೆ.
ಮೈಸೂರಿನ ಮಹಾರಾಜರು ಮೈಸೂರಿನ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಅವರದ್ದೇ ಹೆಸರು ಇಡಬೇಕು ಎನ್ನುವುದು ಬಿಜೆಪಿಯ ಮುಖ್ಯ ಆಗ್ರಹ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಟಿಪ್ಪು ಹೆಸರನ್ನು ಕೇಂದ್ರ ಸರಕಾರ ಒಪ್ಪಿದರೂ ಲಾಭ, ಒಪ್ಪದಿದ್ದರೂ ಲಾಭ. ಅಂತಹ ಒಂದು ದಾಳವನ್ನು ಕಾಂಗ್ರೆಸ್ ಸರಕಾರ ಪ್ರಯೋಗಿಸಿದೆ. ಒಪ್ಪಿದರೆ ಈ ಹೆಸರು ಇಡಲು ನಾವೇ ಶಿಫಾರಸ್ಸು ಮಾಡಿದ್ದು ಎಂದು ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಿಸಿ ಖುಷಿಪಡಿಸಬಹುದು. ಅದೇ ಕೇಂದ್ರ ಒಪ್ಪದಿದ್ದಲ್ಲಿ ನಾವು ಶಿಫಾರಸ್ಸು ಮಾಡಿದ್ದೇವೆ. ಆದರೆ ಕೇಂದ್ರ ಒಪ್ಪಿಲ್ಲ. ನಮ್ಮ ಸರಕಾರ ಕೇಂದ್ರದಲ್ಲಿ ಬರುವಂತೆ ಮಾಡಿ. ಆಗ ಸುಲಭವಾಗಿ ನಮಗೆ ಬೇಕಾದ ಹೆಸರು ಇಡಬಹುದು ಎಂದು ಪ್ಲೇಟ್ ಬದಲಾಯಿಸಬಹುದು.

ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿರುವ ಹಳೆ ಮೈಸೂರು ಭಾಗದಲ್ಲಿ ಜಾತಿ ಸಮೀಕರಣವನ್ನು ಅಳೆದು ತೂಗಿ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ. ಆದರೆ ಇತ್ತೀಚೆಗೆ ಯಾವುದೇ ವಿವಾದಾತ್ಮಕ ವ್ಯಕ್ತಿಗಳ ಹೆಸರನ್ನು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಿಗೆ ಇಡಲು ಕೇಂದ್ರ ಅಷ್ಟು ಆಸಕ್ತಿ ತೊರುತ್ತಿಲ್ಲ. ಯಾಕೆಂದರೆ ಸುಮ್ಮನೆ ಕಾನೂನು ಪ್ರಕ್ರಿಯೆ, ಗಲಾಟೆ, ಪ್ರತಿಭಟನೆ ಎದುರಿಸುವುದು ಬೇಡಾ ಎನ್ನುವ ಅಭಿಪ್ರಾಯ ಕೂಡ ಅದರ ಹಿಂದಿದೆ. ಒಟ್ಟಿನಲ್ಲಿ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ಕಾಂಗ್ರೆಸ್ ಇಂತಹ ಒಂದು ಬಾಣ ಹೂಡಿರುವುದು ಮಾತ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search