ಮೈಸೂರಿನಿಂದ ಟಿಪ್ಪು ಹೊರತು, ಟಿಪ್ಪುವಿನಿಂದ ಮೈಸೂರು ಅಲ್ಲ!
ಹಳೆಯ ಇತಿಹಾಸಗಳು ಈಗ ಕೈ ಅಂಗಳದಲ್ಲಿ ಸಿಗುತ್ತದೆ. ಯಾವುದನ್ನು ಕೂಡ ಮುಚ್ಚಿಡಲು ಸಾಧ್ಯವಿಲ್ಲ. ಒಮ್ಮೆ ಮೈಸೂರಿನ ನಾಲ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ಟಿಪ್ಪುವಿನ ನಡುವಿನ ಸಾಧನೆಗಳನ್ನು ತುಲನೆ ಹಾಕಿ ನೋಡಿ. ಒಡೆಯರ್ ನ ಕಾಲಿನ ಧೂಳಿಗೂ ಸಮನಲ್ಲದ ಟಿಪ್ಪುವಿನ ಯೋಗ್ಯತೆ ತಿಳಿಯುತ್ತದೆ. ಮೈಸೂರಿಗೆ ಬಿಡಿ ಇಡೀ ಕರ್ನಾಟಕಕ್ಕೆ ಒಡೆಯರ ಬಹಳಷ್ಟು ಕಾಣಿಕೆಗಳು ಈಗಲೂ ನೆನಪಿಸಿಕೊಳ್ಳುವ ಮಟ್ಟಿಗೆ ಇದೇ. ಅದರಲ್ಲೂ ಬೆಂಗಳೂರಿನಿಂದ ಮೈಸೂರಿನ ತನಕದ ಜನರು ಬದುಕುತ್ತಿದ್ದಾರೆಂದರೆ ಅದು ಒಡೆಯರ ಪ್ರಯತ್ನದ ಫಲ.
ಮೋಸದಿಂದ ಕೈವಶ ಮಾಡಿಕೊಂಡಿದ್ದ ಮೈಸೂರು ರಾಜ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಬ್ರಿಟಿಷರೊಂದಿಗೆ ಹೋರಾಡಿದ ಟಿಪ್ಪು ಒಂದೆರಡು ದೇವಸ್ಥಾನಗಳಿಗೆ ದೇಣಿಗೆಯನ್ನು ಕೊಟ್ಟದ್ದು ಬಿಟ್ಟರೆ ಬೇರೆ ಸಾಧನೆಗಳು ಮಣ್ಣಂಗಟ್ಟಿಯೂ ಇಲ್ಲ. ಈತನ ಕತ್ತಿಯ ಕ್ರೌರ್ಯದ ಸಾಧನೆಗಳು ಇವತ್ತಿಗೂ ಉಳಿದಿವೆ ಬಿಟ್ಟರೆ, ನೆನಪಿಸಿಕೊಳ್ಳುವ ಮಟ್ಟಿಗೆ ಯಾವುದೇ ಸಾಧನೆಗಳನ್ನು ಮಾಡದ ದುರಂತ ನಾಯಕ. ಆದ್ದರಿಂದ ಆತ್ಮಸಾಕ್ಷಿಯಿದ್ದವ ಒಡೆಯರನ್ನು ಬಿಟ್ಟು ಟಿಪ್ಪುವನ್ನು ಒಪ್ಪಲು ಸಾಧ್ಯವೇ ಇಲ್ಲ.
ಕಡಿಮೆ ಎಂದರು 700 ವರ್ಷಗಳಿಂದಲೂ ಮೇಲ್ಪಟ್ಟು ಭಾರತವನ್ನು ಆಳಿದ ಅಹೋ0, ಚೋಳ ಇತ್ಯಾದಿ ರಾಜವಂಶಗಳನ್ನು ನಮ್ಮ ನೆನಪಿಗೂ ಬಾರದಂತೆ ಇತಿಹಾಸವನ್ನು ಬರೆದಿದ್ದಾರೆ. ರಾಮನ ಪರಂಪರೆ, ಕೃಷ್ಣನ ಪರಂಪರೆ ನಮಗೆ ಗೊತ್ತಿಲ್ಲ. ಆದರೆ ಅಕ್ಬರ್, ಟಿಪ್ಪುವಿನ ಪರಂಪರೆ ನಮಗೆ ಗೊತ್ತಿದೆ. ಹಾಗೆ ನಮ್ಮನ್ನು ಬೆಳೆಸಿದ್ದಾರೆ. ಹೀಗೆ ಬೆಳೆದ ದುರಂತದ ಪರಿಣಾಮ ನಮಗೆ ನಮ್ಮವರ ಮೇಲಿನ ಶ್ರದ್ಧೆಯೆ ಇಲ್ಲದಂತೆ ಆಗಿ ಹೋಗಿದೆ. ಭಾರತದ ವಸ್ತುಸ್ಥಿತಿಯ ವೈಭವವನ್ನು ಮರೆಮಾಚಿ ಇಲ್ಲದ ಕಥೆಗಳಿಂದ ನಮ್ಮನ್ನು ಯಾಮಾರಿಸಿದ ಒಳಸಂಚು ಈ ದೇಶದಲ್ಲಿ ನಮ್ಮ ನಡುವೆ ಈಗಲೂ ಕೆಲಸ ಮಾಡುತ್ತಲೇ ಇದೆ.
ಮೈಸೂರು, ಕೃಷ್ಣರಾಜ ಒಡೆಯರ ವಂಶಪಾರಂಪರೆಯ ತವರೂರು. ಉಳಿದ ಸಾಧನೆಗಳನ್ನೆಲ್ಲ ಬದಿಗಿಟ್ಟರೂ ಕೇವಲ ಇಷ್ಟು ಮಾತ್ರ ಸಾಕು ಅವರನ್ನು ನೆನಪಿಸಿಕೊಳ್ಳಲು. ಆದರೆ ಅದೆಲ್ಲವನ್ನು ಬಿಟ್ಟು, ಎಲ್ಲಿಯೋ ನೀರಿಲ್ಲದ ಊರಿಂದ ಗತಿಕೆಟ್ಟು ಬಂದ ಪಾಪಿಯ ಹೆಸರನ್ನು ಮೈಸೂರಿನ ವಿಮಾನ ನಿಲ್ದಾಣಕ್ಕೆ ಇಡಲು ಹೊರಟಿದ್ದಾರೆಂದರೆ ನಾವು ಅದೆಷ್ಟು ಅಧಃಪಾತಕ್ಕೆ ಇಳಿಯುತ್ತಿದ್ದೇವೆ ಎಂದು ಕಾಣಿಸದೆ ಇರುತ್ತದೆಯೇ.
ಇತ್ತೀಚಿಗೆ ದಸರಾದಲ್ಲಿ ದೇವಿಗಿಂತಲೂ ಮಹಿಷಾಸುರನನ್ನು ವೈಭವೀಕರಿಸಲಾಗಿತ್ತು.ಅಲ್ಲಿಯ ಪರಂಪರೆ, ಬಹುಸಂಖ್ಯಾತರ ನಂಬಿಕೆಹಾಗೂ ಶ್ರದ್ಧಾ ಕೇಂದ್ರದ ಆಚಾರ ವಿಚಾರಗಳಿಗೆ ಯಾವುದೇ ಕಿಮ್ಮಕ್ಕು ಕೊಡದ ಸರ್ಕಾರ ಇದಕ್ಕೆ ನೇರವಾಗಿ ಬೆಂಬಲ ಕೊಟ್ಟಿದ್ದು ನಮಗೆ ಗೊತ್ತೇ ಇದೆ. ಅಷ್ಟೇ ಅಲ್ಲದೆ ಮೊನ್ನೆ ಯಾರದೋ ಕಾಣದ ಕೈಗಳ ಪಿತೂರಿಗೆ ಒಳಗಾಗಿ ಹಿಂದೂ ಫೈರ್ ಬ್ರಾಂಡ್ ಮೈಸೂರು ಸಂಸದ ಪ್ರತಾಪ್ ಸಿಂಹನ ಹೆಸರಿನಲ್ಲಿ ಪಾಸು ತೆಗೆದುಕೊಂಡ ನಾಲಾಯಕ್ ಗಳು ಸಂಸತ್ ಭವನದಲ್ಲಿ ಅಹಿತಕರವಾದ ಘಟನೆಯನ್ನು ನಡೆಸಿ ದೇಶ ಮಟ್ಟದಲ್ಲಿ ಕೆಟ್ಟ ಹೆಸರು ಬರುವಂತೆ ನೋಡಿಕೊಂಡಿದ್ದಾರೆ. ಈಗ ಪುನಃ ಮೈಸೂರಿನ ವಿಮಾನ ನಿಲ್ದಾಣಕ್ಕೆ ಕೃಷ್ಣರಾಜ ಒಡೆಯರ ಬದಲಾಗಿ ಟಿಪ್ಪುವಿನ ಹೆಸರಿಡಲು ಚರ್ಚೆಗಳು ಏಳುತ್ತಿದೆ. ದಿನಗಳಂತೆ ಹೇಗಾದರೂ ಮಾಡಿ ಇಲ್ಲಿಯ ಹಿಂದುಗಳನ್ನು ಹಿಂದೂ ನಾಯಕರನ್ನು ಹಾಗೂ ಹಿಂದುತ್ವವನ್ನು ಮಣ್ಣು ಹಾಕಿ ಮುಚ್ಚಬೇಕು ಎಂದು ಪ್ರಯತ್ನ ಸಾಗುತ್ತಲೇ ಇದೆ.ಇದಕ್ಕೆ ಕೇವಲ ಪುನೀತ್ ಕೆರೆಹಳ್ಳಿಯವರ ಘಟನೆಗಳ ಸಾಕ್ಷಿ ಸಾಕು.
ಒಂದು ವೇಳೆ ಟಿಪ್ಪುವಿನ ಹೆಸರು ಒಪ್ಪಿಗೆಯಾಯಿತು ಎಂದಾದರೆ ಆಗಲಿ ಬಿಡಿ.ಇದರಿಂದ ಸ್ವಾಭಿಮಾನವನ್ನು ಬಿಟ್ಟು, ಕಳೆದುಕೊಳ್ಳಲು ಮತ್ತೇನು ಇಲ್ಲ.ಬೆಂಗಳೂರಿನಿಂದ ಹಿಡಿದು ಮೈಸೂರಿನ ತನಕ ನೀರು ಕುಡಿದ ಪ್ರತಿಯೊಬ್ಬನೂ ಕೂಡ ಒಡೆಯರನ್ನು ನೆನಪಿಸಿಕೊಳ್ಳಲೇಬೇಕು. ಅದನ್ನು ಬಿಟ್ಟು ಟಿಪ್ಪುವನ್ನು ನೆನೆಸಿಕೊಳ್ಳುತ್ತಿದ್ದಾರೆ ಎಂದರೆ ಅವರ ಕೃತಘ್ನತೆಯನ್ನು ಮೆಚ್ಚಲೇ ಬೇಕು.
ಎಲ್ಲಕ್ಕಿಂತಲೂ ಮಿಗಿಲಾಗಿ ಕೃಷ್ಣರಾಜ ಒಡೆಯರು ಮನಸು ಮಾಡಿದ್ದಿದ್ದರೆ, ತನ್ನ ರಾಜ್ಯವನ್ನು ಮೋಸದಿಂದ ಕಸಿದುಕೊಂಡು ತನ್ನ ಹಿರಿಯರನ್ನು ಬಂಧನದಲ್ಲಿಟ್ಟ ಪರಮ ಪಾಪಿಷ್ಠ ಹೈದರಾಲಿಯ ವಂಶವನ್ನು ನಿರ್ವಂಶ ಮಾಡಬಹುದಿತ್ತು. ಆದರೆ ಈ ನೆಲದ ಸಂಸ್ಕೃತಿಯಲ್ಲಿ ಅಂತಹ ಕ್ರೂರಿ ಮಕ್ಕಳು ಹುಟ್ಟಲು ಸಾಧ್ಯವಿಲ್ಲದ ಪರಿಣಾಮ ಒಡೆಯರ್ ಅದರ ಯೋಚನೆಯನ್ನೇ ಮಾಡಲಿಲ್ಲ.
ಏನೇ ಆಗಲಿ ಸಾಕಿ, ಸಲಹಿ,ಬೆಳೆಸಿದ ತಂದೆಯನ್ನು ಹಾಗೂ ತಂದೆಯ ಪರಂಪರೆಯನ್ನು ಮರೆತು, ತಂದೆಯನ್ನು ಹಾಗೂ ಪರಂಪರೆಯನ್ನು ಕೊಂದವನನ್ನು ನೆನೆಸಿಕೊಳ್ಳುವುದೆಂದರೆ ಅವರ ತಂದೆ ತಾಯಿಗಳು ಕೂಡ ಖಂಡಿತ ಮೆಚ್ಚುವುದಿಲ್ಲ. ಕೆಲಸದಿಂದ ವೋಟು ಗಿಟ್ಟಿಸಿಕೊಳ್ಳುವ ಯೋಗ್ಯತೆ ಇಲ್ಲದ ಖದೀಮರು ಮಾತ್ರ ಇಂತಹ ದುರಾಲೋಚನೆಗಳನ್ನು ಮಾಡಲು ಸಾಧ್ಯ. ಇಂತಹ ಓಲೈಕೆಯ ರಾಜಕಾರಣಿಗಳಿಗೆ ಧಿಕ್ಕಾರವಿರಲಿ..
Leave A Reply