ರಾಜಸ್ಥಾನದಲ್ಲಿ ಎಲ್ ಪಿಜಿ ಸಿಲೆಂಡರ್ ಇನ್ನು 450 ರೂ!
ರಾಜಸ್ಥಾನದ ನೂತನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಎಲ್ ಪಿಜಿ ಸಿಲೆಂಡರ್ ಅನ್ನು ತಲಾ 450 ರೂಪಾಯಿಗೆ ಇಳಿಸುವುದಾಗಿ ಘೋಷಿಸಿದ್ದಾರೆ. ಇನ್ನು ಮುಂದೆ ರಾಜಸ್ಥಾನದಲ್ಲಿ ಉಜ್ವಲ ಯೋಜನೆಯ ಸಿಲೆಂಡರ್ 450 ರೂಪಾಯಿಗೆ ದೊರಕಲಿದೆ. ಈ ಹೊಸ ದರ ಇದೇ ಜನವರಿ 1 2024 ರಿಂದ ಜಾರಿಗೆ ಬರಲಿದೆ.
ವಿಧಾನಸಭಾ ಚುನಾವಣೆಯ ಮೊದಲು ಭಾರತೀಯ ಜನತಾ ಪಾರ್ಟಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಅಧಿಕಾರಕ್ಕೆ ಬಂದ ತಕ್ಷಣ ಈಡೇರಿಸಿದೆ. ಬಿಜೆಪಿಯ ಸಂಕಲ್ಪ ಯಾತ್ರೆಯಲ್ಲಿ ಪ್ರತಿ ಸಿಲೆಂಡರ್ ಗೆ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದಲ್ಲಿ 450 ರೂಪಾಯಿ ಸಬ್ಸಿಡಿ ನೀಡಲಾಗುವುದು ಎಂದು ಬಿಜೆಪಿ ಪಕ್ಷ ಘೋಷಿಸಿತ್ತು. ಬಿಜೆಪಿ 450 ರೂಗೆ ಸಿಲೆಂಡರ್ ನೀಡುವ ಘೋಷಣೆಯ ಬೆನ್ನಿಗೆ ಚುನಾವಣೆಯ ಭರವಸೆಯಾಗಿ ಕಾಂಗ್ರೆಸ್ 400 ರೂಗೆ ನೀಡುವುದಾಗಿ ಹೇಳಿತ್ತು.
ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೇಹ್ಲೋಟ್ ಅವರು ಎಪ್ರಿಲ್ ನಲ್ಲಿ ಘೋಷಣೆ ಮಾಡುತ್ತಾ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ವರ್ಷ 12 ಸಿಲೆಂಡರ್ ಅನ್ನು ತಲಾ 500 ರೂಪಾಯಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಒಟ್ಟಿನಲ್ಲಿ ರಾಜಸ್ಥಾನದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಸುಮಾರು 76 ಲಕ್ಷ ಕುಟುಂಬಗಳು ಈ ಯೋಜನೆಯಿಂದ ಪ್ರಯೋಜನವನ್ನು ಪಡೆಯಲಿವೆ.
Leave A Reply