ಇವಿಎಂ ಬೇಡಾ ಎಂದವರಿಗೆ ಸುಪ್ರೀಂಕೋರ್ಟ್ ಇವತ್ತು ಹೇಳಿದ್ದು ಏನು?
ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರು ನಮ್ಮ ದೇಶ ಪೇಪರ್ ಬ್ಯಾಲೆಟ್ ಮತದಾನ ಪದ್ಧತಿಗೆ ಹಿಂದಿರುಗಬೇಕು ಎಂದು ವಾದ ಮಂಡಿಸಿದರು. ಇವಿಎಂಗಳಲ್ಲಿ ಚಲಾವಣೆಯ ಮತಗಳನ್ನು ವಿವಿಪ್ಯಾಟ್ ಸ್ಲಿಪ್ ಗಳೊಂದಿಗೆ ಕ್ರಾಸ್ ಚೆಕ್ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬ್ಯಾಲೆಟ್ ಪೇಪರ್ ಮತದಾನ ಪದ್ಧತಿಯಲ್ಲಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿತು.
ವಿವಿ ಪ್ಯಾಟ್ ವಿನ್ಯಾಸವನ್ನು ಬದಲಿಸಬೇಕಾಗಿದ್ದು, ಪಾರದರ್ಶಕ ಗಾಜನ್ನು ಹೊಂದಿರಬೇಕು. ಆದರೆ ಅದು ಈಗ ಅಪಾರದರ್ಶಕ ಗಾಜನ್ನು ಹೊಂದಿದ್ದು, ಒಳಗಡೆ ಬೆಳಕು ಆನ್ ಆದರೆ ಮಾತ್ರ ನಮಗೆ ವಿವಿಪ್ಯಾಟ್ ಸ್ಲಿಪ್ ಕಾಣುತ್ತದೆ ಎಂದ ಪ್ರಶಾಂತ್ ಭೂಷಣ ಅವರು ಇದೇ ವೇಳೆ ಜರ್ಮನಿಯ ಉದಾಹರಣೆಯನ್ನು ನೀಡಿದರು. ಈ ವೇಳೆ ನ್ಯಾಯಮೂರ್ತಿ ದೀಪಶಂಕರ್ ದತ್ತಾ ಜರ್ಮನಿಯ ಜನಸಂಖ್ಯೆ ಎಷ್ಟು ಎಂದು ಕೇಳಿದರು. ಆಗ ಪ್ರಶಾಂತ್ ಭೂಷಣ್ ಜರ್ಮನಿಯಲ್ಲಿ ಸುಮಾರು 6 ಕೋಟಿ ಮತದಾರರು ಮಾತ್ರ ಇದ್ದು, ಭಾರತದಲ್ಲಿ 50 ರಿಂದ 60 ಕೋಟಿ ಮತದಾರರಿದ್ದಾರೆ ಎಂದು ಹೇಳಿದರು.
ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ” ಭಾರತದಲ್ಲಿ 97 ಕೋಟಿ ಮತದಾರರು ನೋಂದಣಿಯಾಗಿದ್ದಾರೆ. ಬ್ಯಾಲೆಟ್ ಪೇಪರ್ ಗಳು ಇದ್ದಾಗ ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ” ಎಂದರು. ಅದರೊಂದಿಗೆ ಭಾರತದ ಚುನಾವಣೆಯನ್ನು ವಿದೇಶಗಳಲ್ಲಿನ ಮತದಾನದೊಂದಿಗೆ ಹೋಲಿಸಬೇಡಿ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ಅರ್ಜಿದಾರ ವಕೀಲರಿಗೆ ಹೇಳಿದರು. ನನ್ನ ತವರು ರಾಜ್ಯ ಪಶ್ಚಿಮ ಬಂಗಾಳದ ಜನಸಂಖ್ಯೆಯು ಜರ್ಮನಿಗಿಂತ ಹೆಚ್ಚಾಗಿದೆ. ನಾವು ಯಾರನ್ನಾದರೂ ಒಬ್ಬರನ್ನು ನಂಬಬೇಕು. ಈ ರೀತಿಯ ವ್ಯವಸ್ಥೆಯನ್ನು ಕೆಡವಲು ಪ್ರಯತ್ನಿಸಬೇಡಿ” ಎಂದು ತಿಳಿಸಿದರು.
Leave A Reply