ಸಂಪುಟ ಪುನಾರಚನೆ: ಕೇಂದ್ರದ ಮೂವರು ಸಚಿವರ ರಾಜೀನಾಮೆ
ದೆಹಲಿ: ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ಸಚಿವ ಕಲ್ರಾಜ್ ಮಿಶ್ರಾ, ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಸಂಜೀವ್ ಬಾಲ್ಯಾನ್, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆಯ ರಾಜ್ಯ ಸಚಿವ ರಾಜೀವ್ ಪ್ರತಾಪ್ ರೂಢಿ
ರಾಜೀನಾಮೆ ನೀಡಿದ್ದಾರೆ. ಶನಿವಾರ ಅಥವಾ ಭಾನುವಾರ ಕೇಂದ್ರ ಸಚಿವ ಸಂಪುಟ ಪುನಾರಚನೆ ನಡೆಯುವುದರಿಂದ ಮೂವರು ಸಚಿವರು ಗುರುವಾರ ರಾಜೀನಾಮೆ ನೀಡಿದ್ದಾರೆ. ಜೆಡಿಯು ಎನ್‌ಡಿಎ ಮಿತ್ರಪಕ್ಷವಾಗಿ ಸೇರ್ಪಡೆಯಾಗಿರುವುದರಿಂದ ಸಂಪುಟದಲ್ಲಿ ಸ್ಥಾಾ ಪಡೆಯಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸೇರಿ ಐವರು ಸಚಿವರಿಗೆ ಕರೆ ಮಾಡಿ, ಪ್ರಧಾನಿ ಮೋದಿ ಅವರು ಸಚಿವ ಸ್ಥಾಾನಕ್ಕೆ ರಾಜೀನಾಮೆ ಪಡೆಯಬಯಸಿರುವುದಾಗಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸಂಪುಟ ವಿಸ್ತರಣೆಯಾಗಲಿರುವುದರಿಂದ ಹೆಚ್ಚು ದಿನ ರಕ್ಷಣಾ ಸಚಿವರಾಗಿ ಇರುವುದಿಲ್ಲ ಎಂಬ ಸುಳಿವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿದ್ದರು. ಹೀಗಾಗಿ, ಜೇಟ್ಲಿ ನಿಭಾಯಿಸುತ್ತಿರುವ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆಯನ್ನು ಬೇರೊಬ್ಬರಿಗೆ ವಹಿಸುವ ಸಾಧ್ಯತೆ ಇದೆ.
Leave A Reply