ಸಪ್ತಪದಿ ತುಳಿದ ಟಗರು ಪುಟ್ಟಿ ಮಾನ್ವಿತಾ ಕಾಮತ್
ಮಂಗಳೂರಿನ ಕೆಲವು ಕೇಬಲ ವಾಹಿನಿಗಳಲ್ಲಿ ನಿರೂಪಕಿಯಾಗಿ ನಂತರ ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಾಯಕಿ ನಟಿಯಾಗಿ ಬೆಳೆದ ಮಾನ್ವಿತಾ ಕಾಮತ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಅವರು ಮೇ 1 ರಂದು ಮದುವೆಯಾಗುವ ಸುದ್ದಿ ಕೆಲವು ವಾರಗಳಿಂದ ಹರಿದಾಡುತ್ತಿತ್ತು. ಅನೇಕ ಸ್ಟಾರ್ ಗಳಿಗೆ ಅವರು ವೈಯಕ್ತಿಕವಾಗಿ ಭೇಟಿಯಾಗಿ ಮದುವೆ ಆಮಂತ್ರಣ ಪತ್ರವನ್ನು ಕೂಡ ನೀಡಿದ್ದರು. ಮೈಸೂರಿನ ಸಂಗೀತ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಮಾನ್ವಿತಾ ಕಾಮತ್ ವರಿಸಿದ್ದಾರೆ.
ಚಿಕ್ಕಮಗಳೂರಿನ ಕಳಸದಲ್ಲಿರುವ ಐನೂರು ವರ್ಷಗಳಷ್ಟು ಪುರಾತನ ಇತಿಹಾಸ ಪ್ರಸಿದ್ಧ ದೇವಸ್ಥಾನದಲ್ಲಿ ಮಾನ್ವಿತಾ ಹಾಗೂ ಅರುಣ್ ಸಪ್ತಪದಿ ತುಳಿದಿದ್ದಾರೆ. ಎರಡೂ ಕುಟುಂಬದ ಸದಸ್ಯರು, ಸಿನೆಮಾ ರಂಗದ ಗಣ್ಯರು, ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈಗಾಗಲೇ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ, ಸಂಗೀತ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.
ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಶಾಸ್ತ್ರದ ಪ್ರಕಾರ ಮದುವೆ ಕಾರ್ಯಗಳು ನಡೆದಿವೆ. ಇದು ಪಕ್ಕಾ ಆರೆಂಜ್ ಮ್ಯಾರೇಜ್ ಎಂದು ಮಾನ್ವಿತಾ ಈಗಾಗಲೇ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅವರ ಮದುವೆಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ.
Leave A Reply