ಬಿಜೆಪಿಗೆ ಬಹುಮತ ಬರದೇ ಇದ್ದರೆ ಅಮಿತ್ ಶಾ ಪ್ಲಾನ್ ಬಿ ಏನು?
ಪತ್ರಕರ್ತೆ ಸ್ಮಿತಾ ಪ್ರಕಾಶ್ ಅವರಿಗೆ ನೀಡಿದ ಸಂದರ್ಶನದಲ್ಲಿ ಒಂದು ವೇಳೆ ಭಾರತೀಯ ಜನತಾ ಪಾರ್ಟಿಗೆ ಬಹುಮತ ಬರದೇ ಇದ್ದರೆ ಪ್ಲಾನ್ ಬಿ ಎನ್ನುವ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಿದ್ದಾರೆ. ಬಹುಮತದ ಗಡಿಯನ್ನು ದಾಟದೇ ಹೋದರೆ ನಿಮ್ಮ ಬಳಿ ಪರ್ಯಾಯ ಏನಾದರೂ ಮಾರ್ಗಗಳಿವೆಯಾ ಎಂದು ಸ್ಮಿತಾ ಪ್ರಕಾಶ್ ಅವರು ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದಾರೆ.
ಅದಕ್ಕೆ ಅಮಿತ್ ಶಾ ” ಯಾವಾಗ ಪ್ಲಾನ್ ಎ ಯಶಸ್ವಿಯಾಗುವುದಿಲ್ಲ ಎನ್ನುವ ಅನುಮಾನ ಅರವತ್ತು ಶೇಕಡಾಗಿಂತ ಹೆಚ್ಚಿರುತ್ತದೆಯೋ ಆಗ ಪ್ಲಾನ್ ಬಿ ರೆಡಿ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ನಮಗೆ ಅಂತಹ ಯಾವ ಅನುಮಾನ ಕೂಡ ಇಲ್ಲ. ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದು ಶತ:ಸಿದ್ಧ. ಆದ್ದರಿಂದ ಪ್ಲಾನ್ ಬಿ ಹಾಕಲು ನಾವು ಹೋಗುವುದೇ ಇಲ್ಲ ” ಎಂದು ಉತ್ತರಿಸಿದ್ದಾರೆ.
ನಾಲ್ಕನೇ ಹಂತದ ಮತದಾನದ ನಂತರ ಬಿಜೆಪಿಯ ಲೆಕ್ಕಾಚಾರದ ಪ್ರಕಾರ ಬಿಜೆಪಿ ಬಹುಮತಕ್ಕೆ ಕೇವಲ ಎರಡು ಸೀಟು ಮಾತ್ರ ಕಡಿಮೆ ಹೊಂದಿದೆ. ಇನ್ನು ಮೂರು ಹಂತದ ಮತದಾನದ ಪ್ರಕ್ರಿಯೆ ಬಾಕಿ ಇದ್ದು ಬಿಜೆಪಿ ಸಹಿತ ಎನ್ ಡಿಎ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇಲ್ಲಿ ತನಕ ನಡೆದ ಒಟ್ಟು ನಾಲ್ಕು ಹಂತದ 380 ಸ್ಥಾನಗಳಲ್ಲಿ 270 ಸ್ಥಾನ ಬಿಜೆಪಿಗೆ ದೊರಕಿದೆ ಎನ್ನುವುದು ಅಮಿತ್ ಶಾ ದೃಢ ನಿಲುವು.
ಮೇ 20 ರಂದು ನಡೆದಿರುವ ಮತದಾನವನ್ನು ಸೇರಿಸಿ ಒಟ್ಟು ಮೂರು ಹಂತಗಳಲ್ಲಿ ನಡೆಯಲಿರುವ ಚುನಾವಣೆಯ ಲೆಕ್ಕಾಚಾರ ತೆಗೆದುಕೊಂಡರೆ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು
Leave A Reply