• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಿರೂಪಣೆಗೆ ಇನ್ನೊಂದು ಹೆಸರು ಅಪರ್ಣಾ! ಕಂಠದಲ್ಲಿಯೇ ಸರಸ್ವತಿ ವಾಸ…

Nag Shenoy Posted On July 12, 2024
0


0
Shares
  • Share On Facebook
  • Tweet It

ಅಪರ್ಣಾ ಮಾತನಾಡುತ್ತಾರೆ ಎಂದರೆ ಅದರಲ್ಲಿ ಇದ್ದದ್ದು ಶುದ್ಧ, ಸ್ಪಷ್ಟ, ನಿರರ್ಗಳ ಕನ್ನಡ. ಕನ್ನಡದ ಉಚ್ಚಾರಣೆಯ ಜೊತೆಗೆ ಅವರ ಆ ಕಂಠದಲ್ಲಿ ಇದ್ದಂತಹ ದೇವಸ್ವರವನ್ನು ಕನ್ನಡ ರಾಜ್ಯ ಬಹಳ ಕಾಲದ ತನಕ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಸರಸ್ವತಿ ಕಂಠದಲ್ಲಿಯೇ ನೆಲೆಸಿದರೆ ಹೇಗೆ ಇರುತ್ತದೆಯೋ ಹಾಗೆ ಇದ್ರು ಅಪರ್ಣಾ. ನಿರೂಪಣೆ ಎಂದರೆ ಏನು ಎನ್ನುವುದನ್ನು ಕಲಿಯಬೇಕಾದರೆ ಅದಕ್ಕೆ ಅಪರ್ಣಾ ಅವರೇ ವಿಶ್ವವಿದ್ಯಾನಿಲಯ. ಕಿರುಚುವುದು, ಶಬ್ದಗಳನ್ನು ಎಲ್ಲೆಲ್ಲಿಯೋ ಎಳೆದಾಡಿ ಅಪಮೌಲ್ಯಗೊಳಿಸುವುದೇ ನಿರೂಪಣೆ ಆಗಿರುವ ಈಗಿನ ಕಾಲಘಟ್ಟದಲ್ಲಿ ಅಪರ್ಣಾ ಯಾಕೋ ಮತ್ತೆ ಮತ್ತೆ ನೆನಪಾಗಲಿದ್ದಾರೆ. ಅವರ ಕನ್ನಡ ಕೇಳುವಾಗ ಅದರಲ್ಲಿ ತಣ್ಣಗಿನ ಗಾಳಿಯ ಆಹ್ಲಾದತೆ ಇತ್ತು. ಅವರು ಮಾತನಾಡುತ್ತಿದ್ದರೆ ಅದರಲ್ಲಿ ಭಾವಲಯಗಳು ಸಪ್ತಸ್ವರಗಳಾಗಿ ಮೇಳೈಸುತ್ತಿದೆಯೇನೋ ಎಂದು ಅನಿಸುತ್ತಿತ್ತು. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಇಲ್ಲದೆಯೋ ಅವರ ಧ್ವನಿಯಲ್ಲಿ ಅಪ್ಯಾಯಮಾನವಾದ ಝೇಂಕಾರವಿತ್ತು. ನಿರೂಪಣೆ ಎಂದರೆ ಇದು ಎಂದು ಯಾರಿಗಾದರೂ ಹೇಳಬೇಕಾದರೆ ಅಪರ್ಣಾ ಅವರನ್ನೇ ತೋರಿಸಬೇಕಾಗುತ್ತಿತ್ತು.

57 ಸಾಯುವ ವಯಸ್ಸಲ್ಲ. ಆದರೆ ಕನ್ನಡಿಗರಿಗೆ ಅವರ ಧ್ವನಿಯಿಂದ ಹೊಸ ಹೊಸ ವಿಷಯಗಳನ್ನು ಕೇಳಲು ಅವಕಾಶವಿಲ್ಲ ಎಂದು ಭಗವಂತ ಸಾರಿಬಿಟ್ಟಿದ್ದಾನೆ. ಈಗ ಏನಿದ್ದರೂ ಅವರು ಯಾವತ್ತೋ ಕೊಟ್ಟು ಹೋಗಿರುವ ಅವರ ಧ್ವನಿಯನ್ನೇ ಮೆಟ್ರೋದಲ್ಲಿಯೋ ಅಥವಾ ಹಿಂದೆ ರೆಕಾರ್ಡ್ ಮಾಡಿದ್ದ ವಿಡಿಯೋಗಳನ್ನೇ ಕೇಳಬೇಕಾಗಬಹುದೇನೋ. ಹಾಗಾದರೆ ಅಪರ್ಣಾ ವಸ್ತಾರೆ ತಮ್ಮ ಧ್ವನಿಯಿಂದ ಮಾತ್ರ ಪ್ರಖ್ಯಾತರಾಗಿದ್ದಾರಾ? ಇಲ್ಲ, ಅವರ ಒಳಗೆ ಒಬ್ಬಳು ಪ್ರಬುದ್ಧ ನಟಿ ಕೂಡ ಇದ್ದರು. ಮಸಣದ ಹೂವು ಸಿನೆಮಾದಿಂದ ಅವರು ಚಿತ್ರರಂಗವನ್ನು ಪ್ರವೇಶಿಸಿ ಕೆಲವು ಸಿನೆಮಾಗಳಲ್ಲಿ ನಟಿಸಿ, ನಂತರ ಧಾರವಾಹಿಗಳಿಗೆ ಎಂಟ್ರಿ ಕೊಟ್ಟು, ಕೊನೆಗೆ ಮಜಾ ಟಾಕೀಸ್ ನಂತಹ ಕಾರ್ಯಕ್ರಮಗಳಲ್ಲಿಯೂ ತಮ್ಮ ನಟನಾ ಸಾಮರ್ತ್ಯವನ್ನು ಒರೆಗಚ್ಚಿದರೂ ಅವರು ಅಂದಿನಿಂದ ಇಂದಿನವರೆಗೂ ಪ್ರತ್ಯೇಕವಾಗಿ ನಿಂತದ್ದೂ ತಮ್ಮ ನಿರೂಪಣಾ ಶೈಲಿಯಿಂದ.

ಅದಕ್ಕೆ ಮುಖ್ಯ ಕಾರಣ ಕನ್ನಡವನ್ನು ಅವರು ಉಚ್ಚರಿಸುತ್ತಿದ್ದ ರೀತಿ. ಎಂಭತ್ತರ ಪೂರ್ವಾರ್ಧ ಮತ್ತು ತೊಂಭತ್ತರ ಉತ್ತರಾರ್ಧದಲ್ಲಿ ದೂರದರ್ಶನದಲ್ಲಿ ನಿರೂಪಣೆಗೆ ಹೊಸ ಆಯಾಮವನ್ನು ನೀಡಿದ ಅಪರ್ಣಾ ಅವರು ನಂತರ ರಾಜ್ಯ ಸರಕಾರದ ಬಹುತೇಕ ಕಾರ್ಯಕ್ರಮಗಳಲ್ಲಿ ಮಹಿಳಾ ಉದ್ಘೋಷಕರು, ನಿರೂಪಕಿ ಬೇಕು ಎಂದಾದರೆ ಯಾವತ್ತೂ ಮೊದಲ ಆಯ್ಕೆಯಾಗಿರುತ್ತಿದ್ದರು. ಬಹುಶ: ಆ ಸ್ಥಾನ ತುಂಬಬಲ್ಲ ಮತ್ತೊರ್ವ ಮಹಿಳಾ ನಿರೂಪಕಿ ಕನ್ನಡದಲ್ಲಿ ಸದ್ಯಕ್ಕೆ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದು.

ಸಿಗ್ಧ ಸೌಂದರ್ಯ, ನಯ, ವಿನಯವಂತಿಕೆ, ಸರಳತೆ ಮತ್ತು ಭಾವುಕ ಮನಸ್ಸು ಒಟ್ಟು ಸೇರಿದರೆ ಅದು ಅಪರ್ಣಾ ಎನ್ನಬಹುದು. ಪುಟ್ಟಣ್ಣ ಕಣಗಾಲ್ ಅವರು ತಮ್ಮ ಕೊನೆಯ ನಿರ್ದೇಶನದ ಚಿತ್ರ ಮಸಣದ ಹೂವು ಇದಕ್ಕೆ ಅಪರ್ಣಾ ಅವರನ್ನು ಆಯ್ಕೆ ಮಾಡಬೇಕಾದರೆ ಆ ಮೇರು ನಿರ್ದೇಶಕ ಅಪರ್ಣಾ ಅವರಲ್ಲಿ ಕಂಡಿದ್ದು ಅಪ್ಪಟ ಕಲಾವಿದೆಯನ್ನು ಎನ್ನುವುದಕ್ಕೆ ಯಾವ ಸಂಶಯವೂ ಇಲ್ಲ.
ಇವತ್ತು ಮಾಧ್ಯಮಗಳು ಅಪರ್ಣಾ ನಿಧನದ ಸುದ್ದಿಯನ್ನು ನಿರಂತರವಾಗಿ ಪ್ರಸಾರ ಮಾಡುತ್ತಿದ್ದಾವೆ ಎಂದರೆ ಅವರ ಜನಪ್ರಿಯತೆ ಎಷ್ಟಿರಬಹುದು ಎನ್ನುವುದು ಅರ್ಥವಾಗುತ್ತದೆ. ಒಬ್ಬರು ನಿರೂಪಕಿ ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದ ಗುರುತನ್ನು ಬಿಟ್ಟು ಹೋಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಒಟ್ಟಿನಲ್ಲಿ ಅವರ ಭೌತಿಕ ದೇಹ ಈ ನೆಲದಿಂದ “ಮುಕ್ತ… ಮುಕ್ತ”ವಾಗಿತು…

0
Shares
  • Share On Facebook
  • Tweet It




Trending Now
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Nag Shenoy July 5, 2025
ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
Nag Shenoy July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
  • Popular Posts

    • 1
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 2
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 3
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 4
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • 5
      ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?

  • Privacy Policy
  • Contact
© Tulunadu Infomedia.

Press enter/return to begin your search