ನಿವೃತ್ತಿಯ ಹೊತ್ತಿನಲ್ಲಿ ಅಶ್ವಿನ್ ಸ್ಲಿಪ್ ನಲ್ಲಿ ನಿಲ್ಲುತ್ತಿದ್ದ ನಾಲ್ವರನ್ನು ಸ್ಮರಿಸಿದ್ದು ಯಾಕೆ?
ಭಾರತೀಯ ಆಫ್ ಸ್ಪಿನರ್ ಆರ್ ಅಶ್ವಿನ್ ಅವರು ಬಾರ್ಡರ್ – ಗವಾಸ್ಕರ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮಧ್ಯದಲ್ಲಿಯೆ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಾಟಗಳಿಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷ ಪ್ರಾಯದ ಅಶ್ವಿನ್ ಅವರ ಸಡನ್ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.
ಮೂರನೇ ಟೆಸ್ಟ್ ಪಂದ್ಯಾಟ ಮುಗಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅಶ್ವಿನ್ ಇನ್ನು ಮುಂದೆ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಾಟಗಳಿಂದ ತಾವು ನಿವೃತ್ತರಾಗುವುದಾಗಿ ಘೋಷಿಸಿದರು. ಅವರು ಒಟ್ಟು 106 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ ಒಟ್ಟು 537 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯಾದ ಗಬ್ಬಾದಲ್ಲಿ ಭಾರತ ತಂಡದ ಕಪ್ತಾನ ರೋಹಿತ್ ಶರ್ಮಾ ಅವರೊಂದಿಗೆ ಸುದ್ದಿಗೋಷ್ಟಿ ನಡೆಸಿ ತಮ್ಮ ನಿವೃತ್ತಿ ವಿಷಯವನ್ನು ಅವರು ಸ್ಪಷ್ಟಪಡಿಸಿದ್ದರು. ಸರಣಿಯ ಆರಂಭದಲ್ಲಿಯೇ ತಮಗೆ ಈ ಬಗ್ಗೆ ಸುಳಿವು ಇದ್ದಿರುವುದಾಗಿ ರೋಹಿತ್ ಕೂಡ ತಿಳಿಸಿದರು.
ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಮುಕ್ತಾಯ ಕಂಡ ಬಳಿಕ ಆರ್ ಅಶ್ವಿನ್ ಈ ವಿಷಯ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಮುಂದಿನ ಪಂದ್ಯಗಳಿಗೆ ಅಶ್ವಿನ್ ಭಾರತ ತಂಡದಲ್ಲಿ ಮುಂದುವರೆಯುವುದಿಲ್ಲ, ಅವರು ಡಿಸೆಂಬರ್ 19 ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿಸಿದರು. ” ಕ್ರಿಕೆಟಿನ ಎಲ್ಲಾ ರೀತಿಯ ಫಾರ್ಮೆಟ್ ಗಳಿಂದ ನಿವೃತ್ತಿ ಹೊಂದುತ್ತಿದ್ದೇನೆ. ನನ್ನಲ್ಲಿ ಒಂದಿಷ್ಟು ಕ್ರಿಕೆಟ್ ಉಳಿದಿದೆ ಎಂದು ನನಗೆ ಅನಿಸಿದೆ. ಅದನ್ನು ಬೇಕಾದರೆ ಕ್ಲಬ್ ಮಟ್ಟದ ಕ್ರಿಕೆಟ್ ನಲ್ಲಿ ಪ್ರದರ್ಶಿಸಬಹುದು. ಆದರೆ ಭಾರತದ ರಾಷ್ಟ್ರೀಯ ಪಂದ್ಯಾಟಕ್ಕೆ ಸಂಬಂಧಪಟ್ಟಂತೆ ಇದು ನನ್ನ ಅಂತಿಮ ಪಂದ್ಯ. ನಾನು ಭಾರತ ತಂಡದಲ್ಲಿ ಆಡುವಾಗ ಸಾಕಷ್ಟು ಸಂತೋಷವನ್ನು ಅನುಭವಿಸಿದ್ದೇನೆ. ರೋಹಿತ್ ಹಾಗೂ ಹಲವು ಸಹ ಆಟಗಾರರೊಂದಿಗೆ ಕಳೆದ ರಸನಿಮಿಷಗಳನ್ನು ಯಾವತ್ತೂ ಮರೆಯಲು ಆಗುವುದಿಲ್ಲ” ಎಂದು ಹೇಳಿದರು.
” ಖಂಡಿತವಾಗಿಯೂ ಅನೇಕರಿಗೆ ಧನ್ಯವಾದ ಹೇಳಲೇಬೇಕಾಗಿದೆ. ಆದರೆ ಮೊದಲಿಗೆ ಬಿಸಿಸಿಐ ಹಾಗೂ ಉಳಿದ ಆಟಗಾರರಿಗೆ ಮೊದಲಿಗೆ ಧನ್ಯವಾದ ಅರ್ಪಿಸುತ್ತೇನೆ. ರೋಹಿತ್, ವಿರಾಟ್, ಅಂಜಿಕ್ಯಾ, ಪೂಜಾರ ಇವರೆಲ್ಲಾ ಸ್ಲಿಪ್ ನಲ್ಲಿ ನಿಂತು ನನ್ನ ಕ್ಯಾಚುಗಳನ್ನು ಹಿಡಿದ ಕಾರಣ ನನಗೆ ಇಷ್ಟೊಂದು ವಿಕೆಟ್ ಕಬಳಿಸಲು ಸಾಧ್ಯವಾಯಿತು” ಅಶ್ವಿನ್ ತಮ್ಮ ಕಠಿಣ ಸ್ಪರ್ಧಿಯಾಗಿದ್ದ ಆಸ್ಟ್ರೇಲಿಯನ್ ಆಟಗಾರರಿಗೂ ಇದೇ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು. ಮಳೆಯಿಂದ ಡ್ರಾನಲ್ಲಿ ಮುಕ್ತಾಯಗೊಂಡ ಮೂರನೇ ಟೆಸ್ಟ್ ಪಂದ್ಯದ ಸಮಯದಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿಯನ್ನು ಆಲಿಂಗಿಸಿಕೊಂಡು ಧನ್ಯವಾದ ಅರ್ಪಿಸಿದ ಅಶ್ವಿನ್ ಅವರ ಈ ನಡೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರ ಸುಧೀರ್ಘ ಮಾತುಕತೆಯನ್ನು ನೋಡಿದವರಿಗೆ ಅಶ್ವಿನ್ ನಿವೃತ್ತಿ ಹೊಂದುವ ಬಗ್ಗೆ ಸಂಶಯ ಮೂಡಿತ್ತು. ಅದನ್ನು ನಿಜವಾಗಿದೆ
Leave A Reply