• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಡಿಕೆಶಿ ವಿದೇಶಕ್ಕೆ ಹೋದ ಬೆನ್ನಲ್ಲೇ ಜಾರಕಿಹೊಳಿ ಮನೆ ಫುಲ್ ಆಕ್ಟೀವ್ ಆಗಿದ್ದೇಕೆ?

Tulunadu News Posted On January 3, 2025


  • Share On Facebook
  • Tweet It

ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಬದಲಾವಣೆ ಆಗುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಸಿದ್ಧರಾಮಯ್ಯ ಬಣ ಫುಲ್ ಆಕ್ಟೀವ್ ಮೂಡ್ ಗೆ ಬಂದಿದೆ. ಈ ಬಾರಿ ಯಾರು ಅಧ್ಯಕ್ಷರಾಗುತ್ತಾರೋ ಅವರೇ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸುವ ಅವಕಾಶವನ್ನು ಪಡೆಯುತ್ತಾರೆ. ಇನ್ನು ಮೂರು ಕಾಲು ತಿಂಗಳ ಬಳಿ ವಿಧಾನಸಭಾ ಚುನಾವಣೆಗಳು ರಾಜ್ಯದಲ್ಲಿ ನಡೆಯಲಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಅವಧಿ ಮೂರು ವರ್ಷಗಳು. ಆದ್ದರಿಂದ ಏನೇ ಆದರೂ ಚುನಾವಣೆಗೆ ಮೂರು ತಿಂಗಳು ಇರುವಾಗ ಅಧ್ಯಕ್ಷರ ಬದಲಾವಣೆ ಆಗುವುದಿಲ್ಲ. ಇನ್ನು ಈ ಬಾರಿ ಹೊಸ ಅಧ್ಯಕ್ಷರು ಅಧಿಕಾರ ಸ್ವೀಕರಿಸುವಾಗಲೇ ಕೆಲವು ದಿನಗಳು ಕಳೆದು ಹೋಗಲಿವೆ. ಆದ್ದರಿಂದ ಇದು ರಾಜ್ಯ ಕಾಂಗ್ರೆಸ್ಸಿನ ಮಟ್ಟಿಗೆ ಬಹಳ ಪ್ರಾಮುಖ್ಯವಾದ ಘಟ್ಟ. ಯಾರ ಬಣದವರು ಅಧ್ಯಕ್ಷರಾಗುತ್ತಾರೋ ಅದರ ಮೇಲೆ ಅವರ ಬಣದವರ ಕೈ ಮೇಲಾಗುತ್ತದೆ. ಅಧಿಕಾರದಲ್ಲಿ ಸಚಿವರಾಗಿ ಇರುವುದು ಎಷ್ಟೇ ಮುಖ್ಯವೋ ಅಷ್ಟೇ ಮುಖ್ಯ ಅಧ್ಯಕ್ಷರು ಕೂಡ ತಮ್ಮದೇ ಬಣದವರು ಆಗಿರುವಂತದ್ದು. ಆದ್ದರಿಂದ ಹೊಸ ಅಧ್ಯಕ್ಷರ ನೇಮಕಕ್ಕೆ ದಿನಗಣನೆ ಆರಂಭವಾದಂತೆ ಸಿದ್ಧರಾಮಯ್ಯ ಬಣದಲ್ಲಿಯೂ ಕಾರ್ಯಚಟುವಟಿಕೆಗಳು ಗರಿಗೆದರಿವೆ.

ಸಿದ್ದು ಬಣದ ಪ್ರಮುಖ ಸೇನಾಧಿಪತಿ ಎಂದೇ ಬಿಂಬಿತರಾಗಿರುವ, ಡಿಕೆಶಿಯವರ ಪಾರಂಪರಿಕ ಹಿತಶತ್ರುಗಳ ಗುಂಪಿನ ಅಧಿನಾಯಕರಾಗಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿದ್ದು ಬಣದ ಏಳು ಸಚಿವರು ಮತ್ತು 35 ಶಾಸಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಈ ಸಭೆ ನಡೆಯುವಾಗ ಡಿಕೆ ಶಿವಕುಮಾರ್ ಹೊಸ ವರ್ಷಾಚರಣೆಯ ನಿಮಿತ್ತ ವಿದೇಶ ಪ್ರವಾಸದಲ್ಲಿರುವುದು ಕೂಡ ವಿಶೇಷ. ಈ ಸಭೆಗೆ ಸಿಎಂ ಸಿದ್ಧರಾಮಯ್ಯನವರು ಕೂಡ ಆಗಮಿಸಿದ್ದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನು ಹೊಸ ಅಧ್ಯಕ್ಷರೊಂದಿಗೆ ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನ ರಚನೆಯ ಬಗ್ಗೆ ಈ ಸಭೆಯಲ್ಲಿ ಚಿಂತನೆಯಾಗಿದೆ. ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಮೊದಲೇ ಉತ್ತರ ಸಿದ್ಧಪಡಿಸಿಕೊಂಡಂತೆ ಇದ್ದ ಈ ಸಭೆಯ ಮುಖಂಡರು ಇದು ಹೊಸ ವರ್ಷಾಚರಣೆಗೆ ನಡೆಸಿದ ಸಭೆಯೇ ಹೊರತು ಬೇರೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಕೆಲವು ತಿಂಗಳುಗಳ ಮೊದಲಿನ ತನಕ ಯಾರೂ ಅಷ್ಟೊಂದು ಉತ್ಸಾಹ ತೋರಿಸುತ್ತಿರಲಿಲ್ಲ. ಆದರೆ ಈಗ ಅಚಾನಕ್ ಆಗಿ ಕಾಂಗ್ರೆಸ್ ಅಧ್ಯಕ್ಷರಾಗಲು ಹಲವರಲ್ಲಿ ಉಮ್ಮೇದು ಕಾಣಿಸಲಾರಂಭಿಸಿದೆ. ಇನ್ನು ಪಕ್ಷ ಅಧಿಕಾರದಲ್ಲಿರುವುದರಿಂದ ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯ ಸಾಧಿಸುವ, ಎಲ್ಲಾ ಹಗರಣಗಳಿಗೆ ಸಮರ್ಥ ಉತ್ತರ ನೀಡಬಲ್ಲ ಮತ್ತು ವಿಪಕ್ಷಗಳ ಪಟ್ಟಿಗೆ ಹೊಸ ವರಸೆ ಹಾಕಬಲ್ಲ ವ್ಯಕ್ತಿಯ ಅವಶ್ಯಕತೆ ಈ ಬಾರಿ ಪಕ್ಷಕ್ಕೆ ಇದೆ.

ಇನ್ನು ಜಾತ್ಯಾತೀತ ಜನತಾದಳದಲ್ಲಿಯೂ ನಿಖಿಲ್ ಕುಮಾರಸ್ವಾಮಿಯವರಿಗೆ ಅವರ ಪಕ್ಷದ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಲು ದೇವೆಗೌಡರ ಕುಟುಂಬ ತೀರ್ಮಾನಿಸಿದ್ದು, ಕಾಂಗ್ರೆಸ್ಸಿನಲ್ಲಿಯೂ ಯುವ ಮತ್ತು ಅನುಭವಿ ಎರಡೂ ಸಮ್ಮಿಳಿತವಾಗಿರುವ ಅಧ್ಯಕ್ಷರ ಅಗತ್ಯ ಇದೆ. ಇನ್ನು ಹೊಸ ಅಧ್ಯಕ್ಷರು ಎರಡೂ ಬಣದವರಿಗೂ ಒಪ್ಪತಕ್ಕವರಾಗಿರಬೇಕು. ಅಂತವರು ಇದ್ದಾರಾ ಎಂದು ಹುಡುಕುವುದೇ ಒಂದು ಸವಾಲು. ಅದರೊಂದಿಗೆ ಜಾತಿ ಲೆಕ್ಕಾಚಾರ ಕೂಡ ಮಹತ್ವದ್ದಾಗಿರುತ್ತದೆ. ಯಾಕೆಂದರೆ ಸಿಎಂ ಕುರುಬ ಸಮುದಾಯಕ್ಕೆ ಸೇರಿದ ಕಾರಣ ರಾಜ್ಯದ ಇನ್ನೊಂದು ಪ್ರಬಲ ಸಮುದಾಯದವರಿಗೆ ರಾಜ್ಯಧ್ಯಕ್ಷ ಸ್ಥಾನ ನೀಡುವ ಅಗತ್ಯ ಇದೆ.

ಇನ್ನು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಯಡಿಯೂರಪ್ಪನವರಾಗಿರುವುದರಿಂದ ಅವರನ್ನು ಎದುರಿಸಲು ಅಷ್ಟೇ ಸಮರ್ತರಾಗಿರುವ ವ್ಯಕ್ತಿಯ ಅವಶ್ಯಕತೆ ಇದೆ. ಅದನ್ನೆಲ್ಲಾ ಅಳೆದು ತೂಗಿ ರಾಜ್ಯ ಕಾಂಗ್ರೆಸ್ಸಿಗೆ ಹೊಸ ಸಾರಥಿಯನ್ನು ರಾಷ್ಟ್ರೀಯ ಕಾಂಗ್ರೆಸ್ ನೇಮಿಸುತ್ತದೆಯಾ ಎನ್ನುವುದಕ್ಕೆ ಸಂಕ್ರಾತಿಯ ನಂತರ ಉತ್ತರ ಸಿಗುತ್ತದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search