17 ಹಲ್ಲು ಬಿತ್ತು.. ವಿದ್ಯಾರ್ಥಿ ಆತ್ಮಹತ್ಯೆ!
Posted On March 26, 2025
0

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪ್ರತಿಭಾವಂತ ಯುವಕನ ಹೆಸರು ವಿಘ್ನೇಶ್. ಕೊಪ್ಪ ಸಮೀಪದ ಹರಂದೂರು ಗ್ರಾಮದಲ್ಲಿ ಪ್ರಥಮ ವರ್ಷದ ಐಟಿಐ ಓದುತ್ತಿದ್ದ. ನಾಲ್ಕು ವರ್ಷದ ಹಿಂದೆ ಇವನಿಗೆ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಈತನ 17 ಹಲ್ಲುಗಳು ಬಿದ್ದು ಹೋಗಿವೆ. ಅದರ ನಂತರ ಆ 17 ಹಲ್ಲುಗಳನ್ನು ಹೊಂದಿಸಲು ಆಗಾಗ ಆಸ್ಪತ್ರೆಗೆ ಹೋಗಿ ಬರುತ್ತಿದ್ದ.
ಹಲ್ಲಿನ ಸೆಟ್ ಅಳವಡಿಸುವ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಅದು ಸರಿಯಾಗಿ ಹೊಂದಿಕೆ ಆಗದೇ ಯುವಕ ನೋವನ್ನು ತಿನ್ನುತ್ತಾ ಇದ್ದ. ಒಂದು ಕಡೆ ನೋವು ಮತ್ತೊಂದೆಡೆ ಯಾವ ಸೆಟ್ ಕೂಡ ಸರಿಯಾಗಿ ಅಳವಡಿಕೆಯಾಗದ ಚಿಂತೆ. ಇದರಿಂದ ನೊಂದಿದ್ದ ವಿಘ್ನೇಶ್ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಒಂದು ಅಪಘಾತ ನಾಲ್ಕು ವರ್ಷದ ನಂತರ ಂ8 ವರ್ಷದ ವಿದ್ಯಾರ್ತಿಯ ಬಾಳನ್ನು ಹೇಗೆ ಅಂತ್ಯಕ್ಕೆ ದೂಡಿತು ಎನ್ನುವುದೇ ವಿಪರ್ಯಾಸ.
Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
August 30, 2025