ಮೋದಿಯನ್ನು ಭೇಟಿಯಾಗಿ ವಕ್ಫ್ ತಿದ್ದುಪಡಿ ಬಗ್ಗೆ ಧನ್ಯವಾದ ಹೇಳಿದ ಮುಸ್ಲಿಂ ನಿಯೋಗ!

ಮುಸ್ಲಿಂ ಸಮುದಾಯದ ದಾವೂದಿ ಬೋಹ್ರಾ ಸಮಾಜದ ಮುಖಂಡರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ವಕ್ಫ್ ತಿದ್ದುಪದಿ ಮಸೂದೆಗೆ ಧನ್ಯವಾದ ಅರ್ಪಿಸಿದರು. ತಮ್ಮ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಅವರು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಅಭಿಪ್ರಾಯ ಹಂಚಿಕೊಂಡ ಮೋದಿಯವರು ವಕ್ಫ್ ಕಾಯಿದೆಯಲ್ಲಿ ಹಿಂದೆ ಇದ್ದ ಜಟಿಲತೆಯನ್ನು ತಾವು ಕಳೆದ ಐದು ವರ್ಷಗಳಿಂದ ಅಧ್ಯಯನ ಮಾಡಿರುವುದಾಗಿ ಹೇಳಿದರು. ಸರಕಾರದ ಬಳಿ ಹಿಂದಿನ ವಕ್ಫ್ ಕಾಯಿದೆಯಿಂದ ತೊಂದರೆಗೆ ಒಳಗಾದ ನಾಗರಿಕರ ಸುಮಾರು 1700 ದೂರುಗಳು ಬಂದಿದ್ದು, ವಿಶೇಷವಾಗಿ ಮಹಿಳೆಯರು ಈ ಹಿಂದಿನ ಕಾಯ್ದೆಯಿಂದ ಸಮಸ್ಯೆ ಅನುಭವಿಸುತ್ತಿದ್ದರು ಎಂದು ಮೋದಿ ವಿಷಯ ಹಂಚಿಕೊಂಡರು. ನಿಯೋಗದಲ್ಲಿದ್ದ ಮುಖಂಡರೊಬ್ಬರು ಮಾತನಾಡಿ ಈ ವಕ್ಫ್ ತಿದ್ದುಪಡಿ ಕಾಯಿದೆಯಾಗಿ ಜಾರಿಗೆ ಬಂದ ನಂತರ ಅಲ್ಪಸಂಖ್ಯಾತರಲ್ಲಿರುವ ಅಲ್ಪಸಂಖ್ಯಾತರ ಏಳಿಗೆಗೆ ತುಂಬಾ ಅನುಕೂಲಕರವಾಗುತ್ತದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿಯವವರು ವಕ್ಫ್ ವಿಚಾರದಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡುವ ಮೂಲಕ ಆ ಸಮುದಾಯಕ್ಕೆ ಅದರ ಪ್ರಯೋಜನ ಸಿಗಬೇಕು ಎನ್ನುವ ಕಾರಣಕ್ಕೆ ಕೆಲವು ತಿದ್ದುಪಡಿ ತರಬೇಕಾಯಿತು ಎಂದು ಹೇಳಿದರು.
ನಂತರ ತಮ್ಮ “ಏಕ್ಸ್ ” ಅಭಿಪ್ರಾಯ ಹಂಚಿಕೊಂಡ ಪ್ರಧಾನಿ ದಾವೂದಿ ಬೋಹ್ರಾ ಸಮುದಾಯದ ನಿಯೋಗದೊಂದಿಗೆ ನಡೆಸಿದ ಮಾತುಕತೆ ತುಂಬಾ ಖುಷಿ ನೀಡಿತು ಎಂದು ಹೇಳಿದ್ದಾರೆ. ನಾವು ಆ ಸಮುದಾಯದ ಏಳಿಗೆಗೆ ಅಗತ್ಯ ಇರುವ ವಿವಿಧ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದೆವು ಎಂದು ತಿಳಿಸಿದ್ದಾರೆ.
ನಿಯೋಗದೊಂದಿಗೆ ಜೊತೆಗೂಡಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ” ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ನಿಜವಾದ ಅರ್ಥದಲ್ಲಿ ಜಾರಿಗೆ ಬರುತ್ತಿದೆ. ಈ ಮೊದಲು ಜಂಟಿ ಸಂಸದೀಯ ಮಂಡಳಿಯ ಸಭೆಯಲ್ಲಿ ಶಿಯಾ ಮುಸ್ಲಿಮರಲ್ಲಿಯೇ ಸಣ್ಣ ಸಮುದಾಯವಾಗಿರುವ ದಾವೂದಿ ಬೋಹ್ರಾ ಸಮಾಜದ ಪರವಾಗಿ ಹರೀಶ್ ಸಾಳ್ವೆಯವರು ಭಾಗವಹಿಸಿದ್ದರು. ಆ ಸಮುದಾಯದ ಅಭಿಪ್ರಾಯಗಳನ್ನು ಒಳಗೊಂಡು ಈ ಹೊಸ ತಿದ್ದುಪಡಿ ಮಸೂದೆ ತಯಾರಿಸಲಾಗಿತ್ತು. ಅವರ ಅನೇಕ ಬೇಡಿಕೆಗಳನ್ನು ಸೇರಿಸಿದ ಕಾರಣ ಆ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
Leave A Reply