• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಿಂದೂತ್ವ ಬೆಂಬಲಿಸಿದ್ದೇ ದಾಳಿಗೆ ಕಾರಣ – ವಾದ್ರಾ ಹೇಳಿಕೆ

Tulunadu News Posted On April 24, 2025
0


0
Shares
  • Share On Facebook
  • Tweet It

ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದಾಳಿ ನಡೆದು 26 ಜನರು ಮೃತಪಟ್ಟ ಘಟನೆಯ ವಿಚಾರದಲ್ಲಿ ಇಡೀ ದೇಶ ಶೋಕತಪ್ತವಾಗಿದೆ. ಈ ವಿಷಯದಲ್ಲಿ ವಾಹಿನಿಯೊಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರ ಬಳಿ ಅಭಿಪ್ರಾಯ ಕೇಳಿದೆ. ಈ ಬಗ್ಗೆ ಮಾತನಾಡಿದ ವಾದ್ರಾ ಪಹಲ್ಗಾಂ ಉಗ್ರದಾಳಿ ಹಾಗೂ ಸರಕಾರದ ಹಿಂದೂತ್ವವಾದಕ್ಕೆ ನೇರ ಸಂಬಂಧವಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹಿಂದೂತ್ವವನ್ನು ಬೆಂಬಲಿಸುತ್ತಿರುವ ಕಾರಣದಿಂದ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರಿಗೆ ತಾವು ದುರ್ಬಲರಾದಂತೆ ಭಾಸವಾಗುತ್ತಿದೆ. ಹಿಂದೂ – ಮುಸ್ಲಿಮರ ನಡುವೆ ಒಡಕು ಸೃಷ್ಟಿಯಾಗಿದೆ. ಆದ್ದರಿಂದಲೇ ಪ್ರವಾಸಿಗರ ಗುರುತು ನೋಡಿ ಉಗ್ರರು ದಾಳಿ ನಡೆಸಿದರು. ಇದು ಪ್ರಧಾನಿ ಮೋದಿ ಅವರಿಗೆ ನೀಡಿದ ಸಂದೇಶ ಎಂದು ವಾದ್ರಾ ಹೇಳಿದ್ದಾರೆ.

ಈ ನಡುವೆ ಸೇನೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೊಸ ನೇಮಕಾತಿ ಆಗದಿದ್ದ ಕಾರಣ ಯೋಧರ ಕೊರತೆಯಿಂದ ಈ ಘಟನೆ ಸಂಭವಿಸಿದೆ ಎಂದು ಮಾಜಿ ಸೇನಾಧಿಕಾರಿ ಜಿಡಿ ಭಕ್ಷಿ ಹೇಳಿದ್ದಾರೆ. ಇದು ಸರಿಯಲ್ಲ. ಆ ಸೂಕ್ಷ್ಮ ಪ್ರದೇಶದಲ್ಲಿ ಯೋಧರ ನಿಯುಕ್ತಿ ಅಗತ್ಯವಾಗಿತ್ತು. ಆದರೆ ಈಗ ವಿಸ್ತ್ರತ ಪ್ರದೇಶದಲ್ಲಿ ಯೋಧರು ರಕ್ಷಣೆಯಲ್ಲಿ ತೊಡಗಬೇಕಾಗಿರುವುದರಿಂದ ಅವರಿಗೆ ಎಲ್ಲಾ ಪ್ರದೇಶದಲ್ಲಿ ಗಸ್ತು ತಿರುಗುವುದು ಕಷ್ಟಸಾಧ್ಯ. ಆದ್ದರಿಂದ ಇಂತಹ ಘಟನೆ ನಡೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಕಾಂಗ್ರೆಸ್ ಮುಖಂಡರು ಇದು ಕೇಂದ್ರ ಸರಕಾರದ ಭದ್ರತಾ ವೈಫಲ್ಯ, ಆಂತರಿಕ ಗುಪ್ತಚರ ಇಲಾಖೆ ವೈಫಲ್ಯ ಎಂದು ಹೇಳಿಕೆ ನೀಡುತ್ತಿದ್ದಾರೆ. ನಿನ್ನೆಯ ತನಕ ವ್ಯಾಪಾರ ವ್ಯವಹಾರಗಳಿಂದ ಕಳೆಗಟ್ಟಿದ್ದ ಲಾಲ್ ಚೌಕದಲ್ಲಿ ಈಗ ಎಲ್ಲವೂ ಬಂದ್ ಆಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಜಮ್ಮು – ಕಾಶ್ಮೀರದ ಮಾಜಿ ಡಿಜಿಪಿ ಎಸ್ ವೈದ್ಯ ಅವರು ಮಾತನಾಡುತ್ತಾ, ಇದು ಒಂದು ರೀತಿಯಲ್ಲಿ ಫುಲ್ವಾಮಾ – 2 ದಾಳಿಯಂತೆ ಆಗಿದೆ. ಇದು ಯಾವುದೇ ಅಚಾನಕ್ ಆಗಿರುವಂತಹ ಘಟನೆಯಲ್ಲ. ಇದೊಂದು ವ್ಯವಸ್ಥಿತವಾಗಿರುವ ಯೋಜನೆಯಿಂದ ಮಾಡಿರುವಂತದ್ದು ಎಂದು ಹೇಳಿದ್ದಾರೆ

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search