• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: “ನೀನಿಲ್ಲದೆ….. ” ಶುಭಾಂಶು ಹೇಳಿದ್ದೇನು?

TULUNADU NEWS Posted On June 26, 2025
0


0
Shares
  • Share On Facebook
  • Tweet It

ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಗಗನಯಾತ್ರಿ ಶುಭಾಂಶು ಶರ್ಮಾ ತಮ್ಮ ಮುದ್ದಿನ ಮಡದಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಶುಭಾಂಶು ಅವರ ಪತ್ನಿಯ ಹೆಸರು ಕಾಮ್ನಾ. ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಪತ್ನಿ ಕಾಮ್ನಾ ಶುಕ್ಲಾ ಅವರನ್ನು ಉಲ್ಲೇಖಿಸಿ ” ಕಾಮ್ನಾ ನೀನು ಅತ್ಯದ್ಭುತ ಸಂಗಾತಿ.. ನೀನಿಲ್ಲದೇ ಈ ಸಾಧನೆ ಮಾಡೋದಕ್ಕೆ ಆಗ್ತಾ ಇರಲಿಲ್ಲ. ನೀನಿಲ್ಲದೇ ಇದ್ಯಾವುದಕ್ಕೂ ಅರ್ಥವಿರುತ್ತಿರಲಿಲ್ಲ” ಎಂದು ಶುಕ್ಲಾ ಹೇಳಿದ್ದಾರೆ. ಅವರ ಈ ಪೋಸ್ಟ್ ಓದುಗರಲ್ಲಿ ನಿಜಕ್ಕೂ ಪತಿ-ಪತ್ನಿಯ ಸಂಬಂಧದ ಮಹತ್ವವನ್ನು ಸಾರಿ ಹೇಳುತ್ತಿದೆ.

ಇನ್ನು ಮುಂದುವರೆದು ಬರೆದಿರುವ ಶುಭಾಂಶು ” ಹಲವು ಅಡೆತಡೆ ಮಧ್ಯದಲ್ಲಿ ಜೂನ್ 25 ರಂದು ಮುಂಜಾನೆ ಈ ಭೂಮಿಯನ್ನು ತೊರೆದು ಬಾಹ್ಯಾಕಾಶದತ್ತ ತೆರಳಲು ನಿರ್ಧರಿಸಿದ್ದೇನೆ. ಈ ಆಕ್ಸಿಯಮ್-4 ಯೋಜನೆಗಾಗಿ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನನ್ನು ಹರಸಿದ ಮತ್ತು ಪ್ರೀತಿಸಿದ ನನ್ನ ದೇಶದ ಜನರಿಗೂ ಧನ್ಯವಾದ ” ಎಂದು ಬರೆದುಕೊಂಡಿದ್ದಾರೆ.
“ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಹೆಚ್ಚು ಚಿರ ಋಣಿ. ಸದ್ಯ ನಾವ್ಯಾರು ಬಾಹ್ಯಾಕಾಶಕ್ಕೆ ಒಬ್ಬಂಟಿಯಾಗಿ ಹೋಗುತ್ತಿಲ್ಲ. ನಿಮ್ಮೆಲ್ಲರ ಬೆಂಬಲದ ಜೊತೆಗೆ ಹೊರಟಿದ್ದೇವೆ. ಇದಕ್ಕೆ ನಾನು ಪ್ರತಿಯೊಬ್ಬರಿಗೂ ಕೃತಜ್ಞನಾಗಿದ್ದೇನೆ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಸಂದೇಶದೊಂದಿಗೆ ಶುಭಾಂಶು ಶುಕ್ಲಾ ಅವರು ಹಂಚಿಕೊಂಡಿರುವ ಫೋಟೋ ಕೂಡ ಅರ್ಥಗರ್ಭಿತವಾಗಿದೆ. ಗಾಜಿನ ಗೋಡೆಯ ಮೇಲೆ ಇನ್ನೊಂದು ಬದಿಯಲ್ಲಿ ಶುಭಾಂಶು ಹಸ್ತವಿದ್ದರೆ, ಇತ್ತ ಪತ್ನಿ ಕಾಮ್ನಾ ಅವರು ತಮ್ಮ ಕೈ ಇಟ್ಟ ಕಡೆ ತಮ್ಮ ಹಣೆಯನ್ನು ತಾಗಿಸಿದ್ದಾರೆ. ಹಿಂದೆ ತೆಗೆದಿದ್ದ ಈ ಫೋಟೋವನ್ನು ಶುಭಾಂಶು ಈಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಫೋಟೋದಲ್ಲಿ ಬೀಳ್ಕೊಡುವ ಬೇಸರ ಮತ್ತು ಸಾಧನೆಯ ಹೆಮ್ಮೆ ಎರಡೂ ಎಕಕಾಲದಲ್ಲಿ ಮೂಡಿದಂತಿದೆ.
ಶುಭಾಂಶು ಶುಕ್ಲಾ 1984 ರ ನಂತರ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. ಈ ಕಾರ್ಯಾಚರಣೆಯು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವಂತಾಗಿದೆ.


ಒಂದು ಕಡೆ ಪತಿ – ಪತ್ನಿಯರ ಅನೈತಿಕ ಸಂಬಂಧಗಳು, ಅದಕ್ಕೆ ಆಗುತ್ತಿರುವ ಕೊಲೆಗಳ ಸುದ್ದಿ ಓದಿ, ಕೇಳಿ ಮನಸ್ಸು ಹಾಳು ಮಾಡಿಕೊಂಡು ಇಷ್ಟೆನಾ ಜೀವನ ಎಂದುಕೊಂಡಿರುವವರಿಗೆ ಈ ಶುಭಾಂಶು- ಕಾಮ್ನಾ ಸ್ಟೋರಿ ಓದಿ ವಿವಾಹದ ಮೇಲಿನ ವಿಶ್ವಾಸ ಮರುಕಳಿಸಬಹುದೇನೋ.

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
TULUNADU NEWS January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
TULUNADU NEWS January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search