• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಜಿಎಸ್ ಟಿ ಇಳಿಕೆ: ಸೆ 22 ರಿಂದ ನಂದಿನಿ ಉತ್ಪನ್ನಗಳ ದರ ಇಳಿಕೆ!

Tulunadu News Posted On September 20, 2025
0


0
Shares
  • Share On Facebook
  • Tweet It

ಕೇಂದ್ರ ಸರಕಾರ ಜಿಎಸ್ ಟಿ ಸ್ಲ್ಯಾಬ್ ದರವನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಿ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಇತ್ತ ಕರ್ನಾಟಕದಲ್ಲಿ ಕೆಎಂಎಫ್ ತನ್ನ ನಂದಿನಿ ಹಾಲಿನ ಉತ್ಪನ್ನಗಳ ದರವನ್ನು ಇಳಿಕೆ ಮಾಡಿದೆ. ಇದು ನವರಾತ್ರಿಯ ಸಡಗರದಲ್ಲಿರುವ ನಾಗರಿಕರಲ್ಲಿ ಸಮಾಧಾನವನ್ನು ತಂದಿದೆ. ಸೋಮವಾರದಿಂದ ಹೊಸ ದರ ಜಾರಿಗೆ ಕೆಎಂಎಫ್ ಯೋಜನೆ ಹಾಕಿಕೊಂಡಿದೆ. ಯಾವುದರ ದರ ಇಳಿಕೆ ಎಷ್ಟು ಅನ್ನೊಂದು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್​​ಟಿಯನ್ನು (GST) ಇಳಿಕೆ ಬೆನ್ನಲ್ಲೇ ಇದೀಗ ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಆಗಿದ್ದು, ಸೋಮವಾರದಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ. ಆ ಮೂಲಕ ರಾಜ್ಯದ ಜನರಿಗೆ ಕೆಎಂಎಫ್​​ ಗುಡ್​​ ನ್ಯೂಸ್ ಕೊಟ್ಟಿದೆ. ಆದರೆ ಅಧಿಕೃತ ಆದೇಶ ಬಾಕಿಯಿದೆ.

ಜಿಎಸ್​​ಟಿ ಇಳಿಕೆ ಬೆನ್ನಲ್ಲೇ ದರ ಇಳಿಕೆಗೆ ಸಜ್ಜಾಗಿರುವ ಕೆಎಂಎಫ್​​ ಈ ಬಗ್ಗೆ ಶುಕ್ರವಾರ ಕೆಎಂಎಫ್​​ ಅಧಿಕಾರಿಗಳು ಸಭೆ ಮಾಡಿದ್ದಾರೆ. ಸಭೆಯಲ್ಲಿ ಯಾವುದರ ದರ ಎಷ್ಟು ಇಳಿಕೆ ಎಂಬುವುದನ್ನು ನಿರ್ಧಾರ ಮಾಡಲಾಗಿದೆ. ಮೊಸರಿನ ದರ ಲೀಟರ್​ಗೆ 4 ರೂ. ಇಳಿಕೆ ನಿರೀಕ್ಷೆ ಇದೆ. ಜೊತೆಗೆ ತುಪ್ಪ, ಬೆಣ್ಣೆ, ಲಸ್ಸಿ ಸೇರಿ ಹಲವು ಉತ್ಪನ್ನಗಳ ದರ ಕೂಡ ಇಳಿಕೆ ಆಗಿದೆ.
2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್​​ಟಿ ವಿಧಿಸಲಾಗಿತ್ತು. 2022 ರಲ್ಲಿ ಜಿಎಸ್​ಟಿಯನ್ನ ಶೇಕಡಾ 22ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿದ್ದು, ಇದು ಸೆ. 22ರಿಂದ ಜಾರಿಗೆ ಬರಲಿದೆ. ಆ ಮೂಲಕ ಗ್ರಾಹಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕರ್ನಾಟಕದ ಸ್ಟಾರ್ ಬ್ರ್ಯಾಂಡ್ ಕೆಎಂಎಫ್​​ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಎಲ್ಲೆಡೆ ಭಾರೀ ಬೇಡಿಕೆ ಇದೆ. ಇತ್ತೀಚೆಗೆ ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್​ ದರ ಪ್ರತಿ ಲೀಟರ್​ಗೆ 4 ರೂ. ಏರಿಕೆ ಮಾಡಲಾಗಿತ್ತು. ಅದೇ ರೀತಿಯಾಗಿ ಮೊಸರಿನ ದರ ಕೂಡ ಪ್ರತಿ ಲೀಟರ್​​ಗೆ 4 ರೂ. ಏರಿಕೆ ಮಾಡಲಾಗಿತ್ತು. ಸದ್ಯ ಈ ನಾಲ್ಕು ರೂ. ಅನ್ನು ಕೆಎಂಎಫ್​ ಕಡಿತಕ್ಕೆ ನಿರ್ಧರಿಸಿದೆ.
ಈ ನಂದಿನ ಉತ್ಪನ್ನಗಳ ದರ ಇಳಿಕೆ ಕುರಿತು ನಾಡಿದ್ದು ಅಂದರೆ ಸೆಪ್ಟೆಂಬರ್ 20ರಂದು ಕೆಎಂಎಫ್​ ನ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದ್ದು, ಬೆಲೆ ಇಳಿಕೆ ಬಗ್ಗೆ ಕೈಗೊಳ್ಳಲಿದೆ. ಒಂದು ವೇಳೆ ಸಭೆಯಲ್ಲಿ ದರ ಇಳಿಕೆ ಬಗ್ಗೆ ನಿರ್ಧಾರ ಕೈಗೊಂಡರೆ, ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ಪರಿಸ್ಕೃತ ದರ ಜಾರಿಯಾಗುವ ಸಾಧ್ಯತೆಗಳು ಇವೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಭಾರೀ ಅನುಕೂಲವಾಗಲಿದೆ.
2025, ಏಪ್ರಿಲ್ 1ರಂದು ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್​ ದರ ಪ್ರತಿ ಲೀಟರ್​ಗೆ 4 ರೂಪಾಯಿ ಏರಿಕೆ ಮಾಡಿತ್ತು. ಜೊತೆಗೆ ಮೊಸರಿನ ದರವೂ ಸಹ ಪ್ರತಿ ಲೀಟರ್​​ಗೆ 4 ರೂಪಾಯಿ ಏರಿಕೆಯಾಗಿತ್ತು. ಇದೀಗ ಇದೇ ನಾಲ್ಕು ರೂಪಾಯಿಯನ್ನು ಕಡಿತ ಮಾಡಲು ಕೆಎಂಎಫ್​ ಮುಂದಾಗಿದೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search