ಕಾಂಗ್ರೆಸ್ ಸುಳ್ಳು ಹೇಳಿದ್ದು ನಿಜ: ತಪ್ಪೊಪ್ಪಿಕೊಂಡ ರಾಹುಲ್
ಗಾಂಧಿನಗರ: ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಲವೊಮ್ಮೆ ಪೆಕರನಂತೆ ಹೇಳಿಕೆ ನೀಡಿದರೂ, ಕೆಲವೊಮ್ಮೆ ಅದು ಅತಿರೇಕ, ಹಾಸ್ಯಾಸ್ಪದ ಎನಿಸಿದರೂ, ವಿರಳಾತಿ ವಿರಳ ಎಂಬಂತೆ ಕೆಲವು ಸತ್ಯ ಹೇಳಿಬಿಡುತ್ತಾರೆ.
ಈಗ ಕಾಂಗ್ರೆಸ್ಸಿನ ಅಂಥಾದ್ದೇ ಪ್ರಮಾದವನ್ನು ಒಪ್ಪಿಕೊಂಡಿರುವ ರಾಹುಲ್ ಗಾಂಧಿ, “ಕಾಂಗ್ರೆಸ್ ಸಹ ಕೆಲವು ತಪ್ಪು ಮಾಡಿದೆ. ಅದರಲ್ಲೂ ಕೆಲವೊಂದಿಷ್ಟು ಸುಳ್ಳುಗಳನ್ನು ಹೇಳಿದೆ” ಎಂದು ರಾಜ್ ಕೋಟ್ ನಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ತಮ್ಮ ಪಕ್ಷದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ನರೇಂದ್ರ ಮೋದಿ ಅವರು ಸುಳ್ಳು ಹೇಳಿದರೆ ಯಾರೂ ಕೇಳುವುದಿಲ್ಲ. ಆದರೆ ಕಾಂಗ್ರೆಸ್ ಸುಳ್ಳು ಹೇಳಿದರೆ ಎಲ್ಲರೂ ಪ್ರಶ್ನಿಸುತ್ತಾರೆ. ನಮ್ಮ ಮೇಲೆ ಕಣ್ಣು ಹಾಗೂ ನಿರೀಕ್ಷೆಗಳು ತುಂಬ ಇವೆ ಎಂದಿದ್ದಾರೆ.
ಅಲ್ಲದೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಕಾಂಗ್ರೆಸ್ಸಿನ ಸುಳ್ಳುಗಳು ಸಹ ಸಹಕಾರಿಯಾಗಿವೆ. ಆದಾಗ್ಯೂ ಕಾಂಗ್ರೆಸ್ಸಿಗೆ ಆಡಳಿತದಲ್ಲಿದ್ದಾಗ ಅಹಂಕಾರ ಮಿತಿಮೀರಿತ್ತು. ಕೆಲವೊಂದು ಗೊಂದಲ, ಅಸ್ಪಷ್ಟತೆಗಳು ಪಕ್ಷವನ್ನು ಕಾಡಿದ್ದವು. ಈ ಎಲ್ಲ ಕಾರಣಗಳು ಪಕ್ಷದ ಹಿನ್ನಡೆಗೆ ಕಾರಣವಾದವು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಮುಗಿದು ಮೂರು ವರ್ಷಗಳ ಬಳಿಕವಾದರೂ ರಾಹುಲ್ ಗಾಂಧಿಗೆ ತಪ್ಪಿಗೆ ಅರಿವಾಗಿದೆ. ಆದರೆ ಅದನ್ನು ಎಷ್ಟರಮಟ್ಟಿಗೆ ತಿದ್ದಿಕೊಳ್ಳುತ್ತಾರೋ? ಅಥವಾ ಅಮೆರಿಕದಲ್ಲಿ ಹೇಳಿಕೆ ನೀಡಿದಂತೆ ಮಹಾತ್ಮ ಗಾಂಧಿ ಒಬ್ಬ ಎನ್ಆರ್ ಐ ಎಂದು ಹೇಳಿ ಮುಜುಗರಕ್ಕೀಡಾಗುತ್ತಾರೋ ದೇವರೇ ಬಲ್ಲ.
Leave A Reply