300 ದಲಿತರ ಮತಾಂತರ, ಹಿಂದಿದೆಯೇ ಬೌದ್ಧ ಧರ್ಮ ಗುರುಗಳ ಹುನ್ನಾರ?
ಇಷ್ಟು ದಿನ ಕ್ರಿಶ್ಚಿಯನ್ನರು ದಲಿತರಿಗೆ ಹಣ, ಐಷಾರಾಮಿ ಜೀವನದ ಮೂಲಕ ಮತಾಂತರ ಮಾಡುತ್ತಿದ್ದ ಪ್ರಕರಣಗಳನ್ನು ಕೇಳುತ್ತಿದ್ದೆವು. ಮುಸ್ಲಿಂ ಮೂಲಭೂತವಾದಿಗಳು ಬಡ ಹಿಂದೂ ಹುಡುಗಿಯರ ಹಿಂದೆ ಮುಸ್ಲಿಂ ಯುವಕರನ್ನು ಬಿಟ್ಟು ಪ್ರೀತಿಯ ಹೆಸರಲ್ಲಿ ಇಸ್ಲಾಂಗೆ ಮತಾಂತರಗೊಳಿಸುತ್ತಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ.
ಆದರೆ ಬೌದ್ಧ ಧರ್ಮೀಯರೂ ಇದೇ ತಂತ್ರ ಬಳಸುತ್ತಿದ್ದಾರೆಯೇ? ಅಂಬೇಡ್ಕರ್, ಅಶೋಕ ಮಹಾರಾಜನ ಹೆಸರಲ್ಲಿ ದಲಿತರಿಗೆ ಗಾಳ ಹಾಕುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.
ಹೀಗೆ ಪ್ರಶ್ನೆಗಳು ಉದ್ಭವಿಸಲು ಸಹ ಕಾರಣಗಳಿವೆ?
ಅಶೋಕ ವಿಜಯ ದಶಮಿ ಹಿನ್ನೆಲೆಯಲ್ಲಿ ಗುಜರಾತಿನ ಅಹಮದಾಬಾದ್ ಹಾಗೂ ವಡೋದರಾದಲ್ಲಿ 300ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇದರಲ್ಲಿ 50 ಮಹಿಳೆಯರು ಸೇರಿ 200 ದಲಿತರು ಅಹಮದಾಬಾದ್ ಹಾಗೂ 100 ದಲಿತರು ವಡೋದರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತಾಂತರಗೊಂಡಿದ್ದಾರೆ.
ಶಾಂತಿಯುತವಾಗಿಯೇ ಮತಾಂತರ ಪ್ರಕ್ರಿಯೆ ನಡೆದಿದೆ ಎಂದು ಕಾರ್ಯಕ್ರಮ ಆಯೋಜಕರಾದ ಗುಜರಾತ್ ಬುದ್ಧಿಸ್ಟ್ ಅಕಾಡೆಮಿಯವರು ತಿಳಿಸಿದ್ದಾರೆ. ವಡೋದರಾದ ಎಲ್ಲ ದಲಿತರು ಸ್ವಯಂ ಪ್ರೇರಿತರಾಗಿಯೇ ಮತಾಂತರವಾಗಿದ್ದಾರೆ ಎಂದೂ ಹೇಳಿದ್ದಾರೆ.
ಆದರೆ, ಸ್ವಯಂ ಪ್ರೇರಿತರಾಗಿ ಮತಾಂತರವಾಗುವುದಾದರೆ ಎಲ್ಲರೂ ದಲಿತರೇ ಏಕೆ ಆಗಬೇಕು? ಅವರಿಗೆ ಅಶೋಕ ಬಂದು ಕನಸಿನಲ್ಲಿ ಮತಾಂತರ ಆಗಿ ಎಂದು ಹೇಳಿದ್ದನೇ? ಬುದ್ಧಿಸ್ಟ್ ಅಕಾಡೆಮಿಯವರು ಕಾರ್ಯಕ್ರಮ ಆಯೋಜಿಸಿ ಮತಾಂತರಗೊಳಿಸಿ ಎಂದು ಅವರ ಕಿವಿಯಲ್ಲಿ ಹೇಳಿದ್ದನೇ? ಬೇರೆ ಜಾತಿ, ಧರ್ಮದವರು ಒಬ್ಬರೂ ಏಕೆ ಸ್ವಯಂ ಪ್ರೇರಿತರಾಗಿ ಮತಾಂತರವಾಗಲಿಲ್ಲ? ಅಹಿಂಸಾ ಮಾರ್ಗದಲ್ಲಿ ನಡೆಯಿತು ಎಂದ ಮಾತ್ರಕ್ಕೆ ಮತಾಂತರದ ಹಿಂದೆ ಯಾವುದೇ ಹುನ್ನಾರ ಎಲ್ಲ ಎಂದು ನಂಬಲಾಗುತ್ತದೆಯೇ?
ದಲಿತರು ಹೇಗೆ ಬಡವರು ಎಂಬ ಕಾರಣಕ್ಕಾಗಿ ಕ್ರಿಶ್ಚಿಯನ್ನರು ಆಮಿಷದ ಮತಾಂತರ ಮಾಡಿದ ಹಾಗೆ, ಈ ಬೌದ್ಧ ಧರ್ಮಿಯರು ಸಹ ಅಂಬೇಡ್ಕರ್, ಅಶೋಕ ಹೆಸರಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
-ಸಂಜೀವ್ ಭಟ್, ಕುಶಾಲನಗರ
Leave A Reply