ಪ್ರೀತಿಗೆ ಧರ್ಮದ ಹಂಗಿಲ್ಲ ಎಂದ ಕೇರಳ ಹೈಕೋರ್ಟ್, ಹಾಗಿದ್ದರೆ ಇಸ್ಲಾಂಗೆ ಯುವತಿ ಮತಾಂತರ ಯಾಕೆ ಎಂದ ಜನಸಾಮಾನ್ಯ?
>> ಎಲ್ಲ ಪ್ರೇಮ ವಿವಾಹ ಲವ್ ಜಿಹಾದ್ ಅಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು
ತಿರುವನಂತಪುರಂ : ಹಿಂದು ಮತ್ತು ಮುಸ್ಲಿಂ ಯುವ ಸಮುದಾಯಗಳ ನಡುವಿನ ಅಂತರ್ ಧರ್ಮೀಯ ವಿವಾಹಗಳನ್ನೆಲ್ಲ ಲವ್ ಜಿಹಾದ್ ಎಂದು ಶಂಕಿಸುವುದು ಬೇಡ ಎಂದು ಕೇರಳ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಇತ್ತೀಚೆಗೆ ಅನೀಸ್ ಹಮೀದ್ ಮತ್ತು ಶೃತಿ ಮಳೆದಟ್ ನಡುವಿನ ವಿವಾಹ ಪ್ರಕರಣದ ತೀರ್ಪಿನಲ್ಲಿ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.
ತವರು ಮನೆಯವರ ಬಂಧನದಿಂದ ತನ್ನ ಪತ್ನಿ ಶೃತಿಯನ್ನು ಬಿಡಿಸಿ ಒಪ್ಪಿಸುವಂತೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಅನೀಸ್ ಸಲ್ಲಿಸಿದ್ದರು. ಪ್ರೇಮಿಗಳ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ ಆಕೆಯನ್ನು ಗಂಡನಿಗೆ ಒಪ್ಪಿಸಿದೆ.
ಕಳೆದ ತಿಂಗಳು ರಾಷ್ಟ್ರೀಯ ತನಿಖಾ ದಳದಿಂದ ರಾಜ್ಯದಲ್ಲಿ ನಡೆಯುತ್ತಿರುವ ಅಂತರ್‍ಧರ್ಮೀಯ ವಿವಾಹಗಳ ಹಿಂದೆ ಲವ್ ಜಿಹಾದ್ ಇದೆಯೇ ಎಂಬುದರ ಕುರಿತು ತನಿಖೇ ಬೇಡ ಎಂದು ಸಿಎಂ ಪಿuರಾಯಿ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿತ್ತು. ನಂತರ ಲವ್ ಜಿಹಾದ್‍ಗೆ ಸರ್ಕಾರದಿಂದಲೇ ಕುಮ್ಮಕ್ಕು ಇದೆ ಎಂಬ ಸಂಶಯ ಎಲ್ಲ ಕಡೆ ವ್ಯಕ್ತವಾಗಿತ್ತು. ಆದರೆ ಸುಪ್ರೀಂ ಅಖಿಲಾ ಅಸೋಕನ್ ಅಲಿಯಾಸ್ ಹಾದಿಯಾ ಪ್ರಕರಣದಲ್ಲಿ ಎನ್‍ಐಎಗೆ ತನಿಖೆ ನಡೆಸುವಂತೆ ಸೂಚಿಸಿದೆ.
Leave A Reply