ಇಸ್ಲಾಂ ಧರ್ಮಗುರುಗಳ ಉಪದ್ವ್ಯಾಪ: ಮುಸ್ಲಿಮರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಅಪ್ ಲೋಡ್ ಮಾಡುವಂತಿಲ್ಲ
ಲಖನೌ: ದಾರುಲ್ ಉಲುಮ್ ದಿಯೋಬಂದ್. ಉತ್ತರ ಪ್ರದೇಶದ ಈ ಇಸ್ಲಾಮಿಕ್ ಸಂಸ್ಥೆ ಇತ್ತೀಚಿಗಷ್ಟೇ ಮುಸ್ಲಿಂ ಯುವತಿ ಹುಬ್ಬು ಟ್ರಿಮ್ ಮಾಡಿಸಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಿ ಸುದ್ದಿಯಾಗಿತ್ತು…
ಈಗ ಈ ಸಂಸ್ಥೆ ಮತ್ತೊಂದು ಉಪದ್ವ್ಯಾಪ ಮೆರೆದಿದೆ…
ಹೌದು, ಇನ್ನು ಮುಂದೆ ಮುಸ್ಲಿಂ ಯುವಕ/ಯುವತಿಯರು ಫೇಸ್ ಬುಕ್, ವಾಟ್ಸ್ ಆ್ಯಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೊ ಅಪ್ ಲೋಡ್ ಮಾಡುವಂತಿಲ್ಲ ಎಂದು ಫತ್ವಾ ಹೊರಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಕುವ ಕುರಿತು ಸಂಸ್ಥೆಯ ಧರ್ಮಗುರುಗಳಿಗೆ ಮುಸ್ಲಿಂ ಯುವಕನೊಬ್ಬ ಪ್ರಶ್ನೆ ಕೇಳಿದ್ದ. ಹಾಗೆಯೇ ಈ ಕುರಿತು ಗೊಂದಲಗಳಿದ್ದು ಬಗೆಹರಿಸುವಂತೆ ಕೋರಿದ್ದ.
ಈ ಹಿನ್ನೆಲೆಯಲ್ಲಿ ಉತ್ತರಿಸಿರುವ ದಿಯೋಬಂದ್, ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರು ಫೋಟೊ ಹಾಕುವುದು ಇಸ್ಲಾಂಗೆ ವಿರೋಧ ಹಾಗೂ ಇದು ಇಸ್ಲಾಮೇತರ ಕೃತ್ಯ ಎಂದು ಹೇಳಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋರು, ರಾಮ ದೇವರೇ ಅಲ್ಲ ಅನ್ನೋರು, ಮೌಢ್ಯ ನಿಷೇಧದ ಹೆಸರಲ್ಲಿ ಹಿಂದೂಗಳ ನಂಬಿಕೆಗೆ ಪೆಟ್ಟುಕೊಡಲು ಹೊರಟಿರೋ, ಇಸ್ಲಾಂ ಧರ್ಮಗುರುಗಳ ಇಂಥ ಮೌಢ್ಯವನ್ನೇಕೆ ಪ್ರಶ್ನಿಸಲ್ಲ ಎಂಬುದೇ ಪ್ರಶ್ನೆ. ಈ ಎಡಬಿಡಂಗಿಗಳಿಗೆ ಇದನ್ನು ಪ್ರಶ್ನಿಸುವ ತಾಕತ್ತಿಲ್ಲ ಎಂಬುದೇ ಪ್ರಶ್ನೆಗೆ ಉತ್ತರವಾ?
Leave A Reply