ಕಟೀಲಿನಲ್ಲಿ ಎಂಥಾ ಲೋಕವಯ್ಯಾ ಚಿತ್ರದ ಸ್ಕ್ರಿಪ್ಟ್ ಗೆ ಪೂಜೆ
ಹೊಸತನದ ಆವಿಷ್ಕಾರದಲ್ಲಿ ಸಿನೆಮಾವೊಂದನ್ನು ನಿರ್ಮಾಣ ಮಾಡಲು ಯೋಜಿಸಲಾಗಿದ್ದು ಪ್ರಸ್ತುತ ಸಮಾಜದಲ್ಲಿರುವ ಮೂಢನಂಬಿಕೆಗಳಿಂದ ಜನ ಹೇಗೆ ತಮ್ಮತನವನ್ನು ಕಳೆದುಕೊಂಡು ಬದಲಾಗುತ್ತಾರೆ ಎನ್ನುವುದು ಚಿತ್ರದ ತಿರುಳು ಎಂದು ಎಂಥಾ ಲೋಕವಯ್ಯಾ ಚಿತ್ರದ ನಿರ್ಮಾಪಕ ಮಂಗಲ್ಪಾಡಿ ನರೇಶ್ ಹೇಳಿದ್ದಾರೆ. ಚಿತ್ರ ಕನ್ನಡ ಭಾಷೆಯಲ್ಲಿ ಬರಲಿದ್ದು ಅದರೊಂದಿಗೆ ನಮ್ಮ ತುಳು ಮತ್ತು ಕೊಂಕಣಿ ಭಾಷೆಗಳನ್ನು ಸಂದರ್ಭಾನುಸಾರವಾಗಿ ಬಳಸಿ ಇಲ್ಲಿನ ಮಣ್ಣಿನ ಆಚಾರ, ವಿಚಾರಗಳು, ಸಂಸ್ಕೃತಿ ಮತ್ತು ಕರಾವಳಿಯ ವಿವಿಧ ಸಮಸ್ಯೆಗಳನ್ನು ಹೇಗೆ ಸುಲಲಿತವಾಗಿ ಪರಿಹರಿಸಬಹುದು ಎನ್ನುವುದನ್ನು ಹಾಸ್ಯದ ಮಿಶ್ರಣದೊಂದಿಗೆ ನವಿರಾದ ನಿರೂಪಣೆಯಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದೇವೆ. ಸ್ಥಳೀಯ ಕಲಾವಿದರು ಹಾಗೂ ನಾಡಿನ ಖ್ಯಾತ ನಟರೊಂದಿಗೆ ಚಿತ್ರೀಕರಣ ನಡೆಸಲು ಯೋಜಿಸಿದ್ದು ಚಿತ್ರ ಸಂಪೂರ್ಣವಾಗಿ ಮಂಗಳೂರಿನ ಆಸುಪಾಸಿನಲ್ಲಿ ನಡೆಯಲಿದೆ. ಕಡ್ಲೆಕಾಯಿ ಫಿಲ್ಮ್ಸ್ ಆಡಂಬರಕ್ಕಿಂತ ವಸ್ತುನಿಷ್ಟ ಕಥೆಯನ್ನು ಚಿತ್ರವಾಗಿಸಲು ತೀರ್ಮಾನಿಸಿದ್ದು ಹೊಸ ನಿರ್ಧೇಶಕರ ಹೊಸ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಅವರು ತಿಳಿಸಿದ್ದಾರೆ. ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಮತ್ತು ಕ್ಯಾಮೆರಾ ಗೆ ಪೂಜೆ ಸಲ್ಲಿಸಲಾಯಿತು. ಯುವ ಉದ್ಯಮಿ ಮಂಗಲ್ಪಾಡಿ ನರೇಶ್ ಶೆಣೈ, ಬಹುಭಾಷಾ ನಟ ಗೋಪಿನಾಥ್, ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್ ಸಹಿತ ಚಿತ್ರದ ತಾಂತ್ರಿಕ ಬಳಗ ಭಾಗವಹಿಸಿದ್ದರು. ಒಂದು ಮೊಟ್ಟೆಯ ಕಥೆ ಚಿತ್ರದ ಸಹನಿರ್ದೇಶಕ ಸಿತೇಶ್ ಸಿ ಗೋವಿಂದ್ ಅವರು ಚಿತ್ರದ ನಿರ್ದೇಶಕರಾಗಿದ್ದಾರೆ. ಪೃರ್ಥಿ ಅಂಬರ್ ಚಿತ್ರದಲ್ಲಿ ಮುಖ್ಯವಾದ ಪಾತ್ರ ವಹಿಸಲಿದ್ದಾರೆ.
Leave A Reply