ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸೋಲಿಸಿದ ರಮ್ಯ, ಟ್ವೀಟ್ ಹೆಚ್ಚಳಕ್ಕೆ ಕಳ್ಳದಾರಿ?
Posted On October 22, 2017
ಕೆಲವು ದಿನಗಳಿಂದ ರಾಷ್ಟ್ರೀಯ ಮಾಧ್ಯಮಗಳು ಟ್ವಿಟ್ಟರ್‍ನಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ಜನಪ್ರಿಯತೆಗೆ ಸೆಡ್ಡು ಹೊಡೆದಿದ್ದಾರೆ. ಇದಕ್ಕೆ ಕನ್ನಡ ನಟಿ ರಮ್ಯ ಅಲಿಯಾಸ್ ದಿವ್ಯಾ ಸ್ಪಂದನ ಕಾರಣ ಎಂದು ಪ್ರಾಯೋಜಿತ ಸುದ್ದಿಗಳನ್ನು ಬಿತ್ತರಿಸಿದ್ದೇ ಬಿತ್ತರಿಸಿದ್ದು, ಇದೀಗ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಹಿಂದಿನ ಅಡ್ಡದಾರಿ ಬಯಲಾಗಿದೆ.
ರೊಬೊಟ್‍ಗಳಿಂದ ಎರವಲು ಪಡೆದ ಬಾಟ್ ಎಂಬ ತಂತ್ರಜ್ಞಾನ ಬಳಸಿ ಟ್ವೀಟ್ ಹೆಚ್ಚಿಸಿಕೊಳ್ಳುವ ಕಳ್ಳಾಟ ರಾಹುಲ್ ಗಾಂಧಿ ಕಚೇರಿಯಿಂದ ನಡೆದಿದೆ ಎನ್ನಲಾಗಿದೆ. ಇದರಲ್ಲಿ ರಮ್ಯ ಕೈವಾಡವಿರುವ ಶಂಕೆಯೂ ವ್ಯಕ್ತವಾಗಿದೆ.
ರಷ್ಯಾ, ಕಜಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲಿ ಹ್ಯಾಕರ್‍ಗಳಂತೆ “ಬಾಟ್’ ಗಳನ್ನು ಬಳಸಿ ಟ್ವೀಟ್ ಮತ್ತು ಲೈಕ್‍ಗಳನ್ನು ಹೆಚ್ಚಿಸಿಕೊಳ್ಳಲಾಗಿದೆ.
ರಾಹುಲ್ ಗಾಂಧಿ ಟ್ವಿಟರ್ ಖಾತೆಯಿಂದ ಬಹುಪಾಲು ಹೊರಬೀಳುವ ಟ್ವೀಟ್‍ಗಳು ಪ್ರಧಾನಿ ಮೋದಿ ಅವರನ್ನು ಹಂಗಿಸುವಂಥದ್ದು ಮಾತ್ರ. ಅದು ಬಿಟ್ಟರೆ ಕಾಂಗ್ರೆಸ್ ಮುಂಚೆಯೇ ಮಾಡಿದ್ದನ್ನು ಬಿಜೆಪಿ ಈಗ ಮಾಡಿದೆ ಎನ್ನುವಂಥದ್ದು. ನೈಜ ರಾಜಕಾರಣದ ಗಾಂಭೀರ್ಯತೆ ಕಾಣಸಿಗುವುದೇ ಇಲ್ಲ. ಕಾರಣ ಅಲ್ಲಿರುವುದು ಅನನುಭವಿ ತಲೆಗಳು.
ಅಮೆರಿಕದ ಕೇಂಬ್ರಿಜ್ ಅನಾಲಿಟಿಕ ಕಂಪನಿಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜವಾಬ್ದಾರಿ ನೀಡಿದೆ ಎಂದು ಹೇಳಲಾಗಿದೆ.
ಟ್ರಂಪ್ ಬಗ್ಗೆ ರಾಹುಲ್ ಟ್ವೀಟ್ ಮಾಡಿದಾಗ ಕ್ಷಣಮಾತ್ರದಲ್ಲಿ 20-30 ಸಾವಿರ ರಿಟ್ವೀಟ್ ಆಗಿದ್ದು ಈ ವಿದೇಶಿ ಬಾಟ್ ಲಿಂಕ್‍ಗಳಿಂದ. ಇವು ಫೇಕ್ ಟ್ವಟರ್ ಖಾತೆಗಳು, ಸಂದೇಶದ ಗಂಧ ಗಾಳಿ ಗೊತ್ತಿಲ್ಲದೇ ದುಡ್ಡಿಗಾಗಿ ಟ್ವೀಟ್ ಹೆಚ್ಚಿಸುವ ಕಳ್ಳರ ಜಾಲವಿದು.
- Advertisement -
actressbangalorebengalurubotcongressdelhidivyaendgandhiindiakannadamediamodindaofofficerahulramyaretweetrgrobotsocialspandanatajtweettwitterupawest
Trending Now
ಸಿಎಂ ಆಯ್ಕೆ ಮಾಡಲು ನಮಗೆ ಒಂದೇ ದಿನ ಸಾಕು - ಸಚಿನ್ ಪೈಲೆಟ್
November 22, 2024
ದುಬೈಗೆ ಹೊರಡುವ ಯೋಚನೆ ಇದ್ದರೆ ಈ ನಿಯಮ ಕಡ್ಡಾಯ!
November 22, 2024
Leave A Reply