ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ: ಪೇಜಾವರ ಶ್ರೀ ದಿಟ್ಟ ನಡೆ
ಉಡುಪಿ: ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮದ ವಿಚಾರದಲ್ಲಿ ಪೇಜಾವರ ಶ್ರೀ ದಿಟ್ಟ ನಡೆ ಪ್ರದರ್ಶಿಸಿದ್ದು, “ಹಿಂದೂ ಧರ್ಮದಿಂದ ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಪ್ರತ್ಯೇಕ ಅಲ್ಲ” ಎಂದಿದ್ದಾರೆ.
ಅಲ್ಲದೆ ಈ ಕುರಿತು ಯಾವುದೇ ಚರ್ಚೆಗೆ, ಸಮಾಲೋಚನೆಗೆ ಸಿದ್ಧವಿದ್ದು ಮುಂದಿನ ವರ್ಷ ಪರ್ಯಾಯ ಪೀಠದಿಂದ ಇಳಿದ ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಅಥವಾ ಉಡುಪಿಗೆ ಬಂದರೆ, ಚರ್ಚೆ ಮಾಡೋಣ ಎಂದು ತಿಳಿಸಿದ್ದಾರೆ.
ಹಿಂದೂ ಧರ್ಮದಲ್ಲಿ ಹಲವು ಜಾತಿ, ಪಂಥ, ಸಿದ್ಧಾಂತದಲ್ಲಿ ಭಾರಿ ವ್ಯತ್ಯಾಸಗಳಿವೆ. ಅಷ್ಟಕ್ಕೂ ಬಸವಣ್ಣನವರು ಶಿವನೇ ಸರ್ವೋತ್ತಮ ಎಂದಿದ್ದಾರೆ. ಹೀಗೆ ಹಲವು ಭಿನ್ನಾಭಿಪ್ರಾಯಗಳಿದ್ದರೂ ಹಿಂದೂ ಧರ್ಮದಲ್ಲಿ ಒಗ್ಗೂಡಿದ್ದೇವೆ. ಹಾಗಾಗಿ ವೀರಶೈವರು, ಲಿಂಗಾಯತರು ಹಿಂದೂ ಧರ್ಮದಿಂದ ಪ್ರತ್ಯೇಕ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವರು ಹಿಂದೂ ಧರ್ಮ ತೊರೆಯಬೇಕು ಎಂದು ಯಾವುದೇ ಭಯದಲ್ಲಿ ಹೇಳಿಲ್ಲ. ವೀರಶೈವ ಹಾಗೂ ಲಿಂಗಾಯತರು ನಮ್ಮವರು. ಹಿಂದೂ ಧರ್ಮದ ಏಕತೆ ಹಾಗೂ ಒಗ್ಗಟ್ಟಿನ ದೃಷ್ಟಿಯಿಂದ ತೊರೆಯದಿರದಂತೆ ಸಹೋದರತ್ವ ಮನೋಭಾವನೆಯಿಂದ ಹೇಳಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಪೇಜಾವರ ಶ್ರೀ ತಿಳಿಸಿದ್ದಾರೆ.
Leave A Reply