ವಿಶ್ವದಲ್ಲಿ ವ್ಯಾಪಾರಕ್ಕೆ ಭಾರತವನ್ನು ಅನೂಕಲಕರವಾಗಿಸಿದ ಮೋದಿ ಆರ್ಥಿಕತೆ ಚಾಣಾಕ್ಷತನ
Posted On November 1, 2017
ನವದೆಹಲಿ : ವಿಶ್ವದಲ್ಲಿಯೇ ವ್ಯಾಪಾರಕ್ಕೆ ಅತಿ ಹೆಚ್ಚು ಅನುಕೂಲಕರ ದೇಶಗಳ ಪಟ್ಟಿಯಲ್ಲಿ ಭಾರತ 30 ಸ್ಥಾನ ಜಿಗಿತ ಕಂಡು 100ನೇ ಸ್ಥಾನ ಗಿಟ್ಟಿಸಿಕೊಂಡಿದೆ. ವಿಶ್ವ ಬ್ಯಾಂಕ್ ನೀಡಿರುವ ” ಡೂಯಿಂಗ್ ಬುಸಿನೆಸ್ 2018: ರಿಫಾರ್ಮಿಂಗ್ ಟು ಕ್ರಿಯೇಟ್ ಜಾಬ್ಸ್ ” ವರದಿಯಲ್ಲಿ ಮೋದಿ ಸರ್ಕಾರದ ಸುಧಾರಣೆ ಕ್ರಮಗಳನ್ನು ಶ್ಲಾಘಿಸಲಾಗಿದೆ. ಪ್ರಧಾನಿ ಮೋದಿ ಅಧಿಕಾರಕ್ಕೇರಿದ 2014ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ, ಮೂರು ವರ್ಷಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ, ಮೇಕ್ ಇನ್ ಇಂಡಿಯಾ, ಜಿಎಸ್‍ಟಿ ಮತ್ತು ನೋಟ್ಯಂತರದಂಥ ಕ್ರಾಂತಿಕಾರಿ ಕ್ರಮಗಳಿಂದ ವಿಶ್ವದ ಗಮನ ಸೆಳೆದಿತ್ತು. ಇದರಿಂದ ಹೆಚ್ಚು ಉದ್ಯಮಿಗಳು ಭಾರತಕ್ಕೆ ಆಕರ್ಷಿರಾಗಿದ್ದಾರೆ.
ಈ ವರ್ಷ ಅತ್ಯಧಿಕ ಬದಲಾವಣೆಗಳಿಂದ ಅಭಿವೃದ್ಧಿ ಸಾಧಿಸಿದ 10 ದೇಶಗಳ ಪೈಕಿ ಭಾರತ ಪ್ರಮುಖವಾಗಿದೆ ಎಂದು ವಿಶ್ವಬ್ಯಾಂಕ್ನ ದಕ್ಷಿಣ ಏಷ್ಯಾ ಪ್ರಾಂತೀಯ ಉಪಾಧ್ಯಕ್ಷ ಅನ್ನೆಟ್ಟೆ ಡಿಕ್ಸನ್ ಹೇಳಿದ್ದಾರೆ.
ಅಲ್ಪಸಂಖ್ಯಾತ ಹೂಡಿಕೆದಾರರ ಹಿತಕಾಯುವಲ್ಲಿಯೂ ದೆಹಲಿ ಮತ್ತು ಮುಂಬೈನಲ್ಲಿನ ಉದ್ಯಮ ಕ್ಷೇತ್ರಗಳ ಸುಧಾರಣೆ ಗಮನಿಸಿ ಭಾರತಕ್ಕೆ 4ನೇ ಸ್ಥಾನ ಸಿಕ್ಕಿದೆ.
ಯುಪಿಎ ಸಾಧಿಸಲಾಗದ್ದನ್ನು ಮೋದಿ ಮಾಡಿದ್ದು ಹೇಗೆ?
* ಆನ್‍ಲೈನ್ ಮೂಲಕ ಸ್ಟಾರ್ಟ್ ಅಪ್‍ಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ.
* ಪಾನ್ ಮತ್ತು ತೆರಿಗೆ ಖಾತೆ ಸಂಖ್ಯೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಲೀನ.
* ಪಾಲಿಕೆಗಳಲ್ಲಿ ದಿನಗಟ್ಟಲೆ ಸಾಲಿನಲ್ಲಿ ನಿಂತು ವ್ಯಾಪಾರ ಆರಂಭ ಪರವಾನಗಿಗೆ ಕಾಯುವ ಪರದಾಟ ತಪ್ಪಿಸಿ ಸಂಪೂರ್ಣ ಆನ್‍ಲೈನ್ ವ್ಯವಸ್ಥೆ. ಲಂಚಕೋರರಿಂದ ವ್ಯಾಪಾರಿಗಳಿಗೆ ರಕ್ಷಣೆ.
* ಪಿಂಚಣಿ ಮತ್ತು ಜಾರಿ ಒಪ್ಪಂದ ಹಾಗೂ ಆದಾಯ ತೆರಿಗೆ ಪಾವತಿಗೆ ಪ್ರಕ್ರಿಯೆ ಸಡಿಲ. ಆನ್‍ಲೈನ್‍ನಿಂದಾಗಿ ಮಧ್ಯವರ್ತಿಗಳ ಹಾವಳಿಯಿಲ್ಲ.
- Advertisement -
Trending Now
ಸಿಎಂ ಆಯ್ಕೆ ಮಾಡಲು ನಮಗೆ ಒಂದೇ ದಿನ ಸಾಕು - ಸಚಿನ್ ಪೈಲೆಟ್
November 22, 2024
ದುಬೈಗೆ ಹೊರಡುವ ಯೋಚನೆ ಇದ್ದರೆ ಈ ನಿಯಮ ಕಡ್ಡಾಯ!
November 22, 2024
Leave A Reply