• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?

Chakravarty Sulibele Posted On June 2, 2018


  • Share On Facebook
  • Tweet It

2004 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಅಟಲ್ ಬಿಹಾರಿ ವಾಜಪೇಯಿ ಸೋಲಬಹುದೆಂದು ಯಾರೂ ಎಣಿಸಿರಲಿಲ್ಲ. ಅದೊಂದು ಅನಿರೀಕ್ಷಿತ ಆಘಾತ. ವಿಕಾಸದ ದೃಷ್ಟಿಯಿಂದ ಭಾರತ ಹಿಂದೆಂದೂ ಕಂಡಿರದಂತಹ ಬೆಳವಣಿಗೆಯನ್ನು ಸಾಧಿಸಿತ್ತು.

3

ರಸ್ತೆಗಳ ನಿರ್ಮಾಣವಿರಬಹುದು, ಬಂದರುಗಳ ಅಭಿವೃದ್ಧಿ ಇರಬಹುದು ಕೊನೆಗೆ ಜನ ಸಾಮಾನ್ಯರ ಬದುಕನ್ನು ಮೇಲ್ಮಟ್ಟಕ್ಕೆ ಏರಿಸುವ ಪ್ರಯತ್ನವೂ ಇರಬಹುದು ಎಲ್ಲದರಲ್ಲೂ ಕಾಂಗ್ರೆಸ್ಸಿನ ವಂಶ ಪಾರಪಂರ್ಯದ ಆಡಳಿತ ಜೀವಮಾನದಲ್ಲೇ ಸಾಧಿಸಿರದಷ್ಟು ವಾಜಪೇಯಿಯವರು ನಾಲ್ಕುವರೆ ವರ್ಷದಲ್ಲಿ ಮಾಡಿ ತೋರಿಸಿದ್ದರು. ನಿಜಕ್ಕೂ ಭಾರತ ಪ್ರಕಾಶಿಸುತ್ತಿದ್ದ ಕಾಲವದು. ಅದೇಕೋ ಜನ ಕೈ ಹಿಡಿಯಲಿಲ್ಲ. ವಾಜಪೇಯಿಯಂಥ ಅಮೂಲ್ಯ ರತ್ನವನ್ನು ನಾವು ಕಳೆದುಕೊಂಡುಬಿಟ್ಟೆವು. ಅದಾದಮೇಲೆ ಮತ್ತೆ ಸಕರ್ಾರವನ್ನು ರಚಿಸಲು ಬಿಜೆಪಿಗೆ ಹತ್ತು ವರ್ಷ ಸಮಯ ಬೇಕಾಯ್ತು. ವಾಜಪೇಯಿಯವರು ಮಾಡಿಟ್ಟಿದ್ದ ಅದ್ಭುತ ಕೆಲಸಗಳ ಪರಿಣಾಮವನ್ನು 5 ವರ್ಷಗಳ ಕಾಲ ಉಂಡ ಕಾಂಗ್ರೆಸ್ಸು ನಂತರದ 5 ವರ್ಷಗಳಲ್ಲಿ ಕಂಡ-ಕಂಡಲ್ಲಿಂದ ಲೂಟಿ ಮಾಡಲಾರಂಭಿಸಿತು. ಅದಾದಮೇಲೆಯೇ 2ಜಿ, 3ಜಿ, ಕೋಲ್ಗೇಟ್, ಚಾಪರ್ಗೇಟ್, ಸಿಡಬ್ಲ್ಯೂಜಿಯಂತಹ ಹುಬ್ಬೇರಿಸುವಂತಹ ಭ್ರಷ್ಟಾಚಾರಗಳು ಭಾರತದಲ್ಲಿ ನಡೆದಂಥದ್ದು! ಐದೇ ವರ್ಷಗಳ ಹಿಂದೆ ಪ್ರಕಾಶಿಸುತ್ತಿದ್ದ ಭಾರತ ಈಗ ಜಾಗತಿಕ ಮಟ್ಟದಲ್ಲಿ ಮಸಿ ಬಳಸಿಕೊಂಡು ನರಳುತ್ತಿತ್ತು. ಆಗಲೇ ಮುಂಚೂಣಿಗೆ ಬಂದವರು ನರೇಂದ್ರಮೋದಿ. ಸಾವಿರಾರು ವರ್ಷಗಳ ಕಾಲ ಒಂದು ಹನಿಗಾಗಿ ಬಾಯ್ದೆರೆದು ಬಳಲಿ ಬೆಂಡಾಗಿ ಕುಳಿತಿರುವಂತಹ ಮರುಭೂಮಿಯಂತಿದ್ದರು ಭಾರತೀಯರು. ನರೇಂದ್ರಮೋದಿಯವರು ಆ ಕ್ಷಣಕ್ಕೆ ಬರದೇ ಹೋಗಿದ್ದರೆ ಬಹುಶಃ ಪ್ರಜಾತಂತ್ರ, ವಿಕಾಸ ಇವುಗಳ ಮೇಲಿನ ನಂಬಿಕೆ ಬಿಡಿ ಭಾರತದ ಮೇಲೆಯೇ ಭರವಸೆ ಹೊರಟು ಹೋಗಿರುತ್ತಿತ್ತು. ನರೇಂದ್ರಮೋದಿಯವರ ಮೊದಲ ಎರಡು ವರ್ಷಗಳು ನಾವಂದುಕೊಂಡದ್ದಕ್ಕಿಂತ ವಿಕಾಸದ ಪಥದಲ್ಲಿ ವೇಗವಾಗಿ ಸಾಗಿದೊಡನೆ ಈ ದೇಶದ ಅನೇಕರಿಗೆ ಹೆದರಿಕೆ ಕಾಡಲಾರಂಭಿಸಿತು. 2019ರ ಚುನಾವಣೆ ವಾಜಪೇಯಿಯವರ 2004 ರ ಚುನಾವಣೆಯಂತಾಗಿ ಬಿಡುತ್ತದಾ ಅಂತಾ! ಹೀಗಾಗಿ ಪ್ರತಿ ಬಾರಿ ರಾಜ್ಯ ರಾಜ್ಯಗಳನ್ನೇ ಅಮಿತ್ಶಾ ಆಪೋಶನ ತೆಗೆದುಕೊಳ್ಳುತ್ತಾ ನಡೆದಂತೆ ದೇಶದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿತ್ತು. ಅದೊಂದು ರೀತಿ ಒಳ್ಳೆಯದನ್ನು ಕಂಡು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುವ ಮಾನಸಿಕ ಸಂಭ್ರಮ. ಈ ಸಂಭ್ರಮಕ್ಕೆ ಸಣ್ಣ ಕೊರತೆಯೆನಿಸಿದಾಗಲೂ ಚಡಪಡಿಕೆಯೂ ಶುರುವಾಗುತ್ತದೆ.

2

ಕರ್ನಾಟಕದಲ್ಲಿ ಭಾಜಪ 104 ಸ್ಥಾನಗಳನ್ನು ಪಡೆದು ಅಧಿಕಾರ ರಚಿಸದೇ ಹೋದಾಗಲೂ ಇದೇ ಬಗೆಯ ಆತಂಕವಿತ್ತು. ರಾಷ್ಟ್ರಮಟ್ಟದ ಮಾಧ್ಯಮಗಳು ಇಂಥದ್ದೊಂದು ದಿನಕ್ಕಾಗಿ ಕಾಯುತ್ತಲೇ ಇದ್ದವು. ಪ್ರತಿ ರಾಜ್ಯದಲ್ಲಿ ಚುನಾವಣೆ ನಡೆದಾಗಲೂ ಅದನ್ನು ನರೇಂದ್ರಮೋದಿಯವರ ಆಡಳಿತಕ್ಕೆ ಅಗ್ನಿಪರೀಕ್ಷೆ ಎಂದೇ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದವು. ನರೇಂದ್ರಮೋದಿ ಅದನ್ನು ಸವಾಲಾಗಿ ಸ್ವೀಕರಿಸುವಂತೆ ಅನಿವಾರ್ಯ ಪರಿಸ್ಥಿತಿಯನ್ನೇ ಸೃಷ್ಟಿ ಮಾಡಿಬಿಡುತ್ತಿದ್ದರು. ಕೊನೆಗೂ ನರೇಂದ್ರಮೋದಿ ಆಯಾ ರಾಜ್ಯವನ್ನು ಗೆದ್ದರೆ ಇವರು ತೆಪ್ಪಗಾಗುವುದಿರಲಿ ಕಾಂಗ್ರೆಸ್ಸು ಮಾಡಿದ ಅಲ್ಪ ಸಾಧನೆಯನ್ನೂ ನರೇಂದ್ರಮೋದಿಯವರ ವಿರುದ್ಧ ಭಾರಿ ದೊಡ್ಡ ತಯಾರಿ ಎನ್ನುವಂತೆ ಬಿಂಬಿಸುತ್ತಿದ್ದವು. ರಾಜ್ಯಗಳನ್ನು ಗೆದ್ದ ಮರುಕ್ಷಣವೇ ಅನೇಕ ಕಡೆ ನಡೆಯುತ್ತಿದ್ದ ಉಪಚುನಾವಣೆಯೂ ಕೂಡ ನರೇಂದ್ರಮೋದಿಯವರ ಪಾಲಿಗೆ ಸವಾಲೆನಿಸುತ್ತಿದ್ದುದು ಇದೇ ಕಾರಣದಿಂದ. 9 ಉಪ ಚುನಾವಣೆಗಳಲ್ಲಿ ಸೋತಿದ್ದನ್ನೇ ದೊಡ್ಡದಾಗಿ ಬಿಂಬಿಸಿದ ರಾಷ್ಟ್ರೀಯ ಮಾಧ್ಯಮಗಳು ಕಾಂಗ್ರೆಸ್ಸಿನಿಂದ ಒಂಭತ್ತು ರಾಜ್ಯಗಳನ್ನು ಕಿತ್ತುಕೊಂಡಿದ್ದರ ಕುರಿತಂತೆ ಚಕಾರವೇ ಎತ್ತಲಿಲ್ಲ. ಕರ್ನಾಟಕದಲ್ಲಿ ಭಿನ್ನ ಭಿನ್ನ ಪಕ್ಷಗಳ ನೇತಾರರು ಕುಮಾರಸ್ವಾಮಿಯವರ ಪ್ರಮಾಣ ವಚನಕ್ಕೆ ಬಂದಿದ್ದು ಯಾರಿಗೆಷ್ಟು ಸಂತೋಷವಾಗಿತ್ತೋ ಮಾಧ್ಯಮಗಳಂತೂ ತುದಿಗಾಲಲ್ಲಿ ಕುಣಿದಾಡಿದ್ದವು. ಅದರ ಹಿಂದು ಹಿಂದೆಯೇ ಬಂದದ್ದು ಮತ್ತೊಂದು ಉಪ ಚುನಾವಣೆಯ ಫಲಿತಾಂಶ. ಉತ್ತರ ಪ್ರದೇಶದ ಕೈರಾನಾದಲ್ಲಿ ಭಾಜಪ ಸೋತಿದ್ದನ್ನು ಮುಂದಿಟ್ಟುಕೊಂಡು ಈ ಮಾಧ್ಯಮಗಳು 2019 ರ ಚುನಾವಣೆಯ ಮೋದಿಯ ಸೋಲಿನ ಮುನ್ಸೂಚನೆ ಎಂಬಂತೆ ಚಿತ್ರೀಕರಿಸಿಬಿಟ್ಟವು. ಆದರೆ ಗಮನಿಸಬೇಕಾದ ಸಂಗತಿಯೊಂದಿದೆ. ಕೈರಾನಾದಂತಹ ಸಾಮಾನ್ಯ ಚುನಾವಣೆಯೊಂದನ್ನೆದುರಿಸಲು ಕಾಂಗ್ರೆಸ್ಸು, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷಗಳು ಒಟ್ಟಾಗಿ ರಾಷ್ಟ್ರೀಯ ಲೋಕ ದಳವನ್ನು ಬೆಂಬಲಿಸಿದ್ದವು. ಈ ಹಿಂದೆ ಸಮಾಜವಾದಿ ಪಾಟರ್ಿ ಅಧಿಕಾರದಲ್ಲಿರುವಾಗ ಬಲು ದೊಡ್ಡ ಕೋಮುಗಲಭೆ ನಡೆದು ಜಾತೀಯ ಧ್ರುವೀಕರಣ ನಡೆದುಹೋಗಿತ್ತು. ಸಹಜವಾಗಿಯೇ ಬಹುಸಂಖ್ಯಾತ ಮುಸಲ್ಮಾನರನ್ನೇ ಹೊಂದಿರುವಂತಹ ಕೈರಾನಾದಲ್ಲಿ ಒಗ್ಗಟ್ಟಾದ ಹಿಂದೂಗಳು ಭಾಜಪವನ್ನು ಗೆಲ್ಲಿಸಿದ್ದರು. ಮತ ವಿಭಜನೆಯ ಪರಿಣಾಮವನ್ನು ಅರಿತ ವಿರೋಧ ಪಕ್ಷಗಳು ಈ ಬಾರಿ ಒಟ್ಟಾಗಿ ನಿಂತು ಭಾಜಪವನ್ನು ಎದುರಿಸಿದವು. ಆದರೂ ನಾಲ್ಕು ಪಕ್ಷಗಳ ವಿರುದ್ಧ ಏಕಾಂಗಿಯಾಗಿ ಸ್ಪಧರ್ಿಸಿದ್ದ ಬಿಜೆಪಿ 4,36,000 ವೋಟುಗಳನ್ನು ಪಡೆದುಕೊಂಡರೆ ಒಗ್ಗಟ್ಟಾಗಿ ಹೋರಾಟ ಮಾಡಿದ್ದ ಪ್ರತಿಪಕ್ಷಗಳು 4,81,000 ವೋಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು. ಬಹುತೇಕ ಅಲ್ಪಸಂಖ್ಯಾತರೇ ಇರುವ ಕ್ಷೇತ್ರವೊಂದರಲ್ಲಿ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯನ್ನೆದುರಿಸಿ ಪಡೆದುಕೊಂಡ ಈ ಮತ ನಿಜಕ್ಕೂ ದೊಡ್ಡ ಸಂಖ್ಯೆಯದ್ದೇನೂ ಅಲ್ಲ. ಆದರೆ ಇದು ಚರ್ಚೆಗೆ ಬರಲೇ ಇಲ್ಲ. ಇಷ್ಟಕ್ಕೂ ಈ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿಯರು ಅದೆಷ್ಟು ಬುದ್ಧಿವಂತಿಕೆಯಿಂದ ತಮ್ಮ ಕೈ ಚಳಕ ತೋರಿದರೆಂದರೆ ಚುನಾವಣೆಯ ಹೊತ್ತಲ್ಲಿ ಅಖಿಲೇಶ್ ಯಾದವ್ ಒಮ್ಮೆಯೂ ಕೈರಾನಾಕ್ಕೆ ಭೇಟಿ ನೀಡಲಿಲ್ಲ. ಆತನನ್ನು ಕಂಡರೆ ಹಿಂದೂಗಳಿಗೆ ಹಿಂದಿನ ದಂಗೆಯ ನೆನಪಾಗಿ ಬಿಡಬಹುದೆಂಬ ಹೆದರಿಕೆಯಿತ್ತು. ಹಾಗಾಗಿ ಹಿಂದೂಗಳು ಒಗ್ಗಟ್ಟಾಗಿ ಭಾಜಪಾಕ್ಕೆ ಮತ ಹಾಕಬೇಕೆಂದು ನಿರ್ಧರಿಸಿದರೆ ಮತ್ತೊಮ್ಮೆ ಸೋಲುವುದು ಖಾತ್ರಿ ಎನ್ನುವುದು ಅರಿವಿದ್ದುದರಿಂದ ಪ್ರಮುಖ ಪಕ್ಷವೊಂದರ ನಾಯಕ ಚುನಾವಣೆಗೆ ಪ್ರಚಾರವನ್ನೇ ಮಾಡಲಿಲ್ಲ. ಸ್ವತಃ ಮಾಯಾವತಿಯೂ ತಾನು ಪ್ರಚಾರಕ್ಕೆ ಹೋಗದೆ ತನ್ನೆಲ್ಲಾ ಕಾರ್ಯಕರ್ತರನ್ನೂ ರಾಷ್ಟ್ರೀಯ ಲೋಕದಳದೊಂದಿಗೇ ಸೇರಿಕೊಂಡು ಭಾಜಪದ ವಿರುದ್ಧ ಕೆಲಸ ಮಾಡುವಂತೆ ಆಜ್ಞಾಪಿಸಿದರು. ಒಟ್ಟಾರೆ ಫಲಿತಾಂಶದ ನಂತರ ರೆಕ್ಕೆ-ಪುಕ್ಕ ಬಂದಂತಾಡಿದ ಅರವಿಂದ್ ಕೇಜ್ರಿವಾಲ್ ಭಾರತ ಮನಮೋಹನ್ ಸಿಂಗ್ರಂತಹ ಸುಶಿಕ್ಷಿತ ಪ್ರಧಾನಿಯನ್ನು ಈಗ ಬಲುವಾಗಿ ಮಿಸ್ ಮಾಡಿಕೊಳ್ಳುತ್ತಿದೆ ಎಂದು ಹೇಳಿಕೆ ಕೊಟ್ಟರು. ಕೇಜ್ರಿವಾಲರ ನಾಟಕದಿಂದ ಸಾಕಷ್ಟು ಹೊಡೆತ ತಿಂದಿದ್ದ ಕಾಂಗ್ರೆಸ್ಸು ಸುಮ್ಮನಾಗದೇ ಇದೇ ಮನಮೋಹನ್ ಸಿಂಗ್ರ  ಸರ್ಕಾರದಲ್ಲಿರುವ ಮಂತ್ರಿಗಳ ಮೇಲೆ ಮಿಥ್ಯಾರೋಪವನ್ನು ಮಾಡಿ ನರೇಂದ್ರಮೋದಿ ಅಧಿಕಾರಕ್ಕೆ ಬರಲು ಕಾರಣರಾದ ತಾವು ಕ್ಷಮೆ ಯಾಚಿಸಬೇಕೆಂದು ತಿರುಗೇಟು ಕೊಟ್ಟಿತು. ಸ್ವತಃ ಪಂಜಾಬಿನಲ್ಲಿ ಕಳೆದ ಚುನಾವಣೆಯಲ್ಲಿ 41,000 ಮತ ಪಡೆದಿದ್ದ ಆಮ್ ಆದ್ಮಿ ಪಾಟರ್ಿ ಮರು ಚುನಾವಣೆಯಲ್ಲಿ 1900 ವೋಟಿಗೆ ಇಳಿದಿದ್ದನ್ನು ಕೇಜ್ರಿವಾಲ್ ಹೇಗೆ ಸ್ವೀಕರಿಸಿದರೋ ದೇವರೇ ಬಲ್ಲ. ಕಳೆದ ವರ್ಷ ಪಂಜಾಬಿನ ಗುರುದಾಸ್ ಪುರದಲ್ಲಿ ಉಪ ಚುನಾವಣೆಯಲ್ಲಿ 1,77,000 ಮತಗಳಿಂದ 23,000ಕ್ಕಿಳಿದಿದ್ದನ್ನು ಕೇಜ್ರಿವಾಲ್ ಮರೆತೇ ಬಿಟ್ಟಿದ್ದರು.

ಅದೊಂಥರ ವಿಚಿತ್ರ. ರಾಹುಲ್ 10 ವಿಧಾನಸಭೆಗಳನ್ನು ಸೋತರೂ ಆತ 2019 ರ ಅತ್ಯುತ್ತಮ ಪ್ರಧಾನಮಂತ್ರಿ ಅಭ್ಯಥರ್ಿ. ಮೋದಿ ಎಲ್ಲ ರಾಜ್ಯಗಳನ್ನು ಗೆಲ್ಲುತ್ತಾ ಬಂದು ಉಪ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಮೋದಿಯ ವಿರುದ್ಧ ಅಲೆ ನಡೆಯುತ್ತಿದೆ ಎಂದರ್ಥ.

4

ಆದರೆ ಒಂದಂತೂ ನಿಚ್ಚಳವಾಗಿದೆ. 2019 ರ ಚುನಾವಣೆ 2004 ರಂತಾಗುವುದು ಸಾಧ್ಯವೇ ಇಲ್ಲ. ಏಕೆಂದರೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ಆ ವೇಳೆಗೆ ಆರೋಗ್ಯ ಹದಗೆಟ್ಟಿತ್ತು. ಅವರಿಗೆ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಭರವಸೆಯಿದ್ದದ್ದು ಅಡ್ವಾಣಿಯವರೊಬ್ಬರ ಮೇಲೆ. ಹಾಗೆಯೇ ಇಡಿಯ ಚುನಾವಣಾ ತಂತ್ರಗಾರಿಕೆಯನ್ನು ಪ್ರಮೋದ್ ಮಹಾಜನ್ ಒಬ್ಬರೇ ನಿರ್ವಹಿಸುತ್ತಿದ್ದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈಗಿನ ಮೋದಿ-ಅಮಿತ್ ಶಾ ಜೋಡಿಯಂತೆ ಅಟಲ್ಜಿ ರಾಜ್ಯಗಳನ್ನು ಗೆಲ್ಲುವ ಉತ್ಸುಕತೆ ತೋರಲಿಲ್ಲ. ಅವರಿಗೆ ಸುದೀರ್ಘ ಪಯಣದ ಮೇಲೆ ನಂಬಿಕೆಯಿತ್ತೆನಿಸುತ್ತದೆ. ಆದರೆ ಅಮಿತ್ ಶಾ ಹಾಗಲ್ಲ. ಅವರಿಗೆ ಗೆಲ್ಲುವುದೆನ್ನುವುದು ಉಸಿರಾಡಿದಷ್ಟೇ ಸಹಜವಾದ ಅಭ್ಯಾಸವಾಗಿಬಿಟ್ಟಿದೆ. ಅದಕ್ಕಾಗಿ ಶ್ರಮ ಹಾಕುತ್ತಾರೆ. ಒಂದು ಚುನಾವಣೆ ನಡೆಯುತ್ತಿರುವಾಗಲೇ ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಾರೆ. ನಾಯಕರನ್ನು ಮೆಚ್ಚಿ ಕುಳಿತುಕೊಳ್ಳುವುದು ಅವರ ಜಾಯಮಾನದಲ್ಲಿಯೇ ಇಲ್ಲ. ಯಾರೂ ಕೆಲಸ ಮಾಡದೇ ಹೋದಾಗ ಬೂತ್ ಮಟ್ಟಕ್ಕೆ ತಾವೇ ಇಳಿದು ಕೆಲಸ ಮಾಡುವಲ್ಲಿ ಉತ್ಸುಕತೆ ತೋರುತ್ತಾರೆ. ಹೀಗಾಗಿ ಸತತವಾಗಿ ಗೆಲ್ಲುವ ಅಭ್ಯಾಸ ಸಾಮಾನ್ಯ ಬಿಜೆಪಿ ಕಾರ್ಯಕರ್ತನಿಗೂ ಆಗಿಬಿಟ್ಟಿದೆ. ಅದಕ್ಕೆ ಒಂದು ಉಪ ಚುನಾವಣೆಯ ಸೋಲೂ ಕೂಡ ಅವನಲ್ಲಿ 2019 ರ ಚುನಾವಣೆಯ ಕುರಿತಂತೆ ಗಾಬರಿ ಹುಟ್ಟಿಸುತ್ತದೆ. ಇಷ್ಟಕ್ಕೂ ಈ ಹೆದರಿಕೆ ಕೆಟ್ಟದ್ದೇನೂ ಅಲ್ಲ. ಈ ಹೆದರಿಕೆಯ ಕಾರಣದಿಂದಾಗಿಯೇ ಅನೇಕರು ಅದಾಗಲೇ ಮೋದಿಯ ಗೆಲುವಿಗಾಗಿ ಪ್ರಾರ್ಥನೆ ಶುರುಮಾಡಲಾರಂಭಿಸಿದ್ದಾರೆ, ಬರವಣಿಗೆ ಮಾಡಲಾರಂಭಿಸಿದ್ದಾರೆ, ಆರೋಪಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಇವಕ್ಕೆಲ್ಲಾ ಕಿರೀಟ ಪ್ರಾಯವಾಗಿ ಅಮಿತ್ ಶಾ ಕೂಡ ಸಂಪರ್ಕ ಅಭಿಯಾನವೊಂದಕ್ಕೆ ಚಾಲನೆ ಕೊಟ್ಟು ಮುಂದಿನ ಒಂದು ವರ್ಷಗಳ ಕಾಲ ನರೇಂದ್ರಮೋದಿಯವರ ಒಟ್ಟಾರೆ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿಯಾಗಿದೆ. ಹಾಗಂತ ಬರಿ ಬಾಯಿ ಮಾತಿನಲ್ಲಿ ಹೇಳಿ ಕುಳಿತಿಲ್ಲ; ತಾವೇ ಈ ಕೆಲಸವನ್ನು ಆರಂಭಿಸಿಬಿಟ್ಟಿದ್ದಾರೆ!

ಇನ್ನೊಂದೆಡೆ ಚುನಾವಣೆಗೆ ಒಂದು ವರ್ಷದ ಮುನ್ನ ಒಟ್ಟಾಗಿರುವ ರಾಜ್ಯ ಮಟ್ಟದ ಪಕ್ಷಗಳು ತಮ್ಮ ತಮ್ಮ ರಾಜ್ಯದಲ್ಲಿ ಸೀಟು ಹೊಂದಾಣಿಕೆಯ ವಿಚಾರ ಬಂದಾಗ ಖಂಡಿತವಾಗಿಯೂ ಬಡಿದಾಡಿಕೊಳ್ಳಲಿವೆ. ಈ ಹೊತ್ತಲ್ಲಿ ತುಂಬ ದೊಡ್ಡ ತ್ಯಾಗಕ್ಕೆ ಸಿದ್ಧವಾಗಬೇಕಿರೋದು ಕಾಂಗ್ರೆಸ್ಸೇ. ಕಾಂಗ್ರೆಸ್ಸು ಅನೇಕ ರಾಜ್ಯಗಳಲ್ಲಿ ಎರಡಂಕಿಯ ಸೀಟುಗಳನ್ನು ಗೆಲ್ಲುವುದಿರಲಿ ಎರಡಂಕಿಯ ಸೀಟುಗಳಲ್ಲಿ ಉಮೇದುವಾರಿಕೆ ಸಲ್ಲಿಸುವುದೂ ಅನುಮಾನ. ಅಲ್ಲಿಗೆ ಕಾಂಗ್ರೆಸ್ ಮುಕ್ತ ಭಾರತದ ಕನಸು ಖಾತ್ರಿಯೇ. ಚುನಾವಣೆಯ ಹೊತ್ತಲ್ಲಿ ನರೇಂದ್ರಮೋದಿ ಹೀಗೆ ಮಾಡುವ ಭರವಸೆ ಕೊಟ್ಟಿದ್ದು ನಿಮಗೆ ನೆನಪಿರಬೇಕು. ಪುಣ್ಯಾತ್ಮ ಕೊಟ್ಟ ಮಾತನ್ನು ಈಡೇರಿಸದೇ ಬಿಡಲಾರ ಎಂಬುದು ಈ ವಿಚಾರದಲ್ಲೂ ಸಾಬೀತಾಯ್ತು!

  • Share On Facebook
  • Tweet It


- Advertisement -
2019bjpindiamodivajpayi


Trending Now
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Chakravarty Sulibele March 29, 2023
ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
Chakravarty Sulibele March 27, 2023
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
July 1, 2018
Leave A Reply

  • Recent Posts

    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
  • Popular Posts

    • 1
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 2
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 3
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 4
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 5
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search