ಯೋಗ ಕಲಿಸಿದ್ದಕ್ಕೆ ಮುಸ್ಲಿಂ ಬಾಲಕಿಗೆ ಮೊನ್ನೆ ಬೆದರಿಕೆ, ಈಗ ಅವರ ಮನೆಗೆ ಕಲ್ಲೆಸೆತ!
ರಾಂಚಿ: ಇಸ್ಲಾಂನ ಕೆಲ ಮೂಲಭೂತವಾದಿಗಳ ಬಣ್ಣ ಮತ್ತೆ ಬಯಲಾಗಿದ್ದು, ಜಾರ್ಖಂಡ್ ನಲ್ಲಿ ಮುಸ್ಲಿಮ್ ಯುವತಿಯರಿಗೆ ಯೋಗ ಕಲಿಸುತ್ತಿದ್ದ ರಾಫಿಯಾ ನಾಜ್ ಎಂಬ ಮುಸ್ಲಿಂ ಯುವತಿ ಮನೆಗೆ ಅಪರಿಚಿತ ವ್ಯಕ್ತಿಗಳು ಕಲ್ಲೆಸೆದು ಉದ್ಧಟತನ ಮೆರೆದಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಯೋಗದ ಕುರಿತು, ಯೋಗ ಕಲಿಸಿದ್ದಕ್ಕಾಗಿ ಧರ್ಮಗುರುಗಳು ಫತ್ವಾ ಹೊರಡಿಸಿರುವ ಕುರಿತು ಮಾನತಾಡುವಾಗ, ಏಕಾಏಕಿ ಕೆಲವು ಮುಸ್ಲಿಮರು ಮನೆ ಎದುರು ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ರಾಫಿಯಾ ತಿಳಿಸಿದ್ದಾರೆ.
ಇನ್ನು ರಾಫಿಯಾ ಮನೆ ಮೇಲೆ ಕಲ್ಲೆಸೆದುದನ್ನು ಯೋಗ ಗುರು ಬಾಬಾ ರಾಮದೇವ್ ಖಂಡಿಸಿದ್ದು, ಇರಾಕ್, ಪಾಕಿಸ್ತಾನ, ಸೌದಿ ಅರೇಬಿಯಾ, ಅಫ್ಘಾನಿಸ್ತಾನದಲ್ಲಿ ಮುಸ್ಲಿಮರು ಯೋಗ ಮಾಡುತ್ತಾರೆ. ಯೋಗಾಭ್ಯಾಸದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಹಾಗಾಗಿ ಯೋಗದ ವಿಷಯದಲ್ಲಿ ಧರ್ಮ ಎಳೆದು ತರುವುದು ಬೇಡ ಎಂದಿದ್ದಾರೆ.
ಯೋಗ ಕಲಿಸುತ್ತಿದ್ದ ಕಾರಣ ರಾಫಿಯಾ ನಾಜ್ ಗೆ ಮೂರು ದಿನಗಳ ಹಿಂದೆ ಜೀವ ಬೆದರಿಕೆ ಹಾಕಲಾಗಿತ್ತು ಹಾಗೂ ಕೆಲವು ಮುಸ್ಲಿಂ ಧರ್ಮಗುರುಗಳು ಫತ್ವಾ ಹೊರಡಿಸಿದ್ದರು.
Leave A Reply