ಲವ್ ಜಿಹಾದ್ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ: ವಿಎಚ್ ಪಿ
Posted On November 21, 2017
0

ದೆಹಲಿ: ಲವ್ ಜಿಹಾದ್ ರಾಷ್ಟ್ರೀಯ ಭದ್ರತೆಗೆ ತೊಡಕಾಗಿದೆ. ಆದರೆ ಬುದ್ಧಿಜೀವಿಗಳ ತಂಡ ಅದನ್ನು ನಿರಾಕರಿಸಿ ಜಿಹಾದಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ಆರೋಪಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಜೈನ್ ‘ ಇಡೀ ವಿಶ್ವಾದ್ಯಂತ ನಡೆಯುತ್ತಿರುವ ಲವ್ ಜಿಹಾದ್ ಹೆಸರಲ್ಲಿ ಬಾರಿ ಪಿತೂರಿ ತಡೆಯಲು ಯೋಚನೆ ಮಾಡಲಾಗುತ್ತಿದೆ. ಆದರೆ ದೇಶದ ಕೆಲವು ಪ್ರಗತಿಪರರ ಎನಿಸಿಕೊಂಡವರು ಜಿಹಾದಿಗಳನ್ನು ಬೆಂಬಲಿಸುತ್ತಿರುವುದು ಆಘಾತಕಾರಿ ಎಂದು ಹೇಳಿದ್ದಾರೆ.
ಜೈಪುರದಲ್ಲಿ ನಡೆಯುತ್ತಿರುವ ಹಿಂದೂ ಸಾಂಸ್ಕೃತಿಕ ಸೇವಾ ಉತ್ಸವದ ಲವ್ ಜಿಹಾದ್ ಜಾಗೃತಿ ಬಗ್ಗೆ ಕರಪತ್ರ ಹಂಚಿರುವುದು ವಿವಾದಕ್ಕೆ ಕಾರಣವಾಗಿದ್ದರಿಂದ ವಿಶ್ವ ಹಿಂದೂ ಪರಿಷತ್ ಈ ಹೇಳಿಕೆ ಹೊರಡಿಸಿದೆ. ಲವ್ ಜಿಹಾದ್ ಗೆ ಬೆಂಬಲಿಸುವುದು ದೇಶದ ಶಾಂತಿ ಸುವ್ಯವಸ್ಥೆಗೆ ತೊಡಕಾಗುತ್ತದೆ. ಸಮಾಜಗಳ ಮಧ್ಯೆ ಸ್ವಾಸ್ಥ್ಯ ಹಾಳು ಮಾಡುತ್ತದೆ. ಜಿಹಾದ್ ವಿರುದ್ಧ ಜಾಗೃತಿ ಅಗತ್ಯ ಎಂದು ಹೇಳಿದ್ದಾರೆ.
Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
September 17, 2025