• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಕಾಶ್ಮೀರದಲ್ಲಿ ಉಗ್ರರ ಶರಣಾಗತಿಗೆ ಸಿಆರ್ ಪಿಎಫ್ ನಿಂದ ಹೆಲ್ಪ್ ಲೈನ್

TNN Correspondent Posted On November 21, 2017
0


0
Shares
  • Share On Facebook
  • Tweet It

ದೆಹಲಿ: ದೇಶದಲ್ಲಿನ ಭಯೋತ್ಪಾದನೆಯನ್ನು ಬೇರು ಮಟ್ಟದಿಂದ ತೊಡೆದು ಹಾಕಲು ಪಣ ತೊಟ್ಟಿರುವ ಭಾರತೀಯ ಸೇನೆ ಉಗ್ರರನ್ನು ಶರಣಾಗತಿಗೆ ಹೊಸ ಯೋಜನೆ ರೂಪಿಸಿದೆ. ಶರಣಾಗಲು ಭಯಸುವ ಉಗ್ರರು ಸೇನೆ ನೇತೃತ್ವದಲ್ಲಿ ಮರಳಿ ಸಮಾಜದ ಮುನ್ನಲೆಗೆ ಬರಲು ಹೆಲ್ಪ್ ಲೈನ್ ಆರಂಭಿಸಲಾಗಿದೆ.

ಶರಣಾಗಲು ಭಯಸುವ ಉಗ್ರರಿಗೆ 14411 ಸಂಖ್ಯೆ ಹೊಂದಿರುವ ಬ್ಯಾನರ್ ಗಳನ್ನು ಕಾಶ್ಮೀರ ಮತ್ತು ಶ್ರೀನಗರದಲ್ಲಿ ಅಳವಡಿಸಲಾಗುತ್ತಿದೆ. ಕಾಶ್ಮೀರ ಕಣಿವೆಯ ಸ್ಥಳೀಯ ಯುವಕರೂ ಕೂಡ ಈ ಹೆಲ್ಪ್ ಲೈನ್ ಗೆ ಕರೆ ಮಾಡಿ ಉಗ್ರರ ಬಗ್ಗೆ ಮಾಹಿತಿ ನೀಡಬಹುದು. ಈ ಯೋಜನೆಗೆ ‘ಮದದಗರ’ ಎಂದು ಹೆಸರಿಡಲಾಗಿದೆ.  ಬಂದೂಕು ತೊರೆದು ಶರಣಾಗಲು ಬಯಸುವ ಉಗ್ರರಿಗೆ ನಾವು ಸದಾ ಸ್ವಾಗತಿಸುತ್ತೇವೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಭಾನುವಾರ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಸಿಆರ್ ಪಿಎಫ್ ನ ಹೆಲ್ಪ್ ಲೈನ್ ಸಂಖ್ಯೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಯಾವುದೇ ಸಮಯದಲ್ಲು ಸಂಪರ್ಕಿಸಬಹುದು. ಹೆಲ್ಪ್ ಲೈನ್ ಹೊಂದಿರುವ ಮದದ್ ಗರ ಯೋಜನೆಯ 1000 ಪೋಸ್ಟ್ ರ್ ಗಳನ್ನು ಸಿದ್ಧಪಡಿಸಲಾಗಿದೆ. ದೆಹಲಿಯಲ್ಲೂ ಈ ಪೋಸ್ಟ್ ರ್ ಗಳನ್ನು ಕಾಶ್ಮೀರಿಗಳು ಹೆಚ್ಚು ಇರುವ ಪ್ರದೇಶದಲ್ಲಿ ಅಂಟಿಸಲಾಗುತ್ತಿದೆ.

ಕೇವಲ ಉಗ್ರರಷ್ಟೇ ಅಲ್ಲದೇ ಅಪಘಾತ ಸಂಭವಿಸಿದಾಗ, ವ್ಯಕ್ತಿ ಸಂಕಷ್ಟದಲ್ಲಿದ್ದಾಗ, ಜನರು ಸಂಕಷ್ಟದಲ್ಲಿದ್ದಾಗಲೂ ಈ ಹೆಲ್ಪ್ ಲೈನ್ ಗೆ ಕರೆ ಮಾಡಬಹುದು ಎಂದು ಸೈನ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರದ ಕಣಿವೆಯಲ್ಲಿ ಭಯೋತ್ಪಾದಕ ನಡು ಮುರಿಯಲು ಪಣ ತೊಟ್ಟಿರುವ ಸೇನೆ ‘ಆಪರೇಷನ್ ಆಲೌಟ್’ ಜಾರಿಯಲ್ಲಿಟ್ಟಿದೆ. 2017ರಲ್ಲೇ 197 ಉಗ್ರರನ್ನು ಹತ್ಯೆ ಮಾಡಲಾಗಿದೆ. ಒಂದೆಡೆ ಗುಂಡಿನ ಮೊರೆತ ಮತ್ತೊಂದೆಡೆ ಸಾರ್ವಜನಿಕರಿಗೆ ಸಹಾಯ ಮಾಡುವ ಮೂಲಕ ಸೇನೆ ಎಲ್ಲ ಪ್ರಯೋಗಗಳನ್ನು ಮಾಡಿ, ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರುತ್ತಿದೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search