ದೇಶದ ಆರ್ಥಿಕ ಸ್ಥಿತಿ ಬುಡಮೇಲಾಯಿತು ಎಂದವರೇ, ಈಗೆಲ್ಲಿದ್ದೀರಿ?
ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ನೋಟು ನಿಷೇಧ ಮಾಡುತ್ತಲೇ, ಕಾಂಗ್ರೆಸ್ ಸೇರಿ ಹಲವು ವಿರೋಧ ಪಕ್ಷಗಳು, ಎಡಬಿಡಂಗಿಗಳು, ಬುದ್ಧಿಜೀವಿಗಳು, ಮೋದಿ ವಿರುದ್ಧ ಟೀಕಿಸಿದರು. ಇದು ಜನರಿಗೆ ತೊಂದರೆ ನೀಡುವ ನಿರ್ಧಾರ ಎಂದರು. ಆದರೂ ಜನ ಬ್ಯಾಂಕುಗಳ ಎದುರು ಸಾಲು ನಿಂತು ಮೋದಿ ನಿರ್ಧಾರವನ್ನು ಬೆಂಬಲಿಸಿದರು.
ಬಳಿಕ ಕೇಂದ್ರ ಸರ್ಕಾರ ತೆರಿಗೆ ಪದ್ಧತಿ ಸುಧಾರಣೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿದರೂ. ಆಗಲೂ ಇವರು ಇದು ದೇಶದ ವಿತ್ತೀಯ ಪರಿಸ್ಥಿತಿ ಬುಡಮೇಲಾಗುತ್ತದೆ ಎಂದೇ ಬೊಬ್ಬೆ ಹಾಕಿದರು. ಜಿಎಸ್ಟಿ ಜಾರಿಯಾದ ಬಳಿಕ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 5.7ಕ್ಕೆ ಇಳಿಯಿತೋ, ಈ ಕೇಂದ್ರ ಸರ್ಕಾರದ ವಿರೋಧಿಗಳಿಗೆ ಸಕ್ಕರೆ ತಿಂದಷ್ಟೇ ಖುಷಿಯಾಯಿತು. ಆಳಿಗೊಂದು ಎಂಬಂತೆ ಕೇಂದ್ರದ ವಿರುದ್ಧ ಕಲ್ಲೆಸೆದರು.
ಆದರೆ ಇನ್ನು ಮುಂದೆ ಕೇಂದ್ರ ಸರ್ಕಾರವನ್ನು ಸುಖಾಸುಮ್ಮನೆ ತೆಗಳಲು ಅವರಿಗಿದ್ದ ಒಂದು ಕಾರಣವೂ ಇಲ್ಲದಂತಾಗಿದ್ದು, ಜುಲೈ-ಸೆಪ್ಟೆಂಬರ್ ನಲ್ಲಿ ದೇಶದ ಜಿಡಿಪಿ 6.3ಕ್ಕೆ ಏರಿಕೆಯಾಗಿದೆ. ಆರ್ಥಿಕ ತಜ್ಞರ ಪ್ರಕಾರ ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿದುಬಂದಿದೆ. ಏಪ್ರಿಲ್ ಜೂನ್ ನಲ್ಲಿ ಜಿಡಿಪಿ 5.7ಕ್ಕೆ ಕುಸಿದಿದ್ದು, ಪ್ರಸ್ತುತ 0.6ರಷ್ಟು ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಕಾರ ಭಾರತ 2022ರ ವೇಳೆಗೆ ಜಿಡಿಪಿಯಲ್ಲಿ ಜಪಾನ್ ಅನ್ನು ಸಹ ಮೀರಿಸಲಿದೆ ಎಂದು ತಿಳಿದುಬಂದಿದ್ದು, ಭಾರತದ ಆರ್ಥಿಕ ಸ್ಥಿತಿ ಉಚ್ಛ್ರಾಯ ಸ್ಥಿತಿ ತಲುಪಲಿದೆ ಎಂದೇ ಹೇಳಲಾಗುತ್ತಿದೆ. ಅಲ್ಲದೆ ಇದು, ಗುಜರಾತ್ ಚುನಾವಣೆ ಮೇಲೂ ಬಿಜೆಪಿಗೆ ಸಕಾರಾತ್ಮಕವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ನೋಟ್ಯಂತರ, ಜಿಎಸ್ಟಿ ಬಳಿಕ ಕಾಳಧನಿಕರಿಗೆ ಅಂಕುಶ ಸೇರಿ ದೇಶದ ಜಿಡಿಪಿ ಸಹ ವೃದ್ಧಿಸುತ್ತಿರುವುದು ಸಕಾರಾತ್ಮಕವಾಗಿದೆ.
Leave A Reply