ಮಗಳನ್ನು ರಕ್ಷಿಸಿ, ಸೊಸೆಯನ್ನು ಮನೆಗೆ ಕರೆತನ್ನಿ, ಇದು ಲವ್ ಜಿಹಾದ್ ವಿರುದ್ಧದ ಹಿಂದೂ ಅಭಿಯಾನ!
ದೇಶದಲ್ಲಿ ಹಿಂದೂ ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಲವ್ ಜಿಹಾದ್ ಬಳಸುವ ಮೂಲಕ ಮತಾಂತರದ ಖೆಡ್ಡಾಕ್ಕೆ ಬೀಳಿಸುವ ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆ ನೂತನ ಅಭಿಯಾನವೊಂದನ್ನು ಆರಂಭಿಸಿದೆ.
ವಿಶ್ವ ಹಿಂದೂ ಪರಿಷತ್ತಿನ ಅಂಗ ಸಂಸ್ಥೆಯಾದ ಹಿಂದೂ ಜಾಗರಣ್ ಮಂಚ್ ಈ ಘೋಷಣೆ ಮಾಡಿದ್ದು, ಲವ್ ಜಿಹಾದ್ ಬದಲಿಗೆ, ಭೇಟಿ ಬಚಾವೋ, ಬಹು ಲಾವೋ (ಮಗಳನ್ನು ರಕ್ಷಿಸಿ, ಸೊಸೆಯನ್ನು ಮನೆಗೆ ಕರೆದು ತನ್ನಿ) ಅಭಿಯಾನ ಆರಂಭಿಸಲು ತೀರ್ಮಾನಿಸಿದ್ದಾರೆ.
ಈ ಕುರಿತು ಹಿಂದೂ ಜಾಗರಣ್ ಮಂಚ್ ಮುಖಂಡ ಅಜ್ಜು ಚೌಹಾಣ್ ಮಾತನಾಡಿದ್ದು, ಇದುವರೆಗೂ 15 ಮುಸ್ಲಿಂ ಯುವತಿಯರ ಮನವೊಲಿಸಿ ಹಿಂದೂ ಯುವಕರನ್ನು ಮದುವೆಯಾಗುವಂತೆ ಮಾಡಲಾಗಿದೆ. ಮುಂದಿನ ಆರು ತಿಂಗಳಲ್ಲಿ 2,100 ಮುಸ್ಲಿಂ ಶಿಕ್ಷಣವಂತ ಯುವತಿಯರ ಮನವೊಲಿಸಿ, ಹಿಂದೂ ಧರ್ಮದ ಹಲವು ಸಮುದಾದಯ ಜನರೊಂದಿಗೆ ಮದುವೆ ಮಾಡಿಸಲಾಗುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಲವ್ ಜಿಹಾದ್ ನಿಂದ ಹಿಂದೂ ಯುವತಿಯರು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವುದಲ್ಲದೇ, ಮಾರಾಟ, ವೇಶ್ಯಾವಾಟಿಕೆ ಸೇರಿ ಹಲವು ಚಟುವಟಿಕೆಗಳಲ್ಲಿ ಒತ್ತಾಯಪೂರ್ವಕವಾಗಿ ತೊಡಗಿಕೊಂಡು ಜೀವನ ನರಕವಾಗಿದೆ. ಹಾಗಾಗಿ ಲವ್ ಜಿಹಾದ್ ವಿರುದ್ಧ ಈ ಅಭಿಯಾನ ಆರಂಭಿಸಲಾಗಿದೆ.
ಆದರೆ ಮುಸ್ಲಿಂ ಮೂಲಭೂತವಾದಿಗಳಂತೆ ಮುಸ್ಲಿಂ ಯುವತಿಯರನ್ನು ಬಲವಂತವಾಗಿ ಮತಾಂತರಗೊಳಿಸುವುದಿಲ್ಲ ಹಾಗೂ ಮದುವೆ ಮಾಡಿಸುವುದಿಲ್ಲ. ಬದಲಾಗಿ ಅವರ ಮನವೊಲಿಸಿ ಮದುವೆ ಮಾಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆಗ್ರಾ ನಗರದ ಪ್ರಮುಖ ಏರಿಯಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಈ ಅಭಿಯಾನ ಕೈಗೊಳ್ಳಲಿದ್ದು, ಲವ್ ಜಿಹಾದ್ ಮುಕ್ತ ಉತ್ತರ ಪ್ರದೇಶ ನಿರ್ಮಿಸುವುದೇ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ. ಕೇರಳ, ಪಂಜಾಬ್, ಮುಂಬೈ ಸೇರಿ ದೇಶದ ಹಲವೆಡೆ ಲವ್ ಜಿಹಾದ್ ಪ್ರಕರಣ ಸುದ್ದಿಯಾಗುತ್ತಿವೆ.
Leave A Reply