ಸಮುದ್ರ ವಿಮಾನ ಪ್ರಯಾಣ ಮಾಡಿ ಇತಿಹಾಸ ಬರೆದ ಮೋದಿ
ಅಹಮದಾಬಾದ್: ಸಾಮಾನ್ಯವಾಗಿ ಪ್ರಧಾನಿಯಾದವರೂ ಸುತ್ತ ನೂರಾರು ವಾಹನಗಳು, ಭಾರಿ ಭದ್ರತಾ ವ್ಯವಸ್ಥೆಯೊಂದಿಗೆ ಪ್ರಯಾಣ ಮಾಡುತ್ತಾರೆ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಸಮುದ್ರ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಇತಿಹಾಸ ಬರೆದರು.
ಗುಜರಾತ್ ಚುನಾವಣೆ ಪ್ರಚಾರ ನಿಮಿತ್ತ ಗುಜರಾತ್ ನ ಮೆಹ್ಸಾನಾ ಜಿಲ್ಲೆಯಲ್ಲಿರುವ ಅಂಬಾಜಿ ದೇವಸ್ಥಾನಕ್ಕೆ ಭೇಟಿ ನೀಡಲು ಸಮುದ್ರ ವಿಮಾನವನ್ನು ಮೋದಿ ಬಳಸಿದರು. ಮೆಹ್ಸಾನಾ ಜಿಲ್ಲೆಯಲ್ಲಿ ರೋಡ್ ಶೋಗೆ ಪೊಲೀಸರು ಅನುಮತಿ ನೀಡದಿದ್ದರಿಂದ 35 ಕಿ.ಮೀ ರೋಡ್ ಶೋ ಮೊಟಕುಗೊಳಿಸಿ, ಸಾಬರಮತ್ತಿ ನದಿಯಲ್ಲಿ ಸಮುದ್ರವಿಮಾನವನ್ನು ಬಳಸಿ ಅಂಬಾಜಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಈ ಪ್ರಯಾಣವನ್ನು ಸ್ವಾಗತಿಸಿರುವ ಕೇಂದ್ರ ಸಚಿವ ನಿತೀನ್ ಗಡ್ಕರಿ ‘ ಪ್ರಧಾನಿ ಇಂದು ಸಮುದ್ರವಿಮಾನದಲ್ಲಿ ಪ್ರಯಾಣಿಸಿದ ಐತಿಹಾಸಿಕ ದಿನವಾಗಿದೆ. ಪ್ರಧಾನಿಗಳ ಈ ಪ್ರಯಾಣ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಪ್ರಧಾನಿ ನರೇಂದ್ರ ಮೋದಿ ಯಾವುದೇ ಸಾರಿಗೆಯಲ್ಲೂ ಪ್ರಯಾಣಿಸಬಹುದು. ರಾಹುಲ್ ಗಾಂಧಿ ಕೂಡ ಸಮುದ್ರ ವಿಮಾನ ಬಳಸಿ ಪ್ರಯಾಣ ಮಾಡಬಹುದು, ಯಾವುದೇ ಅಭ್ಯಂತರವಿಲ್ಲ ಎಂದು ರಾಹುಲ್ ಗಾಂಧಿ ಕಾಲೆಳೆದರು.
ಚಿತ್ರಕೃಪೆ-ಎಎನ್ಐ
Leave A Reply