ಅಯ್ಯಪ್ಪ ಆಯ್ತು ಇದೀಗ ಬಿಹಾರದ ದೇವಸ್ಥಾನದ ಮೇಲೆ ಐಸಿಸ್ ಉಗ್ರರ ಕಣ್ಣು
ಪಟನಾ: ಇರಾಕ್ ನಿಂದ ಹೊರ ಒಡಿಸಲ್ಪಟ್ಟ ಐಸಿಸ್ ಇದೀಗ ಭಾರತದ ಮೇಲೆ ಕಣ್ಣಿಟ್ಟಿದ್ದು, ಭಾರತದಲ್ಲಿ ತನ್ನ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚೂ ಹೂಡಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೇಲೆ ದಾಳಿ ನಡೆಸಲಾಗುವುದು ಎಚ್ಚರಿಕೆ ನೀಡಿದ್ದ ಐಸಿಸ್ ಇದೀಗ ಬಿಹಾರದ ಗೋಪಾಲಗಂಜ್ ಜಿಲ್ಲೆಯ ಪ್ರಸಿದ್ಧ ಥವೆ ದೇವಸ್ಥಾನದ ಮೇಲೆ ಉಗ್ರರು ದಾಳಿ ಮಾಡುವ ಸಂಚು ಹೂಡಿದೆ. ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಸ್ಲೀಪರ್ ಸೆಲ್ ಗಳ ಮೂಲಕ ದೇವಸ್ಥಾನದ ಮೇಲೆ ದಾಳಿ ನಡೆಸುವ ಸಂಭವವಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಈ ಕುರಿತು ಸ್ಥಳೀಯ ಪೊಲೀಸರು ಭದ್ರತೆ ಕುರಿತು ವಿವರವಾದ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿದ್ದು, ದೇವಸ್ಥಾನಕ್ಕೆ ಹೆಚ್ಚುವರಿ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಥವೆ ದೇವಸ್ಥಾನಕ್ಕೆ ಉತ್ತರಾಖಂಡ, ಉತ್ತರ ಪ್ರದೇಶದ, ನೇಪಾಳ, ಪಶ್ಚಿಮ ಬಂಗಾಳದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ದೇವಸ್ಥಾನದ ಹತ್ತಿರ ಸೂಕ್ತ ಭದ್ರತೆ ಇಲ್ಲ. ಭಕ್ತರನ್ನು ಪರಿಶೀಲಿಸುವ ಸರಿಯಾದ ಕ್ರಮಗಳಿಲ್ಲ. ಕೂಡಲೇ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ದೇವಸ್ಥಾನ ಆಡಳಿತ ಮಂಡಳಿ ಮತ್ತು ಬಿಹಾರ್ ಪೊಲೀಸರಿಗೆ ಸೂಚನೆ ನೀಡಲಾಗಿದೆ.
Leave A Reply