• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಾಡಲು ಕಾಂಗ್ರೆಸ್ ಮುಕ್ತ, ಮತದಾರ ನೀ ಶಕ್ತ…

-ವಿಶಾಲ್ ಗೌಡ, ಕುಶಾಲನಗರ Posted On December 18, 2017
0


0
Shares
  • Share On Facebook
  • Tweet It

ಗುಜರಾತ್ ಹಾಗೂ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ…

  • ನೋಟು ನಿಷೇಧ, ಜಿಎಸ್ಟಿಯಿಂದ ಜನ ಬೇಸತ್ತಿದ್ದಾರೆ, ಕಾಂಗ್ರೆಸ್ ಗೆಲ್ಲೋದು ಖಚಿತ
  • ಹತ್ತಕ್ಕೂ ದೇವಾಲಯಗಳಿಗೆ ತೆರಳಿದ ರಾಹುಲ್ ಗಾಂಧಿ
  • ನರೇಂದ್ರ ಮೋದಿ ಅಲೆ ಇಲ್ಲ, ಕಾಂಗ್ರೆಸ್ ಗೆಲುವು ತಪ್ಪಿಸಲು ಆಗಲ್ಲ
  • ಗುಜರಾತ್ ಅಭಿವೃದ್ಧಿಯಾಗಿಲ್ಲ, ಕಾಂಗ್ರೆಸ್ಸಿಗೇ ಗೆಲುವು
  • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಟೇಲರಿಗೆ ಮೀಸಲು
  • ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಬೆಂಬಲದಿಂದ ಕಾಂಗ್ರೆಸ್ಸಿಗೆ ಬಲ

ಹೀಗೆ ಚುನಾವಣೆ ಗೋಷಣೆಯಾಗುತ್ತಲೇ ಕಾಂಗ್ರೆಸ್ಸಿಗರು, ರಾಹುಲ್ ಗಾಂಧಿ ಹಳೆಯ, ಹೊಸ ವರಸೆ ಆರಂಭಿಸಿದರು. ನೋಟು ನಿಷೇಧ, ಜಿಎಸ್ಟಿ ಜಾರಿಯಿಂದ ಮೋದಿ ಸೋಲಲಿದ್ದಾರೆ ಎಂದೇ ಹೇಳಲಾಯಿತು, ರಾಹುಲ್ ಗಾಂಧಿ ಸಾಲು ಸಾಲು ರ್ಯಾಲಿಯ ಜತೆಗೆ ದೇವಾಲಯಗಳಿಗೆ ಭೇಟಿ ನೀಡಿ ಹಿಂದುತ್ವದ ಕಾರ್ಡ್ ಬಳಸಿದರು.

ಆದರೂ ಫಲಿತಾಂಶವೇನಾಯಿತು?

ಗುಜರಾತಿನಲ್ಲಿ ಮತ್ತೆ ಬಿಜೆಪಿಯೇ ಗೆದ್ದಿದೆ. ಅತ್ತ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಬಿಜೆಪಿಯೇ ಗದ್ದುಗೆ ಏರಿದೆ. ಆ ಮೂಲಕ ಮೋದಿ ಅವರ ಅಭಿವೃದ್ಧಿ ಪರ ಆಡಳಿತ ಹಾಗೂ ಕಾಂಗ್ರೆಸ್ ವಿರೋಧಿ ಜನರ ನಾಡಿಮಿಡಿತ ಬಿಜೆಪಿ ಗೆಲುವಿಗೆ ಸಾಕ್ಷಿಯಾಗಿದೆ.

ಆದರೆ ರಾಜ್ಯದಲ್ಲಿ ನಮ್ಮ ಘನವೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ, ನಮಗೆ ಇನ್ನೂ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅನುಮಾನವಿದೆ. ಬಿಜೆಪಿ ಬಳಿ ದುಡ್ಡಿತ್ತು, ನಮ್ಮ ಬಳಿ ದುಡ್ಡಿರಲಿಲ್ಲ, ಅದಕ್ಕಾಗಿಯೇ ಸೋತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಸ್ವಾಮಿ ಸಿದ್ದರಾಮಯ್ಯನವರೇ ಕಾನೂನು ಓದಿದ ನೀವೇ ಹೀಗೆ ಅನಕ್ಷರಸ್ಥರಂತೆ ಮಾತನಾಡಿದರೆ ಹೇಗೆ? ನಿಮ್ಮ ಮಾತಿನಂತೆಯೇ ಹೋಗುವುದಾದರೆ, ಮತಯಂತ್ರ ತಿರುಚಿದ್ದರೆ ಕಾಂಗ್ರೆಸ್ಸಿಗೆ ಎರಡೂ ರಾಜ್ಯಗಳಲ್ಲಿ ವೋಟು ಬೀಳಲು ಸಾಧ್ಯವಿತ್ತೇ? ನೀವು ಅಷ್ಟು ಕ್ಷೇತ್ರಗಳಲ್ಲಿ ಗೆಲ್ಲಲು ಆಗುತ್ತಿತ್ತೇ? ಹಾಗಾದರೆ ಕಾಂಗ್ರೆಸ್ ಗೆದ್ದ ಕ್ಷೇತ್ರಗಳಲ್ಲಿ ಹಣ ಹಂಚಿದ್ದೀರಿಯೇ? ಯಾವ ನಾಲಿಗೆ ಇಟ್ಟುಕೊಂಡು ಮಾತನಾಡುತ್ತೀರಿ ಸ್ವಾಮಿ ನೀವು?

ಅದೇನೆ ಇರಲಿ, ಯಾರೇನೆ ಬೊಬ್ಬೆ ಹಾಕಲಿ, ನರೇಂದ್ರ ಮೋದಿ ಅವರು ಜಾರಿಗೊಳಿಸಿದ ನೋಟ್ ಬ್ಯಾನ್ ಹಾಗೂ ಜಿಎಸ್ಟಿ, ದೇಶದ ಘನತೆ ಹೆಚ್ಚಳ, ಸರ್ಜಿಕಲ್ ಸ್ಟ್ರೈಕ್ ಸೇರಿ ಹಲವು ಮಹತ್ತರ ನಿರ್ಧಾರಗಳಿಂದ ಬಿಜೆಪಿಗೇ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆ ಮೂಲಕ ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ಎರಡೂ ರಾಜ್ಯಗಳ ಚುನಾವಣೆ ಪುಷ್ಟಿ ನೀಡಿದೆ. ಮುಂದಿನ ವರ್ಷ ಕರ್ನಾಟಕ, ಮೇಘಾಲಯ, ಮಿಜೋರಾಂಗಳಲ್ಲಿ ಬಿಜೆಪಿಯೇ ಗೆದ್ದರೆ ಪಂಜಾಬ್ ಒಂದರಲ್ಲೇ ಕಾಂಗ್ರೆಸ್ ಉಳಿದು, ದೇಶದ 22 ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದಂತಾಗುತ್ತದೆ.

ಅದೇನಾದರೂ ಆಗಲಿ, ನರೇಂದ್ರ ಮೋದಿ ಅಭಿವೃದ್ಧಿ ಮಾಡುತ್ತಿರಲಿ, ಬಿಜೆಪಿ ಗೆಲ್ಲುತ್ತಿರಲಿ. ಅದರಿಂದ ದೇಶದ ಜನರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ. ಅಷ್ಟಕ್ಕೂ ಕಾಂಗ್ರೆಸ್ಸಿಗೆ 60 ವರ್ಷ ದೇಶವನ್ನು ನೀಡಿದ್ದೇವೆಲ್ಲ? ಏನು ಮಾಡಿದರು ಎಂಬುದು ಗೊತ್ತಿದೆಯಲ್ಲ? ಓ ಮತದಾರ, ಆಗಲು ಕಾಂಗ್ರೆಸ್ ಮುಕ್ತ, ನೀ ಶಕ್ತ…

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
-ವಿಶಾಲ್ ಗೌಡ, ಕುಶಾಲನಗರ June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
-ವಿಶಾಲ್ ಗೌಡ, ಕುಶಾಲನಗರ June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ

  • Privacy Policy
  • Contact
© Tulunadu Infomedia.

Press enter/return to begin your search