ಮಾಡಲು ಕಾಂಗ್ರೆಸ್ ಮುಕ್ತ, ಮತದಾರ ನೀ ಶಕ್ತ…
ಗುಜರಾತ್ ಹಾಗೂ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ…
- ನೋಟು ನಿಷೇಧ, ಜಿಎಸ್ಟಿಯಿಂದ ಜನ ಬೇಸತ್ತಿದ್ದಾರೆ, ಕಾಂಗ್ರೆಸ್ ಗೆಲ್ಲೋದು ಖಚಿತ
- ಹತ್ತಕ್ಕೂ ದೇವಾಲಯಗಳಿಗೆ ತೆರಳಿದ ರಾಹುಲ್ ಗಾಂಧಿ
- ನರೇಂದ್ರ ಮೋದಿ ಅಲೆ ಇಲ್ಲ, ಕಾಂಗ್ರೆಸ್ ಗೆಲುವು ತಪ್ಪಿಸಲು ಆಗಲ್ಲ
- ಗುಜರಾತ್ ಅಭಿವೃದ್ಧಿಯಾಗಿಲ್ಲ, ಕಾಂಗ್ರೆಸ್ಸಿಗೇ ಗೆಲುವು
- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಟೇಲರಿಗೆ ಮೀಸಲು
- ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಬೆಂಬಲದಿಂದ ಕಾಂಗ್ರೆಸ್ಸಿಗೆ ಬಲ
ಹೀಗೆ ಚುನಾವಣೆ ಗೋಷಣೆಯಾಗುತ್ತಲೇ ಕಾಂಗ್ರೆಸ್ಸಿಗರು, ರಾಹುಲ್ ಗಾಂಧಿ ಹಳೆಯ, ಹೊಸ ವರಸೆ ಆರಂಭಿಸಿದರು. ನೋಟು ನಿಷೇಧ, ಜಿಎಸ್ಟಿ ಜಾರಿಯಿಂದ ಮೋದಿ ಸೋಲಲಿದ್ದಾರೆ ಎಂದೇ ಹೇಳಲಾಯಿತು, ರಾಹುಲ್ ಗಾಂಧಿ ಸಾಲು ಸಾಲು ರ್ಯಾಲಿಯ ಜತೆಗೆ ದೇವಾಲಯಗಳಿಗೆ ಭೇಟಿ ನೀಡಿ ಹಿಂದುತ್ವದ ಕಾರ್ಡ್ ಬಳಸಿದರು.
ಆದರೂ ಫಲಿತಾಂಶವೇನಾಯಿತು?
ಗುಜರಾತಿನಲ್ಲಿ ಮತ್ತೆ ಬಿಜೆಪಿಯೇ ಗೆದ್ದಿದೆ. ಅತ್ತ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಬಿಜೆಪಿಯೇ ಗದ್ದುಗೆ ಏರಿದೆ. ಆ ಮೂಲಕ ಮೋದಿ ಅವರ ಅಭಿವೃದ್ಧಿ ಪರ ಆಡಳಿತ ಹಾಗೂ ಕಾಂಗ್ರೆಸ್ ವಿರೋಧಿ ಜನರ ನಾಡಿಮಿಡಿತ ಬಿಜೆಪಿ ಗೆಲುವಿಗೆ ಸಾಕ್ಷಿಯಾಗಿದೆ.
ಆದರೆ ರಾಜ್ಯದಲ್ಲಿ ನಮ್ಮ ಘನವೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ, ನಮಗೆ ಇನ್ನೂ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅನುಮಾನವಿದೆ. ಬಿಜೆಪಿ ಬಳಿ ದುಡ್ಡಿತ್ತು, ನಮ್ಮ ಬಳಿ ದುಡ್ಡಿರಲಿಲ್ಲ, ಅದಕ್ಕಾಗಿಯೇ ಸೋತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಸ್ವಾಮಿ ಸಿದ್ದರಾಮಯ್ಯನವರೇ ಕಾನೂನು ಓದಿದ ನೀವೇ ಹೀಗೆ ಅನಕ್ಷರಸ್ಥರಂತೆ ಮಾತನಾಡಿದರೆ ಹೇಗೆ? ನಿಮ್ಮ ಮಾತಿನಂತೆಯೇ ಹೋಗುವುದಾದರೆ, ಮತಯಂತ್ರ ತಿರುಚಿದ್ದರೆ ಕಾಂಗ್ರೆಸ್ಸಿಗೆ ಎರಡೂ ರಾಜ್ಯಗಳಲ್ಲಿ ವೋಟು ಬೀಳಲು ಸಾಧ್ಯವಿತ್ತೇ? ನೀವು ಅಷ್ಟು ಕ್ಷೇತ್ರಗಳಲ್ಲಿ ಗೆಲ್ಲಲು ಆಗುತ್ತಿತ್ತೇ? ಹಾಗಾದರೆ ಕಾಂಗ್ರೆಸ್ ಗೆದ್ದ ಕ್ಷೇತ್ರಗಳಲ್ಲಿ ಹಣ ಹಂಚಿದ್ದೀರಿಯೇ? ಯಾವ ನಾಲಿಗೆ ಇಟ್ಟುಕೊಂಡು ಮಾತನಾಡುತ್ತೀರಿ ಸ್ವಾಮಿ ನೀವು?
ಅದೇನೆ ಇರಲಿ, ಯಾರೇನೆ ಬೊಬ್ಬೆ ಹಾಕಲಿ, ನರೇಂದ್ರ ಮೋದಿ ಅವರು ಜಾರಿಗೊಳಿಸಿದ ನೋಟ್ ಬ್ಯಾನ್ ಹಾಗೂ ಜಿಎಸ್ಟಿ, ದೇಶದ ಘನತೆ ಹೆಚ್ಚಳ, ಸರ್ಜಿಕಲ್ ಸ್ಟ್ರೈಕ್ ಸೇರಿ ಹಲವು ಮಹತ್ತರ ನಿರ್ಧಾರಗಳಿಂದ ಬಿಜೆಪಿಗೇ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆ ಮೂಲಕ ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ಎರಡೂ ರಾಜ್ಯಗಳ ಚುನಾವಣೆ ಪುಷ್ಟಿ ನೀಡಿದೆ. ಮುಂದಿನ ವರ್ಷ ಕರ್ನಾಟಕ, ಮೇಘಾಲಯ, ಮಿಜೋರಾಂಗಳಲ್ಲಿ ಬಿಜೆಪಿಯೇ ಗೆದ್ದರೆ ಪಂಜಾಬ್ ಒಂದರಲ್ಲೇ ಕಾಂಗ್ರೆಸ್ ಉಳಿದು, ದೇಶದ 22 ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದಂತಾಗುತ್ತದೆ.
ಅದೇನಾದರೂ ಆಗಲಿ, ನರೇಂದ್ರ ಮೋದಿ ಅಭಿವೃದ್ಧಿ ಮಾಡುತ್ತಿರಲಿ, ಬಿಜೆಪಿ ಗೆಲ್ಲುತ್ತಿರಲಿ. ಅದರಿಂದ ದೇಶದ ಜನರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ. ಅಷ್ಟಕ್ಕೂ ಕಾಂಗ್ರೆಸ್ಸಿಗೆ 60 ವರ್ಷ ದೇಶವನ್ನು ನೀಡಿದ್ದೇವೆಲ್ಲ? ಏನು ಮಾಡಿದರು ಎಂಬುದು ಗೊತ್ತಿದೆಯಲ್ಲ? ಓ ಮತದಾರ, ಆಗಲು ಕಾಂಗ್ರೆಸ್ ಮುಕ್ತ, ನೀ ಶಕ್ತ…
Leave A Reply