ಕದ್ರಿ ಮಂಜುನಾಥೇಶ್ವರನ ಶ್ಲೋಕ ಸದ್ದಾದರೇ, ಮಸೀದಿ, ಚರ್ಚ್ ಗಳು ಮಾಡುವ ಕಿರಿಕಿರಿ ನಿನಾದವೇ?
ಕರಾವಳಿಯ ಐತಿಹಾಸಿಕ ಸುಪ್ರಸಿದ್ಧ ಕದ್ರಿ ಮಂಜುನಾಥೇಶ್ವರನ ಸನ್ನಿಧಿಯಲ್ಲಿ ಮೈಕ್ ನಲ್ಲಿ ಶ್ಲೋಕಗಳನ್ನು ಹಾಕುವುದರಿಂದ ತೊಂದರೆಯಾಗುತ್ತಿದೆ ಎಂದು ನೆಪ ಹೇಳಿ ಧ್ವನಿವರ್ದಕಗಳನ್ನು ನಿಷೇಧಿಸುವ ಹುನ್ನಾರ ಧಾರ್ಮಿಕ ದತ್ತಿ ಇಲಾಖೆ ನಡೆಸಿದೆ. ಧ್ವನಿ ವರ್ಧಕವನ್ನು ನಿಷೇಧಿಸುವಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಹಾಯಕ ಆಯುಕ್ತ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದು, ಇದೀಗ ಮತ್ತೊಮ್ಮೆ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಸಾಬೀತು ಪಡಿಸಿದೆ.
ಮಂಗಳೂರಿನ ಕ್ರಿಶ್ಚಿಯನ್ ಧರ್ಮದ ಬ್ಲೇನಿ ಡಿಸೋಜಾ ಮಂಗಳೂರು ಮಹಾನಗರ ಪಾಲಿಕೆ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ ಎಂದು ಧ್ವನಿವರ್ಧಕ ನಿಷೇಧಿಸಲು ಮುಂದಾಗಿರುವುದು ಧಾರ್ಮಿಕ ಇಲಾಖೆಯ ನೈತಿಕ ಅಧಪತನಕ್ಕೆ ಸಾಕ್ಷಿ. ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ, ಯಕ್ಷಗಾನ ಮತ್ತು ಇತರ ಉತ್ಸವದಲ್ಲಿ ಇಡೀ ದಿನ ಧ್ವನಿವರ್ಧಕ ಬಳಸಲಾಗುತ್ತಿದೆ. ಇದರಿಂದ ಸುತ್ತಮುತ್ತಲು ವಾಸಿಸುವ ಜನರಿಗೆ ಕಿರಿಕಿರಿಯಾಗುತ್ತಿದೆ ಎಂದು ದೂರು ನೀಡಿದ್ದ. ಅದಕ್ಕೆ ತಕ್ಕಂತೆ, ಹಿಂದೂ ವಿರೋಧಿಗಳಂತೆ ವರ್ತಿಸಿರುವ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಪತ್ರ ಬರೆದಿರುವುದು ಹಿಂದೂಗಳ ಮೇಲಿನ ಆಡಳಿತಾಂಗದ ದ್ವೇಷವೇ ಹೊರತು ಮತ್ತೇನಿಲ್ಲ.
ಆರು ತಿಂಗಳ ಹಿಂದೆ ಬ್ಲೇನಿ ಡಿಸೋಜಾ ಸೇರಿ ಕೆಲ ಎಡಬಿಡಂಗಿಗಳು ಸಲ್ಲಿಸಿದ ಮನವಿಗೆ ಇದೀಗ ಧಾರ್ಮಿಕ ಮತ್ತು ದತ್ತಿ ಇಲಾಖೆ ಸ್ಪಂದಿಸಿ, ಕ್ರಮ ಕೈಗೊಳ್ಳುವಂತೆ ಸೂಚಿಸುತ್ತದೆ ಎಂದರೇ, ಸರ್ಕಾರದ ಅಲ್ಪಸಂಖ್ಯಾತ ತುಷ್ಟಿಕರಣದ ಹೀನ ಹಂತವಲ್ಲದೇ ಮತ್ತೇನಲ್ಲ. ಸದಾ ಹಿಂದೂಗಳ ದೇವಸ್ಥಾನದಲ್ಲಿ ಪರಿಸರ ರಕ್ಷಣೆಯ ಜಪ ಮಾಡುವ ಸರ್ಕಾರಕ್ಕೆ ಉಳಿದ ಸಮುದಾಯಗಳನ್ನು ಒಲಿಸುವ ಹೀನ ಕೃತ್ಯಕ್ಕೆ ಇಳಿದಿರುವುದು ನೈತಿಕ ಅಧಃಪತನವೇ ಸರಿ.
ಧಾರ್ಮಿಕ ದತ್ತಿ ಇಲಾಖೆಯ ಈ ನಿರ್ಧಾರಕ್ಕೆ ಸಹಜವಾಗಿಯೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅನ್ಯ ಧರ್ಮಿಯರ ಮನವಿಗೆ ಓಗೊಟ್ಟು ಧ್ವನಿವರ್ಧಕ ನಿಷೇಧಿಸಿದರೇ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಅದರಂತೆ ಮಸೀದಿಗಳ ಮೇಲೆ ಅರಚುವ, ಚರ್ಚ್ ಗಳಲ್ಲಿ ಗೀಳಿಡುವ ಧ್ವನಿ ವರ್ಧಕಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಅದಕ್ಕೆ ಧಾರ್ಮಿಕ ಇಲಾಖೆ ಸ್ಪಂದಿಸಬೇಕು. ಇಲ್ಲವೇ ಮತ್ತೊಂದು ಧಾರ್ಮಿಕ ಇಲಾಖೆಯೇ ಪರೋಕ್ಷವಾಗಿ ಪ್ರತಿಭಟನೆಗಳಿಗೆ ಕುಮ್ಮಕು ನೀಡಿದಂತೆ ಆಗುತ್ತದೆ. ನಂತರ ಕೋಮುಗಲಭೆ, ಹಿಂದೂ ಸಂಘಟನೆಗಳು ಎಂದು ಅರಚಾಟಕ್ಕೆ ಅವಕಾಶ ನೀಡಬಾರದು.
ಧಾರ್ಮಿಕ ಇಲಾಖೆ ಸಹಾಯಕ ಆಯುಕ್ತರು ಕೇವಲ ಹಿಂದೂ ದೇವಸ್ಥಾನದಲ್ಲಿ ಧ್ವನಿವರ್ಧಕಗಳಲ್ಲಿ ಶ್ಲೋಕ, ದೇವರ ಸ್ತುತಿಯ ಗೀತೆಗಳನ್ನು ಹಾಕಲಾಗುತ್ತೆ ಅದನ್ನು ನಿಷೇಧಿಸಲು ಮುಂದಾಗಿರುವುದು ಸರ್ಕಾರದ ಹಿಂದೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಅಲ್ಲದೇ ಮುಸ್ಲಿಮರು ಮಸೀದಿಯಲ್ಲಿ ಬಳಸುವ ಧ್ವನಿವರ್ಧಕ ಮತ್ತು ಕ್ರಿಶ್ಚಿಯನ್ನರು ಚರ್ಚ್ ಗಳಲ್ಲಿ ಬಳಸುವ ಗಂಟೆಯ ಶಬ್ದಮಾಲಿನ್ಯವನ್ನು ತಡೆಯುವ ಧೈರ್ಯ ತೋರಬೇಕು. ಅವರಿಗೆ ಅವು ಕಾಣುವುದಿಲ್ಲವೇ?
ವಾರ್ಷಿಕ ಕೋಟ್ಯಂತರ ಆದಾಯವನ್ನು ಬೊಕ್ಕಸಕ್ಕೆ ನೀಡುವ ಹಿಂದೂ ದೇವಸ್ಥಾನಗಳ ಹಣವನ್ನು ನುಂಗಿ ನೀರು ಕುಡಿಯುವ ಸರ್ಕಾರ, ಅದೇ ಹಿಂದೂ ದೇವಸ್ಥಾನಗಳಲ್ಲಿನ ಆಚರಣೆಗೆ ತಡೆಯೊಡ್ಡಲು ಮುಂದಾಗಿರುವುದು ದುರದೃಷ್ಟಕರ.
Leave A Reply