ಕೇಂದ್ರದ ದಿಟ್ಟ ನಿರ್ಧಾರ, ದೇಶದಲ್ಲಿ ರೋಹಿಂಗ್ಯಾಗಳಿಗಿಲ್ಲ ಆಧಾರ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೋಹಿಂಗ್ಯಾ ಮುಸ್ಲಿಂ ಅಕ್ರಮ ವಾಸಿಗಳು ದೇಶದ ಭದ್ರತೆಗೆ ಕಂಟಕ ಎಂಬ ದಿಟ್ಟ ನಿರ್ಧಾರ ರೋಹಿಂಗ್ಯಾಗಳಿಗೆ ಉದ್ಯೋಗವಿಲ್ಲದಂತೆ ಮಾಡಿದ್ದು, ರೋಹಿಂಗ್ಯಾ ಮುಸ್ಲಿಮರು ಮರಳಿ ತಮ್ಮ ಮೂಲ ದೇಶಕ್ಕೆ ಹೋಗಲು ಚಿಂತಿಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿವೆ.
ಕೇಂದ್ರ ಸರ್ಕಾರ ರೋಹಿಂಗ್ಯಾಗಳು ದೇಶದ ಭದ್ರತೆಗೆ ಕಂಟಕ ಎಂದು ಘೋಷಣೆ ಮಾಡಿರುವುದರಿಂದ ದೇಶದ ನಾನಾ ಕಡೆ ರೋಹಿಂಗ್ಯಾಗಳಿಗೆ ಜನರು ಉದ್ಯೋಗ ನೀಡುತ್ತಿಲ್ಲ. ಇದು ದೇಶದ ರಕ್ಷಣೆಗೆ ಅನುಕೂಲಕರವಾಗಿದ್ದು, ರೋಹಿಂಗ್ಯಾಗಳ ಗಡಿಪಾರಿಗೆ ಸದಾವಕಾಶವನ್ನು ಒದಗಿಸಿದೆ.
ಪಂಜಾಬ್, ದೆಹಲಿ, ಜಮ್ಮು ಕಾಶ್ಮೀರದಲ್ಲಿ ರೋಹಿಂಗ್ಯಾಗಳೆಂದು ಅನುಕಂಪದ ಉದ್ಯೋಗ ಪಡೆದು ದೇಶದ ವಿರುದ್ಧದ ಅಕ್ರಮ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರು. ಇದೀಗ ಕೇಂದ್ರ ಸರ್ಕಾರ ರೋಹಿಂಗ್ಯಾಗಳು ದೇಶದ ರಕ್ಷಣೆಗೆ ಅಪಾಯ ಎಂಬ ಘೋಷಣೆಯಿಂದ ಯಾವುದೇ ಪ್ರದೇಶದಲ್ಲಿ ಅವರಿಗೆ ಉದ್ಯೋಗ ನೀಡಲು ಜನ ಹಿಂಜರಿಯುತ್ತಿದ್ದಾರೆ ಎನ್ನುತ್ತವೇ ವರದಿಗಳು.
ಕೇಂದ್ರ ಸರ್ಕಾರ ದೇಶದ ಎಲ್ಲ ರಾಜ್ಯಗಳಲ್ಲಿ ಇರುವ ರೋಹಿಂಗ್ಯಾಗಳ ಪಟ್ಟಿಯನ್ನು ನೀಡಿ ಎಂದು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದು, ರೋಹಿಂಗ್ಯಾಗಳನ್ನು ಗುರುತಿಸಲು ಅನುಕೂಲವಾಗಿದೆ. ಇದರಿಂದ ರೋಹಿಂಗ್ಯಾಗಳಿಗೆ ಭಾರತದಲ್ಲಿ ಸೂಕ್ತ ನೆಲೆ ಇಲ್ಲ, ತಾವು ತಮ್ಮ ದೇಶಕ್ಕೆ ಹೋಗಬೇಕು ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಪರೋಕ್ಷವಾಗಿ ನೀಡಿದೆ.
ಊಟ, ವಸತಿ, ಕೆಲಸ ಸಿಗದೇ ಸಂಕಷ್ಟಕ್ಕಿಡಾಗಿರುವ ರೋಹಿಂಗ್ಯಾಗಳು ದೇಶ ಬಿಡಲು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಭಾಗಶಃ ಎಲ್ಲ ಉದ್ಯೋಗಳಲ್ಲಿ ಆಧಾರ ಕಾರ್ಡ್ ಕಡ್ಡಾಯ ಮಾಡಿದ್ದು, ರೋಹಿಂಗ್ಯಾಗಳನ್ನು ಪತ್ತೆ ಹಚ್ಚಲು ಅನುಕೂಲವಾಗಿದೆ. ಆಧಾರ ಇಲ್ಲದವರಿಗೆ ಉದ್ಯೋಗ ನೀಡಲು ಉದ್ಯಮಿಗಳು, ಸಾರ್ವಜನಿಕರು ಯೋಚಿಸುತ್ತಿರುವುದು ರೋಹಿಂಗ್ಯಾಗಳಿಗೆ ಮತ್ತೊಂದು ಹೊಡೆತ ನೀಡಿದೆ. ಒಂದು ವೇಳೆ ಅದು ಯಶಸ್ವಿಯಾದರೇ ಕೇಂದ್ರ ಸರ್ಕಾರದ ಈ ನಿರ್ಧಾರ ಯಶಸ್ವಿಯಾಗಲಿದ್ದು, ದೇಶದ ರಕ್ಷಣೆಗೆ ಕಂಟಕವಾಗಿರುವ ರೋಹಿಂಗ್ಯಾಗಳನ್ನು ದೇಶದಿಂದ ದೂರವಿಡಬಹುದು.
Leave A Reply