• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಹುಲ್, ಸಿದ್ದರಾಮಯ್ಯ ಹಿಂದೂ ದೇವರೆದುದು ಕೈ ಮುಗಿಯುತ್ತಿದ್ದಾರೆ ಎಂದರೆ ಭಾರತ ಬದಲಾಗುತ್ತಿದೆ ಎಂದರ್ಥ

ಜೀತನ್ ನಾಯ್ಕ್ Posted On December 31, 2017


  • Share On Facebook
  • Tweet It

ಗುಜರಾತ್ ಚುನಾವಣೆ ವೇಳೆ ರಾಹುಲ್ ಗಾಂಧಿ ನಿತ್ಯ ಹತ್ತಾರು ದೇವಸ್ಥಾನಗಳಿಗೆ ಹೋಗುತ್ತಾರೆ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಪ್ರತಿ ಕ್ಷೇತ್ರದಲ್ಲಿರುವ ದೇವಾಲಯಗಳ ದರ್ಶನ ಮಾಡುತ್ತಾರೆ..

ಇತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಗಳ ಮಾದರಿ ಪುರುಷರಾದ ಸ್ವಾಮಿ ವಿವೇಕಾನಂದ, ಶ್ರೀರಾಮ, ಹನುಮನ ಜಯಂತಿ ಕಾಂಗ್ರೆಸ್ಸಿಗರು ಮಾಡಬೇಕು ಎಂದು ಹೇಳುತ್ತಾರೆ.

ಹಿಂದೂಗಳೆಂದರೆ ಉರಿದು ಬೀಳುತ್ತಿದ್ದ, ಹಿಂದೂ ದೇವಾಲಯಗಳೆಂದರೆ ತಾತ್ಸಾರದಿಂದ ಕಾಣುತ್ತಿದ್ದ, ಹಿಂದೂ ಮಹಾನ್ ಪುರುಷರನ್ನು ಅನುಮಾನದಿಂದ ನೋಡುತ್ತಿದ್ದ ಕಾಂಗ್ರೆಸ್ಸಿಗರು ಇದಕ್ಕಿದಂತೆ ತಮ್ಮ ವರಸೆ ಬದಲಾಯಿಸಿದ್ದಾರೆ. ಅವರು ಇದೀಗ ಹಿಂದೂ ದೇವಾಲಯಗಳಿಗೆ ಹೋಗುತ್ತಿದ್ದಾರೆ. ಸ್ವಾಮಿ ವಿವೇಕಾನಂದ, ಹನುಮಂತ, ಶ್ರೀರಾಮರ ಜಯಂತಿ ಆಚರಿಸಬೇಕು ಎನ್ನುತ್ತಿದ್ದಾರೆ.. ಇಷ್ಟರ ಮಟ್ಟಿಗೆ ಇವರು ಬದಲಾಗಿದ್ದಾರೆ ಎಂದರೇ ಭಾರತದಲ್ಲಿ ಹೊಸ ಶಕೆ ಆರಂಭವಾಗಿದೆ ಎಂದರ್ಥವಲ್ಲವೇ?

ಕರ್ನಾಟಕದಲ್ಲಿ ಕಳೆದ ನಾಲ್ಕುವರೆ ವರ್ಷದಿಂದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಂಡು ಹಿಂದೂ ವಿರೋಧಿ ನೀತಿಗಳು, ಮುಸ್ಲಿಮರ ತುಷ್ಟೀಕರಣಕ್ಕಾಗಿ ಜಾರಿಗೆ ತಂದ ಯೋಜನೆಗಳು ಹಲವು. ಆದರೆ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ವರಸೆ ಬದಲಾಯಿಸಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆದರೂ ಕ್ಯಾರೆ ಎನ್ನದ ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ಮತ ಸೆಳೆಯಲು ವಿವೇಕಾನಂದ, ಶ್ರೀರಾಮ, ರಾಮ ಭಕ್ತ ಹನುಮಂತನ ಜಯಂತಿ ಆಚರಣೆ ಮಾಡಲು ಸೂಚನೆ ನೀಡಿದ್ದಾರೆ.

ಇಷ್ಟರ ಮಟ್ಟಿಗೆ ಸಿದ್ದರಾಮಯ್ಯರ ಮನಸ್ಸು ಬದಲಾಗಿದೆ ಎಂದರೆ ಭಾರತ ಬದಲಾಗುತ್ತಿದೆ, ಬದಲಾವಣೆಯ ಹಂತದಲ್ಲಿದೆ ಎಂದರ್ಥವಲ್ಲವೇ? ಯಾವ ವ್ಯಕ್ತಿ ಸಮಾಜವಾದದ ಹೆಸರಲ್ಲಿ ಹಿಂದೂಗಳ ಮಾರಣಹೋಮವಾದರೂ ಬಾಯಿಯಲ್ಲಿ ಕಡುಬು ಇಟ್ಟುಕೊಂಡು ಮುಗ್ಗುಂಮಾಗಿದ್ದರೋ ಅದೇ ವ್ಯಕ್ತಿ ಇಂದು ಹಿಂದೂ ಸಾಂಸ್ಕೃತಿಕ ದೈವಿ ಪುರುಷರ ಸ್ಮರಣೆ ಮುಂದಾಗುತ್ತಿದ್ದಾರೆ, ತಮ್ಮ ಮನಸ್ಸು ಬದಲಿಸಿದ್ದಾರೆ. ನಾನು ಹಿಂದೂ ಎಂದು ಹೇಳುತ್ತಿದ್ದಾರೆ ಎಂದರೇ ಅವರಿಗೆ ಹಿಂದೂತ್ವದ ಶಕ್ತಿಯ ಅರಿವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಅತ್ತ ಗುಜರಾತ್ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೈಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡು ಹಿಂದೂ ದೇವಾಲಯಗಳತ್ತ ಹೋದರು. ಹಿಂದೂಗಳ ಮನವೊಲಿಸಲು ಪ್ರಯತ್ನಿಸಿದರು. ಆದರೂ ಅವರ ಪ್ರಯತ್ನ ಫಲಿಸಲಿಲ್ಲ. ಆದರೆ ಹಿಂದೂಗಳೆಂದರೆ ತಾತ್ಸಾರದಿಂದ ನೋಡುತ್ತಿದ್ದ ಕಾಂಗಿಗಳನ್ನು ಹಿಂದೂ ದೇವಾಲಯದತ್ತ ಬರುವಂತೆ ಮಾಡುವಲ್ಲಿ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿದೆ. ಅದೇ ಅಲ್ಲವೇ ಬದಲಾವಣೆಗೆ ಮುನ್ನುಡಿ ಎಂದರೇ?

ದೇಶದಲ್ಲಿ ಅಭಿವೃದ್ಧಿ ಮತ್ತು ನಮ್ಮ ಮೂಲ ಸಂಸ್ಕೃತಿ ಎರಡನ್ನು ಒಟ್ಟೊಟ್ಟಿಗೆ ಕರೆದುಕೊಂಡು ಹೋಗುವ ಬಲಿಷ್ಟ ಸರ್ಕಾರ ಆಡಳಿತದಲ್ಲಿದೆ. ಗುಜರಾತ್ ನಲ್ಲಿ 22 ವರ್ಷದಿಂದ ನಮ್ಮ ಸಂಸ್ಕೃತಿ ಮತ್ತು ಅಭಿವೃದ್ಧಿಯ ಅಜೆಂಡಾವನ್ನಿಟ್ಟುಕೊಂಡು ನರೇಂದ್ರ ಮೋದಿ ನಿರಂತರವಾಗಿ ವಿಜಯ ದುಂಧುಂಬಿ ಭಾರಿಸಿದರು. ಇದೇ ಅಲ್ಲವೇ ತುಷ್ಟಿಕರಣ ಮಾಡುತ್ತಾ ಅಧಿಕಾರಕ್ಕೆ ಏರುವ ಮತ್ತು ಅಭಿವೃದ್ಧಿ ಮಾಡುತ್ತಾ ಗದ್ದುಗೆ ಹಿಡಿಯುವವರ ಮಧ್ಯೆ ಇರುವ ವ್ಯತ್ಯಾಸ. ನರೇಂದ್ರ ಮೋದಿ ಹಿಂದೂ ಮುಸ್ಲಿಮರು ಎನ್ನದೇ ಗುಜರಾತ್ ನಲ್ಲಿ ಅಭಿವೃದ್ಧಿ ಮಾಡಿದರು. ಅದರ ಫಲವನ್ನು ಇಂದು ಗುಜರಾತ್ ನಲ್ಲಿ ಎಲ್ಲ ಜಾತಿ, ಧರ್ಮಗಳ ಜನರು ಉಣ್ಣುತ್ತಿದ್ದಾರೆ.

ರಾಜ್ಯದಲ್ಲಿ ನಡೆದ ಹತ್ತಾರು ಹಿಂದೂ ಕಾರ್ಯಕರ್ತರ ಹತ್ಯೆಗಳ ಬಗ್ಗೆ ಸಿದ್ದರಾಮಯ್ಯ ಚಕಾರವೆತ್ತಲಿಲ್ಲ.. ಹಿಂದೂ ವಿರೋಧಿ ಟಿಪ್ಪು ಸುಲ್ತಾನನ ಜಯಂತಿ ಆಚರಿಸಿ ಮುಸ್ಲಿಮರ ತುಷ್ಟೀಕರಣ ಮಾಡಿದ್ರು.. ಮೈಸೂರಿನ ಹುಣಸೂರಿನಲ್ಲಿ ಹನುಮ ಜಯಂತಿ ಆಚರಿಸಲು ವಿಘ್ನ ಉಂಟು ಮಾಡಿದ್ದು ಸಿಎಂ ಸಿದ್ದರಾಮಯ್ಯ. ಆದರೆ ಇದೀಗ ಅವರಿಗೆ ಜ್ಞಾನೋದಯವಾಗಿದೆ. ಕೇವಲ ಮುಸ್ಲಿಮರ ವೋಟು ಪಡೇದರಷ್ಟೇ ಸಾಲದು ಎಲ್ಲರೂ ನಮ್ಮವರು ಎನ್ನಬೇಕು ಎಂಬ ಪರಿಜ್ಞಾವಿಲ್ಲದೇ ವರ್ತಿಸುತ್ತಿದ್ದರು. ಈಗ ಕಾಂಗ್ರೆಸ್ಸಿಗರಿಗೆ ಅರಿವು ಬಂದಿದೆ. ಮತ ಪಡೆಯಲು ಕಾಂಗ್ರೆಸ್ಸಿಗರು ನಡೆಸಿರುವ ನಾಟಕವನ್ನು ಯಾರು ಬೇಕಾದರೂ ಊಹಿಸಬಹುದಾದರೂ, ಕಾಂಗ್ರೆಸ್ಸಿಗರ ಮನ ಬದಲಾಗಿದ್ದು ಮಾತ್ರ ಸತ್ಯ.

ಹಿಂದೂಗಳು, ಹಿಂದೂ ದೇವಸ್ಥಾನಗಳೆಂದರೆ ಉರಿದು ಬೀಳುತ್ತಿದ್ದ ಕಾಂಗ್ರೆಸ್ಸಿಗರಿಗೆ ದೇವರ ಎದುರು ಕೈಮುಗಿದು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖಂಡರಿಗೆ ನನ್ನ ನಮನ.

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
ಜೀತನ್ ನಾಯ್ಕ್ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
ಜೀತನ್ ನಾಯ್ಕ್ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search