ಭಾರತದ ಜಿಡಿಪಿ ಕುಸಿಯುತ್ತಿದೆ ಕುಸಿಯುತ್ತಿದೆ ಎಂದು ಬೊಬ್ಬೆ ಹಾಕುವವರು ಈ ಸುದ್ದಿ ಓದಿ!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ದೃಷ್ಟಿಯಿಂದ ಜಾರಿಗೊಳಿಸಿದ ನೋಟು ನಿಷೇಧ ಹಾಗೂ ಜಿಎಸ್ಟಿ ಯೋಜನೆಗಳು ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದವು. ಆದರೆ ಇದನ್ನು ಸಹಿಸದ ಕೆಲವು ಬುದ್ಧಿ ಜೀವಿಗಳು, ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಭಾರತದ ಜಿಡಿಪಿ ಕುಸಿಯುತ್ತಿದೆ, ಕುಸಿಯುತ್ತಿದೆ ಎಂದು ಬೊಬ್ಬೆ ಹಾಕಿದವು.
ಆದರೆ ಈ ಬೊಬ್ಬೆ ಈಗ ಸುಳ್ಳಾಗುವ ಕಾಲ ಬಂದಿದ್ದು, ಭಾರತ ಸರ್ಕಾರ ಜಾರಿಗೊಳಿಸಿದ ಹಲವು ಮಹತ್ತರ ಯೋಜನೆಗಳಿಂದ ಪ್ರಸಕ್ತ ವರ್ಷದಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಆರಂಭದಲ್ಲಿ ಭಾರತದ ಜಿಡಿಪಿ ಕುಸಿದರೂ ಪ್ರಸಕ್ತ ವರ್ಷದಲ್ಲಿ ಅದು ಏರಿಕೆಯಾಗಲಿದೆ. ಅಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ಭಾರತದ ಜಿಡಿಪಿ ಶೇ.7.5ಕ್ಕೆ ತಲುಪುತ್ತದೆ ಎಂದು ತಿಳಿಸಿದೆ.
ಭಾರತ ಆರಂಭಿಕವಾಗಿ ತುಸು ಹಿನ್ನಡೆ ಅನುಭವಿಸಿರಬಹುದು. ಆದರೆ ದೀರ್ಘಾವಧಿಗೆ ಈ ಯೋಜನೆಗಳು ಫಲಕಾರಿಯಾಗಲಿದ್ದು, ಭಾರತ ಆರ್ಥಿಕ ಸ್ಥಿತಿಯ ಪರಾಕಾಷ್ಠೆಯ ಚಿತ್ರವೇ ಕಣ್ಣ ಮುಂದಿದೆ ಎಂದು ವಿಶ್ವ ಬ್ಯಾಂಕ್ ಅಭಿವೃದ್ಧಿ ಅನ್ವೇಷಣೆ ತಂಡದ ನಿರ್ದೇಶಕ ಆ್ಯಹನ್ ಕೋಸ್ ತಿಳಿಸಿದ್ದಾರೆ..
ಒಟ್ಟಿನಲ್ಲಿ ವಿರೋಧ ಪಕ್ಷಗಳ, ಬುದ್ಧಿ(ಗೇಡಿ)ಜೀವಿಗಳ ವಿರೋಧದ ಮಧ್ಯೆಯೂ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಯೋಜನೆಗಳು ದೇಶದ ವಿತ್ತ ವ್ಯವಸ್ಥೆಯನ್ನು ಸುಧಾರಣೆಯತ್ತ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಹಾಗೂ ಸ್ವಾಗತಾರ್ಹವಾಗಿದೆ.
Leave A Reply