ಜಮ್ಮು-ಕಾಶ್ಮೀರದಲ್ಲಿ 2017ರಲ್ಲಿ ಎಷ್ಟು ಉಗ್ರರನ್ನು ಹತ್ಯೆ ಮಾಡಲಾಗಿದೆ ಗೊತ್ತಾ?
ಶ್ರೀನಗರ: 2017ನೇ ಇಸವಿ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಪಾಲಿಗೆ ನರಕವಾಗಿಯೇ ಪರಿಣಮಿಸಿದ್ದು, ಭಾರತೀಯ ಸೇನೆ ಕಳೆದ ವರ್ಷ ಬರೋಬ್ಬರಿ 213 ಉಗ್ರರನ್ನು ಹೊಡೆದುರುಳಿಸಿದೆ.
ಈ ಕುರಿತು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಬಿಜೆಪಿ ಸಚಿವ ಸಾತ್ ಶರ್ಮಾ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಪ್ರತಿಕ್ರಿಯಿಸಿದ್ದು, ಇಷ್ಟು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ 127 ವಿದೇಶಿ ಉಗ್ರರು ಹಾಗೂ 86 ಸ್ಥಳೀಯ ಉಗ್ರರನ್ನು ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಹತ್ಯೆ ಮಾಡಿದೆ. 2016ಕ್ಕೆ ಹೋಲಿಸಿದರೆ ಈ ಹತ್ಯೆಗಳ ಸಂಖ್ಯೆ ಉತ್ತಮವಾಗಿದೆ. 2016ರಲ್ಲಿ 31 ಸ್ಥಳೀಯ ಹಾಗೂ 119 ವಿದೇಶಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.
ಹೀಗೆ ಉಗ್ರರ ವಿರುದ್ಧ ಕೈಗೊಂಡ ಬಿರುಸಿನ ಕಾರ್ಯಾಚರಣೆ ವೇಳೆ 2017ರಲ್ಲಿ 51 ಹಾಗೂ 2016ರಲ್ಲಿ 21 ಜನ ಮೃತಪಟ್ಟಿದ್ದಾರೆ. ಆದರೂ ಜಮ್ಮು-ಕಾಶ್ಮೀರ ಸರ್ಕಾರ ರಾಜ್ಯದ ಗಡಿಯಲ್ಲಿ ಭಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಗಡಿಯಲ್ಲಿ ವಿದ್ಯುತ್ಯೀಕರಣ, ರಾತ್ರಿ ಕಾವಲು ಕಾಯಲು ಡಿವೈಸ್ ಅಳವಡಿಕೆ, ಒಳನುಸುಳುವಿಕೆ ನಿಯಂತ್ರಣಕ್ಕೂ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ಉಗ್ರರಿಂದ ಕಳೆದ ವರ್ಷ 320 ಬಗೆಯ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. 213 ಎಕೆ 47 ರೈಫಲ್, 101 ಪಿಸ್ತೂಲುಗಳು, 303 ರೈಫಲ್ ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಕಣಿವೆ ರಾಜ್ಯದ ಮುಖ್ಯಮಂತ್ರಿ ತಿಳಿಸಿದ್ದಾರೆ.
Leave A Reply