ಕಾಂಗ್ರೆಸ್ ಎಂಥಾ ಕೀಳು ಮಟ್ಟಕಿಳಿದಿದೆ ನೋಡಿ, ಬಿಜೆಪಿ ಮತ ನೀಡದಂತೆ ಮಕ್ಕಳಿಗೆ ಶಪಥ ಬೋಧನೆ
ದೆಹಲಿ: ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿರುವ ವೇಳೆಯೇ ಕಾಂಗ್ರೆಸ್ ಅತ್ಯಂತ ಹೀನ ಮಟ್ಟದ ತಂತ್ರಗಳನ್ನು ಅನುಸರಿಸುತ್ತಿದೆ. ಮುಗ್ದ ವಿದ್ಯಾರ್ಥಿಗಳಲ್ಲಿ ರಾಜಕೀಯ ದ್ವೇಷ ಬಿತ್ತುವ ಕಾರ್ಯವನ್ನು ಮಾಡುವ ಮೂಲಕ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನ ಕೀಳು ಮಟ್ಟದ ಅಭಿರುಚಿಗೆ ಸಾಕ್ಷಿಯಾಗಿ ಮಧ್ಯಪ್ರದೇಶದಲ್ಲಿ ಒಂದು ಘಟನೆ ನಡೆದಿದೆ.
ಮಧ್ಯಪ್ರದೇಶ ಇಟಾರಸಿಯ ವಿಜಯಲಕ್ಷ್ಮೀ ಕೈಗಾರಿಕೆ ತರಭೇತಿ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕನೊಬ್ಬ ಶಪಥ ಬೋಧಿಸಿದ್ದಾನೆ. ಈ ಮೂಲಕ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ವಿದ್ಯಾರ್ಥಿಗಳಲ್ಲೂ ಶೈಕ್ಷಣಿಕ ಸಂಸ್ಥೆಯಲ್ಲೂ ರಾಜಕೀಯದ ವಿಷ ಬೀಜ ಬಿತ್ತುವ ಮೂಲಕ ಕೀಳು ಮಟ್ಟದ ಅಭಿರುಚಿ ವ್ಯಕ್ತಪಡಿಸಿವೆ.
ಗಣರಾಜ್ಯೋತ್ಸವದಂದು ನಡೆದ ಕಾರ್ಯಕ್ರಮದಲ್ಲಿ ‘ಆನ್ ಪರೀಕ್ಷೆ ಆರಂಭಿಸಿರುವ ಬಿಜೆಪಿ ಸರ್ಕಾರಕ್ಕೆ ನಾನು ಮತ ನೀಡುವುದಿಲ್ಲ. ಬಿಜೆಪಿ ಮತ ನೀಡಬೇಡಿ ಎಂದು ನಿತ್ಯ ಮೂರು ಜನರಿಗೆ ಸಂದೇಶ ನೀಡುತ್ತೇನೆ. ನನ್ನ ಅಕ್ಕಪಕ್ಕದವರಿಗೂ ಬಿಜೆಪಿ ಮತ ನೀಡದಂತೆ ಜಾಗೃತಿ ಮೂಡಿಸುತ್ತೇನೆ ಎಂದು ನಾನು ಶಪಥ ಸ್ವೀಕರಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಬೋಧಿಸಲಾಗಿದೆ.
#WATCH Teachers of Vijaylaxmi Industrial Training Institute in Itarsi ask students to take pledge not to vote for BJP in the upcoming elections & support it in any manner until it stops online examinations #MadhyaPradesh (26.01.18) pic.twitter.com/PY3S721Mbq
— ANI (@ANI) January 28, 2018
Leave A Reply