ಡೋಂಗಿ ಸಮಾಜವಾದಿ ಸಿದ್ದರಾಮಯ್ಯ ಜಿಲ್ಲೆಯಲ್ಲೇ ದಲಿತರಿಗೆ ಎಂಥಾ ದುರ್ಗತಿ..!
ಮೈಸೂರು: ನಾನು ಸಮಾಜವಾದಿ, ಅಹಿಂದ, ದಲಿತರ ಏಳಿಗೆಗೆ ಸದಾ ಶ್ರಮಿಸುವವನು ಎಂದು ಸದಾ ತಮ್ಮ ನ್ನು ತಾವೇ ಹೊಗಳಿ ಅಟ್ಟಕೇರುವ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೇ ದಲಿತರ ಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮೈಸೂರಿನ ನಂಜನಗೂಡು ತಾಲೂಕಿನ ತರದೆಲೆ ಗ್ರಾಮದಲ್ಲಿ ದಲಿತರಿಗೆ ಸವರ್ಣಿಯರು ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಗ್ರಾಮದಲ್ಲಿರುವ ಸವರ್ಣಿಯರ ಅಂಗಡಿಯಲ್ಲಿ ದಲಿತರು ಸಾಮಾಗ್ರಿ ಖರೀದಿಸುವಂತಿಲ್ಲ, ಅಲ್ಲದೇ ದಲಿತರಿಗೆ ಯಾರು ಕೆಲಸ ನೀಡಬಾರದು ಒಂದು ವೇಳೆ ನೀಡಿದರೆ ಅಂತವರಿಗೆ ಒಂದು ಸಾವಿರ ದಂಡ ವಿಧಿಸಲಾಗುತ್ತಿದೆ ಎಂದು ದಲಿತರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಮೂರು ವರ್ಷದ ಹಿಂದೆ ದಲಿತರು ಮತ್ತು ಸವರ್ಣಿಯರ ಮಧ್ಯೆ ಊರ ಹಬ್ಬದ ವೇಳೆ ವಾಗ್ವಾದ ನಡೆದಿತ್ತು. ಆದ್ದರಿಂದ ಇದೀಗ ಸವರ್ಣಿಯರು ದಲಿತರಿಗೆ ಬಹಿಷ್ಕಾರ ಹಾಕಿ ಊರ ಹಬ್ಬ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯಾತೀತವಾದಿ, ಸಮಾಜವಾದಿ ಎಂದು ಬೊಗಳೇ ಬಿಡುವುದನ್ನು ಬಿಟ್ಟು ಸರ್ಕಾರದ ಮೂಲಕ ಸಮಾನತೆ ಸಾಧಿಸುವ ಕೆಲಸ ಮಾಡಬೇಕಿದೆ. ಗುಜರಾತ್ ನಲ್ಲಿ ದಲಿತರ ಮೇಲೆ ಹಲ್ಲೆಯಾದಾಗ ಬಾಯಿ ಬಡೆದುಕೊಳ್ಳುವ ಸಿದ್ದರಾಮಯ್ಯ ತಮ್ಮದೇ ಜಿಲ್ಲೆಯಲ್ಲಿ ದಲಿತರಿಗೆ ಬಹಿಷ್ಕಾರ ಹಾಕುವಂತ ಪರಿಸ್ಥಿತಿ ಇದ್ದರೂ ಕೇಳದಿರುವುದು ದುರಂಥವಲ್ಲವೇ..? ದಲಿತರ ಮೇಲಿನ ಹಲ್ಲೆಗಳನ್ನು, ಅಸ್ಪೃಷ್ಯತೆಯಂತ ಹೀನ ಪದ್ಧತಿಯನ್ನು ತಡೆಯುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂಬುದು ಪದೇ ಪದೆ ಸಾಬೀತಾಗುತ್ತಿದೆ.
ದಲಿತ ನಾಯಕರನ್ನು ತುಳಿದ ಸಿದ್ದರಾಮಯ್ಯ
ಜಿ.ಪರಮೇಶ್ವರ, ಮಲ್ಲಿಕಾರ್ಜುನ್ ಖರ್ಗೆ ತಮ್ಮ ಆಪ್ತ ಶ್ರೀನಿವಾಸ್ ಅವರನ್ನು ತುಳಿದು ತಾವು ಸಿಎಂ ಗಾಧಿ ಅಲಂಕರಿಸಿಕೊಂಡವರು ಸಿಎಂ ಸಿದ್ದರಾಮಯ್ಯ ಎಂಬ ಆರೋಪ ಸಿದ್ದರಾಮಯ್ಯ ಮೇಲೆ ಇದೆ. ಸದಾಶಿವ ಆಯೋಗ ಜಾರಿ ಕುರಿತು ಎಡಬಿಡಂಗಿ ನೀತಿಯನ್ನು ಅನುಸರಿಸುತ್ತ ದಲಿತರನ್ನು ಗೊಂದಲಕ್ಕೀಡು ಮಾಡಿದ್ದು ಸಿದ್ದರಾಮಯ್ಯ.
Leave A Reply