ಐಐಟಿಗೂ ಲಗ್ಗೆ ಇಟ್ಟ ಸಂಸ್ಕೃತ, ಮದ್ರಾಸ್ ಐಐಟಿಯಲ್ಲಿ ಸಂಸ್ಕೃತ ವಿಭಾಗ ಆರಂಭ
ಚೆನ್ನೈ: ಬರೀ ತಂತ್ರಜ್ಞಾನ, ಇಂಗ್ಲಿಷ್ ಭಾಷೆಗೆ ಜೋತು ಬೀಳುವ ವಿಜ್ಞಾನದ ವಿದ್ಯಾರ್ಥಿಗಳಿಗೆ ದೈವ ಭಾಷೆ ಸಂಸ್ಕೃತದಲ್ಲೂ ವೈಜ್ಞಾನಿಕ ಅಂಶಗಳು ಇರುವುದನ್ನು ಒಪ್ಪಿಕೊಂಡಿರುವ ಮದ್ರಾಸ್ ಐಐಟಿ ಇದೀಗ ಸಂಸ್ಕೃತ ವಿಭಾಗ ಆರಂಭಿಸಿದೆ.
ಮದ್ರಾಸ್ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಸಂಸ್ಕೃತ ವಿಭಾಗ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಆಡಳಿತಗಾರರು ತಿಳಿಸಿದ್ದಾರೆ. ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಸಂಸ್ಕೃತ ವಿಭಾಗ ಆರಂಭಿಸುವ ಚಿಂತನೆ ನಡೆದಿದೆ. ಈ ವಿಭಾಗದ ಮೂಲಕ ಸಂಸ್ಕೃತ ಮತ್ತು ವೇದಗಳಲ್ಲಿ ಅಡಗಿರುವ ವೈಜ್ಞಾನಿಕ ಸತ್ಯಗಳನ್ನು ಅಧ್ಯಯನ, ಸಂಶೋಧನೆ ಮಾಡುವ ಉದ್ದೇಶ ಹೊಂದಲಾಗಿದೆ.
ಮದ್ರಾಸ್ ಐಐಟಿ ಹಳೇ ವಿದ್ಯಾರ್ಥಿ, ಸಾಹನ್ ಕಿರ್ಪಾಲ್ ರುಹಾನಿ ಮಿಷನ್ ಮುಖ್ಯಸ್ಥ ಸಂತ ರಾಜೇಂದ್ರ ಸಿಂಗ್ ಜೀ ಮಹಾರಾರ್ ಸಂಸ್ಕೃತ ವಿಭಾಗಕ್ಕೆ ದೇಣಿಗೆ ನೀಡಿದ್ದಾರೆ. ಮಹಾರಾಜ್ ರಾಜೇಂದ್ರ ಸಿಂಗ್ ಜೀ ಸಂಸ್ಕೃತ ವಿಭಾಗ ಆರಂಭಿಸಲು 70 ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಐಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಜ್ ನೀಡಿರುವ ಹಣವನ್ನು ವೇದ ವಿಶೇಷವಾಗಿ ಸಂಸ್ಕೃತದಲ್ಲಿ ಅಡಗಿರುವ ವಿಜ್ಞಾನದ ಅಂಶಗಳನ್ನು ಸಂಶೋಧಿಸಲು ಉಪಯೋಗಿಸಲು ಸಲಹೆ ನೀಡಿದ್ದಾರೆ.
ಇದೀಗ ಆರಂಭವಾಗಿರುವ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಅರವಿಂದೋ ಸಾಂಸ್ಕೃತಿಕ ಪ್ರತಿಷ್ಠಾನದ ನಿರ್ಧೇಶಕ, ಸಂಸ್ಕೃತ ವಿದ್ವಾಂಸ ಸಂಪಾದನಂದ ಮಿಶ್ರಾ ಆಯ್ಕೆಯಾಗಿದ್ದಾರೆ.
ಸಂಸ್ಕೃತ ವೈಜ್ಞಾನಿಕ ಭಾಷೆಯಾಗಿದ್ದು, ಸಂಸ್ಕೃತಿ ಮತ್ತು ವಿಜ್ಞಾವನ್ನು ಸಂಸ್ಕೃತ ಭಾಷೆ ಹೊಂದಿದೆ. ಐಐಟಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಜ್ಞಾನ ಹೆಚ್ಚಿಸಲು ಪ್ರಯತ್ನಿಸುತ್ತೇನೆ ಎಂದು ಸಂಪಾದನಂದ ಮಿಶ್ರಾ ಹೇಳಿದ್ದಾರೆ.
Leave A Reply