ಭಾರತ ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಡೆಯಲು ಹಿಂದೂಗಳು ಒಂದಾಗಲಿ ಎಂದ ಮುಸ್ಲಿಂ ಮಹಿಳೆ ಯಾರು ಗೊತ್ತಾ?
ತಿರುವನಂತಪುರ: ಭಾರತದಲ್ಲಿರುವ ಜಾತ್ಯತೀತ ಮನೋಭಾವನೆ ತೊಲಗಿ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿ ಎಂದು ಕೆಲವು ಇಸ್ಲಾಂ ಮೂಲಭೂತವಾಗಿಗಳು ಬಯಸುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯೊಬ್ಬರು ಭಾರತ ಇಸ್ಲಾಮಿಕ್ ರಾಷ್ಟ್ರವಾಗಬಾರದು ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.
ಭಾರತ ಜಾತ್ಯತೀತ ರಾಷ್ಟ್ರವಾಗಿಯೇ ಉಳಿಯಬೇಕು. ಹಾಗಾಗಬೇಕಾದರೆ ಭಾರತದ ಎಲ್ಲ ಜಾತಿಯ ಹಿಂದೂಗಳು ಒಂದಾಗಬೇಕು ಎಂದು ದೇಶದಲ್ಲೇ ಮೊದಲ ಬಾರಿಗೆ ನಮಾಜ್ ಮಾಡುವ ಉಸ್ತುವಾರಿ ವಹಿಸಿಕೊಂಡ, ಕುರಾನ್ ಸುನ್ನತ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಕೆ.ಜಮಿದಾ ತಿಳಿಸಿದ್ದಾರೆ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , “ಹಿಂದೂಗಳ ಹೊರತಾಗಿ ಭಾರತ ಎಂದಿಗೂ ಜಾತ್ಯತೀತ ರಾಷ್ಟ್ರವಾಗಲು ಸಾಧ್ಯವೇ ಇಲ್ಲ. ಹಾಗಾಗಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಇರಬೇಕು” ಎಂದು ಹೇಳಿದ್ದಾರೆ.
ನಾನು ಸಮಾಜ ಸುಧಾರಣೆ ಮಾಡುವ ದಿಸೆಯಲ್ಲಿ ಕುರಾನ್ ಸುನ್ನತ್ ಸೇರಿ ಹಲವು ಕ್ರಮಗಳನ್ನು ಕೈಗೊಂಡಾಗ ಕೆಲವರು ನನ್ನನ್ನೇ ಗುರಿಯಾಗಿಸಿದರು. ಬೆದರಿಕೆ ಹಾಕಿದ್ದರು. ಇದೇ ದಾರಿಯಲ್ಲಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಹಾಗೂ ಸುನ್ನತ್ ಸಂಸ್ಥಾಪಕ ಚೆಕನ್ನೂರ್ ಮೌಲ್ವಿ ಅವರಿಗೂ ಹೀಗೆಯೇ ಆಗಿತ್ತು ಎಂದು ಸ್ಮರಿಸಿದರು.
ಆದರೂ ಈ ಸಮಾಜ ಸುಧಾಕರು ಯಾವ ಬೆದರಿಕೆಗೂ ಹೆದರದೆ ಸಮಾಜ ಸುಧಾರಣೆ ಮಾಡಿದರಲ್ಲದೆ, ಅದಕ್ಕಾಗಿ ತಮ್ಮ ಪ್ರಾಣವನ್ನೇ ತೆತ್ತರು ಎಂದು ಕೆ.ಜಮಿದಾ ತಿಳಿಸಿದರು. ಕಳೆದ ಜನವರಿ 26ರಂದು ಜಮಿದಾ ಅವರು ನಮಾಜ್ ಉಸ್ತುವಾರಿ ವಹಿಸಿಕೊಂಡಾಗ ಮುಸ್ಲಿಂ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು, ಆದರೂ ಅವರು ಹಿಂಜರಿದಿರಲಿಲ್ಲ.
Leave A Reply