ಕರ್ನಾಟಕದಲ್ಲಿ ರಾಹುಲ್ ಗಾಂಧಿ ಹೇಳಿದ ಸುಳ್ಳುಗಳು, ಕಾಂಗ್ರೆಸ್ಸಿಗೆ ಅವೇ ಮುಳ್ಳುಗಳು

ದೇಶದ ಮೊತ್ತಮೊದಲ ಹಗರಣ ಜೀಪ್, ಇದು ಬೆಳಕಿಗೆ ಬಂದಿದ್ದು ನೆಹರೂ ಕಾಲದಲ್ಲಿ
ದೇಶದಲ್ಲೇ ಮೊದಲ ಬಾರಿಗೆ ಭ್ರಷ್ಟಾಚಾರ ಆರೋಪ ಹೊತ್ತ ಪ್ರಧಾನಿ ರಾಜೀವ್ ಗಾಂಧಿ, ಅದು ಬೋಫೋರ್ಸ್ ಹಗರಣದಲ್ಲಿ
ಮನಮೋಹನ್ ಸಿಂಗ್ ಅವಧಿಯಲ್ಲಂತೂ ಕಲ್ಲಿದ್ದಿಲು, ಕಾಮನ್ ವೆಲ್ತ್ ಸೇರಿ ಹಗರಗಳ ಸುರಿಮಳೆಯೇ ಸುರಿದವು…
ಇದರ ಜತೆಗೆ ಹತ್ತಾರು ಹಗರಣಗಳನ್ನು ದೇಶಕ್ಕೆ ಕೊಡುಗೆ ನೀಡಿದ ಕಾಂಗ್ರೆಸ್ಸಿಗರು ಮೊನ್ನೆ ದೇಶದ ಹೆಮ್ಮೆಯ ಪ್ರಧಾನಿ, ನರೇಂದ್ರ ಮೋದಿ ಅವರಿಗೇ ಭ್ರಷ್ಟಾಚಾರದ ಪಾಠ ಹೇಳುವ ಮೂಲಕ ಅಪದ್ಧ ಮೆರೆದರು.
ಅದು ಒತ್ತಟ್ಟಿಗಿರಲಿ, ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿ, ಮಸೀದಿ, ಮಠ, ಮಂದಿರಗಳಿತೆ ತೆರಳಿ ನಾಟಕವಾಡುತ್ತಿರುವ ರಾಹುಲ್ ಗಾಂಧಿ, ಹಲವು ಸಮಾವೇಶದಲ್ಲಿ ಹಸಿ ಹಸಿ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಹಾಗೂ ಜನ ಇವುಗಳನ್ನೇ ನಂಬುತ್ತಾರೆ ಎಂದು ತಪ್ಪು ಭಾವಿಸಿದ್ದಾರೆ.
ರಾಜ್ಯ ಶಾಂತಿಯುತವಾಗಿದೆಯೇ ರಾಹುಲ್?
ಕೊಪ್ಪಳ, ಕಲಬುರಗಿ ಸೇರಿ ಹಲವೆಡೆ ರ್ಯಾಲಿ ನಡೆಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ಶಾಂತಿಯುತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ರಾಹುಲ್ ನಿಮಗೆ ಕರ್ನಾಟಕದ ಪರಿಸ್ಥಿತಿ ಗೊತ್ತಿದೆಯೇ? ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸುಮಾರು 22 ಹಿಂದೂಗಳ ಹತ್ಯೆಯಾಗಿದೆ. ಸಂಶೋಧಕ ಡಾ.ಎಂ.ಎಂ.ಕಲಬುರಗಿ ಹತ್ಯೆಯಾಯಿತು, ಪತ್ರಕರ್ತೆ ಗೌರಿ ಲಂಕೇಶ್, ಕರಾವಳಿ ಭಾಗದಲ್ಲಿ ಬಷೀರ್ ಕೊಲೆಯಾಯಿತು. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಯಾವ ಪ್ರಕರಣದ ತನಿಖೆ ನಡೆಸಿದೆ? ಯಾರಿಗೆ ಶಿಕ್ಷೆಯಾಗುವಂತೆ ಮಾಡಿದೆ? ನಾಲ್ಕೂವರೆ ವರ್ಷದಲ್ಲಿ ಇಷ್ಟೆಲ್ಲ ಆದರೂ ರಾಜ್ಯದಲ್ಲಿ ಶಾಂತಿ ಇದೆ ಎಂದು ರಾಹುಲ್ ಗಾಂಧಿ ಯಾವ ಬಾಯಿಯಲ್ಲಿ ಹೇಳುತ್ತಾರೆ?
ಕಾಂಗ್ರೆಸ್ ರೈತರ ಪರವೇ?
ಮೊದಲಿನಿಂದಲೂ ಕಾಂಗ್ರೆಸ್ ರೈತರ ಪರ ಎಂದೇ ಹೇಳುತ್ತದೆ ಹೊರತು ಕಾರ್ಯರೂಪಕ್ಕೆ ತರುವುದಿಲ್ಲ. ಇಂಥ ಹುಸಿ ರೈತ ಪ್ರೇಮವನ್ನೇ ಪ್ರದರ್ಶಿಸಿರುವ ರಾಹುಲ್ ಗಾಂಧಿ ನಾವು ರೈತ ಪರ ಎಂದಿದ್ದಾರೆ. ಆದರೆ ಇಂಥ ರೈತರ ಪರವಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ 3500ಕ್ಕೂ ಅಧಿಕ ರೈತರು ಏಕೆ ಆತ್ಮಹತ್ಯೆ ಮಾಡಿಕೊಂಡರು? ಏಕೆ ಸಿದ್ದರಾಮಯ್ಯ ಅವರು ದೇಶದ ನಾಲ್ಕು ರಾಜ್ಯಗಳು ಸಾಲ ಮನ್ನಾ ಮಾಡಿದ ಬಳಿಕ, ವಿಳಂಬ ಧೋರಣೆ ಅನುಸರಿಸಿ ರೈತರ ಸಾಲ ಮನ್ನಾ ಮಾಡಿದರು? ಏಕೆ ಚಿಕ್ಕಬಳ್ಳಾಪುರ ರೈತರು ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ವರ್ಷಗಳಿಂದ ಧರಣಿ ಮಾಡುತ್ತಿದ್ದಾರೆ? ಏಕೆ ಸಿದ್ದರಾಮಯ್ಯನವರು ಗೋವಾ ಕಾಂಗ್ರೆಸ್ ಬಗ್ಗೆ ಮಾತನಾಡುವುದಿಲ್ಲ? ಮಾತನಾಡಿದರೂ ನಮಗೂ, ಗೋವಾ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ ಎನ್ನುತ್ತಾರೆ?
ಭ್ರಷ್ಟಾಚಾರ ರಹಿತ ಆಡಳಿತ ಎಂದು ಹೇಗೆ ಹೇಳುತ್ತೀರಿ?
ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ರಾಹುಲ್ ಸಿದ್ಧಪಡಿಸಿದ ಭಾಷಣದ ಸಾಲುಗಳನ್ನೇ ಪುನರುಚ್ಚರಿಸಿದ್ದಾರೆ. ಆದರೆ ಎಂಥ ಸುಳ್ಳು ಮಾರಾಯ್ರೇ ಇದು, ಒಂದು ವೇಳೆ ರಾಜ್ಯ ಸರ್ಕಾರದ್ದು ಭ್ರಷ್ಟಾಚಾರ ರಹಿತ ಆಡಳಿತವೇ ಆಗಿದ್ದರೆ, ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ಏಕೆ ಮಂಡ್ಯದ ಲೋಕಾಯುಕ್ತದಲ್ಲಿ ಕೇಸು ದಾಖಲಾಗುತ್ತಿತ್ತು? ನಿಮ್ಮದೇ ಪಕ್ಷದ ಮಹಿಳಾ ಮುಖಂಡರೊಬ್ಬರು ಚುನಾವಣೆಯಲ್ಲಿ ಲಕ್ಷ ಲಕ್ಷ ದುಡ್ಡು ಹಂಚುವ ವೀಡಿಯೋ ಬಗ್ಗೆ ನೀವೇನು ಹೇಳುತ್ತೀರಿ ಸ್ವಾಮಿ?
ಇದಕ್ಕಿಂತ ಕಳಂಕ ಬೇಕೇ ಸ್ವಾಮಿ?
ಇನ್ನು ಸಿದ್ದರಾಮಯ್ಯ, ರಾಹುಲ್ ಗಾಂಧಿಯವರದ್ದು ಒಂದೇ ಹೇಳಿಕೆ. ನಮ್ಮದು ಕಳಂಕರಹಿತ ಸರ್ಕಾರ ಎಂಬುದು. ಆದರೆ ನಾಲ್ಕೂವರೆ ವರ್ಷದಲ್ಲಿ ಕಾಂಗ್ರೆಸ್ಸಿಗೇನು ಸಣ್ಣಪುಟ್ಟ ಕಳಂಕ ಅಂಟಿವೆಯೇ? ಎಚ್.ವೈ.ಮೇಟಿ ಕಾಮಕೇಳಿ, ತನ್ವೀರ್ ಸೇಠ್ ಅಶ್ಲೀಲ ದೃಶ್ಯ ವೀಕ್ಷಿಸಿದ್ದು, ಗುಜರಾತ್ ಶಾಸಕರನ್ನು ರಾಜ್ಯಕ್ಕೆ ಕರೆತಂದು ರೆಸಾರ್ಟ್ ರಾಜಕಾರಣ ಮಾಡಿದ್ದು, ದಕ್ಷ ಅಧಿಕಾರಿಗಳ ವರ್ಗಾವಣೆ, ಕೆ.ಜೆ.ಜಾರ್ಜ್ ವಿರುದ್ಧದ ಆರೋಪಗಳು… ಒಂದೇ ಎರಡೇ?
ಹೀಗೆ ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಕಾಂಗ್ರೆಸ್ ಮಾಡಿದ ದುರಾಡಳಿತ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ, ರೈತರ ನೆರವಿಗೆ ಬರದೆ ಮೋದಿ ಅವರನ್ನು ತೆಗಳುವುದರಲ್ಲೇ ಕಾಲ ಕಳೆದ ರಾಜ್ಯ ಸರ್ಕಾರದ ಬಗ್ಗೆ ಹಸಿ ಹಸಿ ಸುಳ್ಳು ಹೇಳುತ್ತಿರುವ ರಾಹುಲ್ ಗಾಂಧಿಗೆ ಅವೇ ಮುಳ್ಳುಗಳಾಗುತ್ತವೆ ಎಂಬ ಎಚ್ಚರಿಕೆ ಇದ್ದಂತಿಲ್ಲ.
Leave A Reply