ಬಯಲಾಯ್ತು ಕಾಂಗ್ರೆಸ್ ಮಾಜಿ ನಾಯಕನ ಪಾಕಿಸ್ತಾನ ಪ್ರೇಮ, ಐ ಲವ್ ಪಾಕಿಸ್ತಾನ ಎಂದ ಮಣಿಶಂಕರ್ ಅಯ್ಯರ್!
ದೆಹಲಿ: ಭಾರತವೊಂದೇ ಅಲ್ಲ ಇಡೀ ವಿಶ್ವವೇ ಪಾಕಿಸ್ತಾನವನ್ನು ದ್ವೇಷಿಸುತ್ತಿದೆ. ಅದರಲ್ಲೂ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಪದೇಪದೆ ದಾಳಿ ಮಾಡುವ ಮೂಲಕ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಈ ವಾರದಲ್ಲೇ ಭಾರತದ ಐವರು ಯೋಧರು ಹುತಾತ್ಮರಾಗಿದ್ದಾರೆ.
ಇಂಥ ಪಾಕಿಸ್ತಾನವನ್ನು ಮಟ್ಟಹಾಕಲು ಭಾರತ ಸರ್ಕಾರ ಹಾಗೂ ಸೇನೆ ಯೋಜನೆ ರೂಪಿಸುತ್ತಿದ್ದರೆ, ಕಾಂಗ್ರೆಸ್ಸಿನಿಂದ ಅಮಾನತಗೊಂಡಿರುವ ಮಣಿಶಂಕರ್ ಅಯ್ಯರ್ ಮಾತ್ರ ಐ ಲವ್ ಪಾಕಿಸ್ತಾನ್ ಎಂದು ಹೇಳುವ ಮೂಲಕ ತಮ್ಮ ಮನಸ್ಸಿನೊಳಗಿನ ಪಾಕಿಸ್ತಾನ ಪ್ರೇಮವನ್ನು ಜಗಜ್ಜಾಹೀರುಗೊಳಿಸಿದ್ದಾರೆ.
ಕರಾಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಮಣಿಶಂಕರ್ ಅಯ್ಯರ್, “ನಾನು ಭಾರತದಷ್ಟೇ ಪಾಕಿಸ್ತಾನವನ್ನು ಪ್ರೀತಿಸುತ್ತೇನೆ ಹಾಗೂ ಭಾರತವನ್ನು ಪ್ರೀತಿಸುತ್ತಿರುವ ಕಾರಣಕ್ಕಾಗಿಯೇ ಪಾಕಿಸ್ತಾನವನ್ನು” ಇಷ್ಟಪಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ಭಾರತದ ಜತೆ ಸ್ನೇಹ ಹಸ್ತ ಚಾಚುವ ನಾಟಕವಾಡಿ ಮತ್ತೆ ತನ್ನ ಚಾಳಿ ಮುಂದುವರಿಸಿ ಆಗಾಗ ಭಾರತದೊಳಗೆ ಉಗ್ರರನ್ನು ಬಿಟ್ಟು ಕುತಂತ್ರ ಮೆರೆಯುವ ಪಾಕಿಸ್ತಾನವನ್ನು ನಾನು ಪ್ರೀತಿಸುತ್ತೇನೆ ಎನ್ನುವ ಮಣಿಶಂಕರ್ ಅಯ್ಯರ್ ನಿಷ್ಠೆ ಯಾರಿಗೆ? ಭಾರತದೊಳಗಿದ್ದು, ಶತ್ರುರಾಷ್ಟ್ರವನ್ನು ಮೆಚ್ಚುವ ಅಯ್ಯರ್ ಮಾತು ಸರಿಯೇ ಎಂಬ ಪ್ರಶ್ನೆಗಳು ಕಾಡತೊಡಗಿವೆ.
ಇದೇ ಅಯ್ಯರ್ ಗುಜರಾತ್ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಎಂದು ಕರೆಯುವ ಮೂಲಕ ತಮ್ಮ ಮನಸ್ಸಿನಲ್ಲಿದ್ದ ಕೊಳಕು ಹೊರಹಾಕಿದ್ದರು ಹಾಗೂ ಅದೇ ಕಾರಣಕ್ಕಾಗಿಯೇ ಪಕ್ಷದಿಂದ ಅಮಾನತುಗೊಂಡಿದ್ದರು.
Leave A Reply