ಪಾಕಿಸ್ತಾನದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ, ಒತ್ತಾಯದ ಮತಾತಂತರ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಯಾವ ಮಟ್ಟಕ್ಕೆ ಇದೇ ಎಂಬುದಕ್ಕೆ ಹಲವು ಘಟನೆಗಳು ಪದೇ ಪದೆ ಸಾಕ್ಷಿಯಾಗುತ್ತಿವೆ. ಇಸ್ಲಾಮನ ಹೆಸರಲ್ಲಿ ಯುವತಿಯರನ್ನು ಪಾಕಿಸ್ತಾನದ ಹಿಂದೂಗಳು ಕಳೆದುಕೊಳ್ಳುತ್ತಿದ್ದಾರೆ. ಇಸ್ಲಾಂ ಹೆಸರಿನಲ್ಲಿ ಹಿಂದೂಗಳು ತಮ್ಮ ಮಗಳನ್ನು ಕಳೆದುಕೊಂಡ ಮತ್ತೊಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಸಿಂಧ ಪ್ರದೇಶದ ಸುಕ್ಕೂರನಲ್ಲಿ ಹಿಂದೂ ಯುವತಿ ನಿಶಾ ದಿವಾನ್ ಮತಾಂಧರ ಆಪತ್ತಿಗೆ ಸಿಲುಕಿದ ಯುವತಿ. ಯುವತಿ ನಿಶಾ ದಿವಾನ್ ಗಳನ್ನು ಮತಾಂಧ ಪಾನೋ ಅಕೀಲ್ ಎಂಬಾತ ಅಪಹರಿಸಿ, ನಂತರ ಮತಾಂತರಕ್ಕೆ ಒತ್ತಾಯಿಸಿದ್ದಾನೆ. ಇದಕ್ಕೆ ಸ್ಥಳೀಯ ಮುಸ್ಲಿಂ ಮೌಲ್ವಿಗಳು ಬೆಂಬಲ ನೀಡಿದ್ದು, ಒತ್ತಾಯಪೂರ್ವಕವಾಗಿ ಹಿಂದೂಗಳನ್ನು ಹೆದರಿಸಿ ಮುಸ್ಲಿಂ ಧರ್ಮಕ್ಕೆ ಯುವತಿಯನ್ನು ಮತಾಂತರಿಸಲಾಗಿದೆ.
ಯುವತಿಯನ್ನು ಅಪಹರಿಸಿ, ಒತ್ತಾಯಪೂರ್ವಕವಾಗಿ ಮತಾಂತರ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಟ್ವೀಟರ್ ನಲ್ಲಿ ಈ ಕುರಿತು ಮಾನವ ಹಕ್ಕುಗಳ ಹೋರಾಟಗಾರರು, ಪತ್ರಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಗ್ದ ಹಿಂದೂಗಳಿಗೆ ರಕ್ಷಣೆ ನೀಡಬೇಕು, ಇಸ್ಲಾಂ ಧರ್ಮಿಯರ ದೌರ್ಜನ್ಯ ತಡೆಗಟ್ಟಬೇಕು. ಇಲ್ಲದಿದ್ದಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ನಾಮಾವಶೇಷವಾಗುವುದು ನಿಶ್ಚಿತ ಎಂದು ಸಲಹೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳಿಗೆ ನೆಮ್ಮದಿಯಿಲ್ಲ, ಹಿಂದೂಗಳ ಮಾನವ ಹಕ್ಕುಗಳಿಗೆ ಬೆಲೆ ನೀಡುತ್ತಿಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.
Leave A Reply