ಅನಾಥ ಹಿಂದೂ ಯುವಕನನ್ನು ಹಿಂದೂ ಸಂಪ್ರದಾಯದಂತೆ ಪೋಷಿಸಿ, ಮದುವೆ ಮಾಡಿಸಿದ ಮುಸ್ಲಿಂ ಕುಟುಂಬ

ಡೆಹ್ರಾಡೂನ್: ಮತಾಂತರ, ಲವ್ ಜಿಹಾದ್, ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ, ಹಿಂದೂ ದ್ವೇಷದಲ್ಲಿ ಸದಾ ಮುಂದೆ ಇರುವ ದೇಶದ ಕೆಲವು ಮುಸ್ಲಿಂ ಮೂಲಭೂತವಾದಿಗಳ ಮಧ್ಯೆ ಡೆಹ್ರಾಡೂನ್ ನ ಮುಸ್ಲಿಂ ಕುಟುಂಬವೊಂದು ಹಿಂದೂ ಮುಸ್ಲಿಂ ಸೌಹಾರ್ದತೆಗೆ ಮಾದರಿಯಾಗಿ ನಿಂತಿದೆ. ಈ ಮೂಲಕ ಸಮಾಜಕ್ಕೆ ಬಲಿಷ್ಠ ಸಂದೇಶವೊಂದನ್ನು ನೀಡಿದೆ.
12 ನೇ ವಯಸ್ಸಿನಲ್ಲಿ ದೊರಕಿದ ಹಿಂದೂ ಅನಾಥ ಯುವಕನನ್ನು ಪೋಷಿಸಿದ ಮುಸ್ಲಿಂ ಕುಟುಂಬ ಇದೀಗ ಆ ಯುವಕನಿಗೆ ಹಿಂದೂ ಸಂಪ್ರದಾಯದಂತೆ ಮದುವ ಮಾಡಿಕೊಡುವ ಮೂಲಕ ಮಾದರಿಯಾಗಿ ನಿಂತಿದೆ. 12 ನೇ ವಯಸ್ಸಿನ ಅನಾಥ ಬಾಲಕ ಸಿಕ್ಕಿದ್ದರೂ ಆತನಿಗೆ ಹಿಂದೂ ಹಬ್ಬಗಳ ಆಚರಣೆಗೆ ಅವಕಾಶ ನೀಡಲಾಗಿದೆ. ಅಲ್ಲದೇ ಆತನಿಗೆ ಮುಸ್ಲಿಂ ಧರ್ಮದ ನಿಯಮಗಳನ್ನು ಹೇರದೆ ಸ್ವಾತಂತ್ರ್ಯ ನೀಡುವ ಮೂಲಕ ಮಾದರಿಯಾಗಿ ನಿಂತಿದೆ.
ಡೆಹ್ರಾಡೂನ್ ನ ಸಿಗ್ನಲ್ ಮಂಡಿ ನಿವಾಸಿ ಮೋಹಿನುದ್ದೀನ್ ಕುಟುಂಬ 15 ವರ್ಷಗಳ ಹಿಂದೆ ಹಿಂದು ಅನಾಥ ಯುವಕ ರಾಕೇಶ್ ರಸ್ತೋಗಿಯನ್ನು ರಕ್ಷಿಸಿದ್ದರು. ತಮ್ಮ ಮನೆಯಲ್ಲಿ ಯುವಕನಿಗೆ ಫೋಷಣೆ, ಪಾಲನೆ ನೀಡಿ ಇದೀಗ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟಿದ್ದಾರೆ. ಮೋಹಿನುದ್ದೀನ್ ದಂಪತಿ ಸಾರಥ್ಯದಲ್ಲಿ ರಾಕೇಶ್ ನ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿಸಿದ್ದಾರೆ.
‘ನನಗೆ ಆಶ್ರಯ ನೀಡಿದ ಮೋಹಿನುದ್ದೀನ್ ಹಿಂದೂ ಹಬ್ಬಗಳಾದ ದೀಪಾವಳಿ, ದಸರಾ ಸೇರಿ ಎಲ್ಲ ಹಬ್ಬಗಳನ್ನು ಆಚರಿಸುತ್ತಿದ್ದರು. ನನ್ನ ಬದುಕಿಗೆ ಹೊಸ ಆಯಾಮ ನೀಡಿದ್ದರು. ಮುಸ್ಲಿಮ ಧರ್ಮವನ್ನು ಹೇರಿಲ್ಲ ಎಂದು ಯುವಕ ರಾಕೇಶ್ ತಿಳಿಸಿದ್ದಾನೆ.
Leave A Reply